Advertisement

ಸೇನಾ ಶಿಬಿರದ ಮೇಲೆ ಹಿಮಪಾತದ ಮರಣಮೃದಂಗ; ಸಾವಿನ ಸಂಖ್ಯೆ 21ಕ್ಕೆ

06:12 PM Jan 27, 2017 | Team Udayavani |

ಶ್ರೀನಗರ: ಕಾಶ್ಮೀರದ ಗುರೇಜ್‌ ವಲಯದಲ್ಲಿ ಭಾರಿ ಹಿಮಪಾತ ಶುಕ್ರವಾರವೂ ಮುಂದುವರಿದಿದ್ದು ಮೃತರ ಸಂಖ್ಯೆ 21ಕ್ಕೆ ಏರಿದೆ. ಗುರೇಜ್ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, 14 ಮಂದಿ ಹಿಮಪಾತದೊಳಗೆ ಸಮಾಧಿಯಾಗಿದ್ದಾರೆ.

Advertisement

ಸನ್ಮಾರ್ಗ್ ಪ್ರದೇಶದಲ್ಲಿ ಕಳೆದ 2 ದಿನಗಳಲ್ಲಿ ಸಂಭವಿಸಿದ ಹಿಮಪಾತದ ಮರಣಮೃದಂಗಕ್ಕೆ ಅಧಿಕಾರಿಯೊಬ್ಬರು ಸೇರಿದಂತೆ 14 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಈ ಹಿಮಪಾತದಲ್ಲಿ ನಮ್ಮ ಧೀರ ಯೋಧರು ಸಾವನ್ನಪ್ಪಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಕ್ಷಣಾ ವಕ್ತಾರ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

ಘಟನೆಯಲ್ಲಿ ಬಂಡಿಪೋರಾದಲ್ಲಿ ಮನೆ ಮೇಲೆ ಹಿಮಬಂಡೆ ಉರುಳಿ ಬಿದ್ದು ನಾಲ್ವರು ನಾಗರಿಕರು ಬಲಿಯಾಗಿದ್ದರೆ, ಕುಪ್ವಾರಾ ಮತ್ತು ಉರಿಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಯೋಧರು ಹಾಗೂ ನಾಗರಿಕರು ಸೇರಿದಂತೆ ಸಾವಿನ ಸಂಖ್ಯೆ 21ಕ್ಕೆ ಏರಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next