Advertisement
ಹಿರಿಯ ವರದಿಗಾರ ಮೊಹಮ್ಮದ್ ವಾಷಾಹ್ ಹಮಾಸ್‌ನ ಹಿರಿಯ ಕಮಾಂಡರ್ ಆಗಿ ಮೂನ್‌ಲೈಟಿಂಗ್(ನಿಯಮಿತ ಉದ್ಯೋಗದ ಜತೆಗೆ ರಹಸ್ಯವಾಗಿ ಇನ್ನೊಂದು ಉದ್ಯೋಗ ಮಾಡುವುದು) ಮಾಡುತ್ತಿದ್ದು, ಡ್ರೋನ್, ಗ್ರೆನೇಡ್ ಸೇರಿ ಹಲವು ಸೇನಾ ಉಪಕರಣಗಳ ತಯಾರಿಕೆಗೆ ನೆರವು ನೀಡಿದ್ದಾರೆ. ಅವರಿಂದ ವಶಪಡಿಸಿಕೊಳ್ಳಲಾದ ಲ್ಯಾಪ್‌ಟಾಪ್‌ನಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿ ಯುದ್ಧೋಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಫೋಟೋಗಳು ದೊರೆತಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಗಾಜಾ ಪಟ್ಟಿಯಲ್ಲಿ ಉಗ್ರರ ಒತ್ತೆಯಲ್ಲಿದ್ದ ಇಬ್ಬರನ್ನು ಇಸ್ರೇಲ್ ಸೇನೆ ಸೋಮವಾರ ರಕ್ಷಿಸಿದೆ. ಈ ಕಾರ್ಯಾಚರಣೆ ವೇಳೆ ನಡೆಸಿದ ವೈಮಾನಿಕ ದಾಳಿಯಲ್ಲಿ 50 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಇನ್ನೂ 100ರಷ್ಟು ಇಸ್ರೇಲಿಯರು ಉಗ್ರರ ಒತ್ತೆಯಲ್ಲಿದ್ದಾರೆ.