Advertisement

ಕೋವಿಡ್ 19 ಕಟ್ಟಿಹಾಕಲು ಪೌಚ್‌ ಬ್ರಹ್ಮಾಸ್ತ್ರ : ಜ|ನರವಾಣೆ ಎದೆ ಮೇಲೆ ಏರ್‌ ಡಾಕ್ಟರ್‌!

02:25 AM Sep 07, 2020 | Hari Prasad |

ಹೊಸದಿಲ್ಲಿ: ‘ಏರ್‌ ಡಾಕ್ಟರ್‌’! ಲಡಾಖ್‌ನ ಮುಂಚೂಣಿಯ ನೆಲೆಗಳಿಗೆ ಸೇನಾ ಪಡೆಗಳ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಭೇಟಿ ಕೊಟ್ಟಾಗ ಈ ಪದ ಅನೇಕರಿಗೆ ಕುತೂಹಲ ಹುಟ್ಟಿಸಿದೆ.

Advertisement

ಜ| ನರವಾಣೆ ಅವರ ಎದೆಯ ಮೇಲೆ ತೂಗಿದ್ದ ‘ಏರ್‌ ಡಾಕ್ಟರ್‌’ ಎಂಬ ಪುಟ್ಟ ಚೀಲ ಈಗ ಮನೆಮಾತು. ‘ಏರ್‌ ಡಾಕ್ಟರ್‌’ ಸೇನೆಯ ಹುದ್ದೆಯಲ್ಲ, ಪದವಿಯಲ್ಲ.

ಕೋವಿಡ್ 19 ನಿಂದಾಗಿ ವೈರಾಣುಗಳನ್ನು ಕಟ್ಟಿಹಾಕುವ ವಿಶಿಷ್ಟ ವೈಯಕ್ತಿಕ ರಕ್ಷಣ ಸಾಧನ. ಪೌಚ್‌ ಮಾದರಿಯ ‘ಏರ್‌ ಡಾಕ್ಟರ್‌’ ಜತೆಗಿದ್ದರೆ ಸೋಂಕುಗಳೆಲ್ಲ ದೂರ.

ಹುಟ್ಟಿದ್ದು ಜಪಾನ್‌ನಲ್ಲಿ
ಇನ್ ಫ್ಲ್ಯುಯೆಂಝಾ ಸೋಂಕಿನಿಂದ ನಲುಗಿದ್ದ ಜಪಾನ್‌ ವೈರಾಣು ಸೋಂಕುಗಳನ್ನು ಕಟ್ಟಿಹಾಕುವುದಕ್ಕಾಗಿ ಮೊದಲ ಬಾರಿಗೆ ‘ಏರ್‌ ಡಾಕ್ಟರ್‌’ ಆವಿಷ್ಕರಿ ಸಿತ್ತು. ಜ್ವರ, ಅಲರ್ಜಿ, ಎಚ್‌1ಎನ್‌1, ನ್ಯೂಮೋನಿಯಾ, ಟಿಬಿ, ಉಸಿರಾಟ ಸಂಬಂಧಿ ರೋಗಗಳಿಂದ ಬಚಾವಾಗಲು ಇದನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಪ್ರಸ್ತುತ ಎಲ್ಲೆಡೆ ಕೋವಿಡ್ 19 ಆರ್ಭಟ ಅಧಿಕವಿರುವುದರಿಂದ ‘ಏರ್‌ ಡಾಕ್ಟರ್‌’ ಜೀವರಕ್ಷಕವಾಗಿದೆ.


