ಬೆಳಗಾವಿ: ಬೆಂಗಳೂರನ್ನು ಸಂಪೂರ್ಣವಾಗಿ ಹಾಳು ಮಾಡಿದವರೇ ಕಾಂಗ್ರೆಸ್ ನವರು. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ನ ಎಲ್ಲ ನಾಯಕರು ಪಿ ಎಚ್ ಡಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಬೆಳಗಾವಿ ವಿಮಾನ ನಿಲ್ದಾಣದ ಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ಅತಿಕ್ರಮಣ ಬರುವುದಕ್ಕೆ ರಾಜಕಾಲುವೆ ಮುಚ್ಚುವದಕ್ಕೆ ಮತ್ತು ರಾಜಕಾಲುವೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿರುವದಕ್ಕೆ ಕಾಂಗ್ರೆಸ್ ಕಾರಣ. ಹತ್ತು ಹಲವು ಭ್ರಷ್ಟಾಚಾರ ಅವರ ಕಾಲದಲ್ಲಿ ನಡೆದಿವೆ. ಈಗ ಅವುಗಳನ್ನು ಮುಚ್ಚಿಹಾಕಲು ಈ ರೀತಿಯ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಅವಿಭಾಜ್ಯಗಳನ್ನು ಅಂಗ. ಸಂವಿಧಾನಾತ್ಮಕ ವಾಗಿ ರಚನೆಯಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಭ್ರಷ್ಟಾಚಾರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಇದ್ದ ಎಲ್ಲ ಭ್ರಷ್ಟಾಚಾರ ಪ್ರಕರಣಗಳನ್ನು ಎ ಸಿ ಬಿ ಗೆ ಕೊಟ್ಟು ಮುಚ್ಚಿಹಾಕಿದರು ಎಂದು ಟೀಕಿಸಿದ ಮುಖ್ಯಮಂತ್ರಿಗಳು ಈಗ ಮತ್ತೆ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಮರು ಶಿಫಾರಸ್ಸು ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ಪಣಜಿ: ಪ್ರವಾಸಿಗರು ಪ್ರವಾಸೋದ್ಯಮ ಆನಂದಿಸುವುದರೊಂದಿಗೆ ಮುಂಜಾನೆ ಯೋಗ
ಪ್ರತಿಪಕ್ಷ ಕಾಂಗ್ರೆಸ್ ಪ್ರತಿಯೊಂದಕ್ಕೂ ಬಹಿರಂಗ ಚರ್ಚೆಗೆ ಬನ್ನಿವ ಎಂದು ಹೇಳುವದು ಹಾಸ್ಯಾಸ್ಪದವಾಗಿದೆ. ಈ ಹಿಂದೆ ಬೆಂಗಳೂರು ಅಧಿವೇಶನ ನಂತರ ಬೆಳಗಾವಿ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೇವೆ ಎಂದು ನೋಟೀಸ್ ಕೊಟ್ಟಿದ್ದರು. ಅಧಿವೇಶನಕ್ಕಿಂತ ದೊಡ್ಡ ಬಹಿರಂಗ ಸಭೆಯ ಅಗತ್ಯವಿದೆಯಾ. ಇದನ್ನು ಇಡೀ ರಾಜ್ಯದ ಜನರು ನೋಡುತ್ತಾರೆ. ಇಲ್ಲಿ ಎದುರು ಬದುರು ಚರ್ಚೆ ನಡೆಯುತ್ತದೆ. ಆದರೆ ನೋಟೀಸ್ ಕೊಟ್ಟಿದ್ದ ಕಾಂಗ್ರೆಸ್ ನವರು ಓಡಿಹೋದರು. ಅಧಿವೇಶನದಲ್ಲಿ ಚರ್ಚೆ ಮಾಡದೆ ಭಾಷಣಕ್ಕಾಗಿ ಈ ರೀತಿ ಮಾತನಾಡುವದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಸುಳ್ಳನ್ನು ಹೇಳುವದರಲ್ಲಿ ಕೀಳುಮಟ್ಟದ ಹೇಳಿಕೆ ಕೊಡುವದರಲ್ಲಿ ಕಾಂಗ್ರೆಸ್ ನವರು ನಿಸ್ಸೀಮರು. ಇದು ನಮ್ಮ ರಾಜ್ಯದ ಸಂಸ್ಕೃತಿಯ ಲ್ಲ. ನಾವು ನಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿರಬೇಕು ಎಂದು ಬೊಮ್ಮಾಯಿ ಹೇಳಿದರು.