ಮುಂಬೈ: ಹಿರಿಯ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಅಪರೂಪದ ಸಂವೇದನಾ ನರ ಸಂವೇದನಾ ಶ್ರವಣ ದೋಷದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅಲ್ಕಾ ಯಾಗ್ನಿಕ್ ಅವರು ಎಲ್ಲರ ಬೆಂಬಲವನ್ನು ಕೋರಿದ್ದಾರೆ.
“ನನ್ನ ಎಲ್ಲಾ ಅಭಿಮಾನಿಗಳು, ಸ್ನೇಹಿತರು, ಅನುಯಾಯಿಗಳು ಮತ್ತು ಹಿತೈಷಿಗಳಿಗೆ, ಕೆಲವು ವಾರಗಳ ಹಿಂದೆ, ನಾನು ವಿಮಾನದಿಂದ ಹೊರನಡೆದಾಗ, ನನಗೆ ಏನೂ ಕೇಳುತ್ತಿಲ್ಲ ಎಂದು ಇದ್ದಕ್ಕಿದ್ದಂತೆ ಅನಿಸಿತು. ಇದಾಗಿ ಕೆಲವು ವಾರಗಳ ನಂತರ ಸ್ವಲ್ಪ ಧೈರ್ಯದಿಂದ, ನಾನು ಏಕೆ ಎಲ್ಲೂ ಕಾಣುತ್ತಿಲ್ಲ ಎಂದು ಕೇಳುತ್ತಿರುವ ನನ್ನ ಎಲ್ಲಾ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ನಾನು ಈಗ ನನ್ನ ಮೌನವಮುರಿಯಲು ಬಯಸುತ್ತೇನೆ” ಎಂದಿದ್ದಾರೆ.
“ವೈರಾಣುವಿನ ದಾಳಿಯ ಕಾರಣದಿಂದ ಅಪರೂಪದ ಸಂವೇದನಾ ನರಗಳ ಶ್ರವಣ ನಷ್ಟ ಎಂದು ವೈದ್ಯರು ತಿಳಿಸಿದ್ದಾರೆ… ಈ ಹಠಾತ್ ಹಿನ್ನಡೆಯ ಬಗ್ಗೆ ನನಗೆ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ದಯವಿಟ್ಟು ನಿಮ್ಮ ಪ್ರಾರ್ಥನೆ, ಹಾರೈಕೆಗಳು ನನ್ನೊಂದಿಗೆ ಇರಲಿ..” ಎಂದು ಅಲ್ಕಾ ಯಾಗ್ನಿಕ್ ಪೋಸ್ಟ್ ಮಾಡಿದ್ದಾರೆ.
ಇದರೊಂದಿಗೆ ಅಲ್ಕಾ ಅವರು ಜೋರಾದ ಶಬ್ದ ಮತ್ತು ಹೆಡ್ ಫೋನ್ ಗಳು ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ಗಮನ ಸೆಳೆದಿದ್ದಾರೆ.
58 ವರ್ಷ ಪ್ರಾಯದ ಅಲ್ಕಾ ಯಾಗ್ನಿಕ್ ಅವರು ಬಾಲಿವುಡ್ ನ ಪ್ರಮುಖ ಗಾಯಕಿಯರಲ್ಲಿ ಒಬ್ಬರು. ಇತ್ತೀಚೆಗೆ ಅವರು ಕ್ರ್ಯೂ ಮತ್ತು ಅಮರ್ ಸಿಂಗ್ ಚಮಿಕಾ ಚಿತ್ರಗಳಿಗೆ ಹಾಡಿದ್ದರು.