ಡಬ್ಲ್ಯುಎಚ್‌ಒ ಒಪ್ಪಿಗೆ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ‘ಏರ್‌ ಡಾಕ್ಟರ್‌’ ಪೌಚ್‌ ಬಳಕೆಯನ್ನು ಕಾನೂನುಬದ್ಧಗೊಳಿಸಿದೆ. ಆದರೆ ಇದರಿಂದ ಉಸಿರಾಟ ಸಂಬಂಧಿತ ಅಡ್ಡ ಪರಿಣಾಮಗಳೂ ಇವೆ. ಅಮೆರಿಕದಲ್ಲಿ ಆಕ್ಯುಪೇಶನಲ್‌ ಸೇಫ್ಟಿ ಮತ್ತು ಹಝಾರ್ಡ್‌ ಅಡ್ಮಿನಿಸ್ಟ್ರೇಶನ್‌ (ಒಎಸ್‌ಎಚ್‌ಎ) ಸಂಸ್ಥೆಯು ಕಚೇರಿ ಪ್ರದೇಶಗಳಲ್ಲಿ ಏರ್‌ ಡಾಕ್ಟರ್‌ನ ಬಳಕೆಗೆ ಮಾನದಂಡವನ್ನೇ ರೂಪಿಸಿದೆ. ಅಮೆರಿಕದ ಇಕೋಶೀಲ್ಡ್‌, ಜಪಾನಿನ ಕಿಯೂ ಜಾಚುಗಿಕು ಕಂಪೆನಿಗಳು ಗುಣಮಟ್ಟದ “ಏರ್‌ ಡಾಕ್ಟರ್‌’ ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಗಿಳಿಸಿದ್ದು, ಇವುಗಳ ಬೆಲೆ 1,500 ರೂ. ಆಸುಪಾಸಿನಲ್ಲಿದೆ.

Advertisement

ಏನಿದು ಏರ್‌ ಡಾಕ್ಟರ್‌?
ಜಪಾನೀ ವಿಜ್ಞಾನಿಗಳು ಆವಿಷ್ಕರಿಸಿದ, ಗಾಳಿ ಶುದ್ಧೀಕರಣದ ರಾಸಾಯನಿಕ ಪೌಚ್‌ ಇದು. ಸುತ್ತಲಿನ ವಾತಾವರಣವನ್ನು ಸೋಂಕು ಮುಕ್ತಗೊಳಿಸುತ್ತದೆ. ಸಾಂಕ್ರಾಮಿಕ ರೋಗಗಳ ಹಾವಳಿ ಸಮಯದಲ್ಲಿ ಈ ಪೌಚ್‌ ಬಳಕೆ ಹೆಚ್ಚು. ಪ್ರಸ್ತುತ ಕೋವಿಡ್ 19 ಕಾಲದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ಯಾರಿಗೆ ಸೂಕ್ತ?
ಅಧಿಕ ರಕ್ತದೊತ್ತಡ ಹೊಂದಿರುವವರು, ಮಧುಮೇಹಿಗಳು, ಹೃದ್ರೋಗಿಗಳು, ಕಿಮೋಥೆರಪಿಗೊಳಪಟ್ಟವರು, ಮಕ್ಕಳು, ಗರ್ಭಿಣಿಯರಿಗೆ ‘ಏರ್‌ ಡಾಕ್ಟರ್‌’ ಅನ್ನು ವೈದ್ಯರು ಸೂಚಿಸುತ್ತಿದ್ದರು. ಈಗ ಕೋವಿಡ್ 19 ದಿಂದ ಬಚಾವಾಗಲೂ ಬಹುತೇಕರು ಏರ್‌ ಡಾಕ್ಟರ್‌ ಮೊರೆ ಹೊಗುತ್ತಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ?
ಸೋಂಕು ನಿವಾರಣೆಗೆ ಬಳಸುವ ಕ್ಲೋರಿನ್‌ ಡೈ ಆಕ್ಸೈಡ್‌ ಅಂಶ ಹೊಂದಿರುವ ಈ ಪೌಚ್‌ ಮೇಲೆ ತೆಳು ಹೊದಿಕೆ ಇರುತ್ತದೆ. ಧರಿಸುವ ವೇಳೆ ಈ ಹೊದಿಕೆ ತೆಗೆದರೆ ಕ್ಲೋರಿನ್‌ ನಿರಂತರ ಬಿಡುಗಡೆಗೊಳ್ಳುತ್ತದೆ. ವ್ಯಕ್ತಿಯ ಸುತ್ತ 3 ಅಡಿಗಳವರೆಗೆ ಈ ರಾಸಾಯನಿಕ ಅಂಶದ ಪ್ರಭಾವವಿರುತ್ತದೆ. ಒಂದು ಪೌಚ್‌ ಅನ್ನು 30 ದಿನಗಳವರೆಗೆ ಬಳಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next