Advertisement
ಇದೀಗ ಬೆನ್ನುಬೆನ್ನಿಗೆ ಅವಳ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮೂರು ವರ್ಷದ ಹಿಂದೆ ಪ್ರಿಯತಮ ಖಾಸಗಿ ಕ್ಷಣಗಳ ಎಂಎಂಎಸ್ ಕ್ಲಿಪ್ಪಿಂಗ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಅಲೀಶಾಳ ದುರ್ದಿನಗಳು ಪ್ರಾರಂಭವಾಗಿದ್ದವು. ಇದನ್ನು ನೋಡಿ ತಾಯಿ ಮತ್ತು ಸಹೋದರ ಮನೆಯಿಂದ ಹೊರಗೆ ಹಾಕಿದ ಬಳಿಕ ಅಲೀಶಾ ನಿರ್ಗತಿಕಳಂತೆ ದಿಲ್ಲಿಯ ಬೀದಿ ಸುತ್ತುತ್ತಿದ್ದಳು. ದೇವಸ್ಥಾನ, ಮಸೀದಿ, ಸ್ನೇಹಿತರ ಮನೆಗಳೆಂದು ಸಿಕ್ಕಿದೆಡೆಗಳಲ್ಲಿ ಆಶ್ರಯಪಡೆದುಕೊಂಡಿದ್ದ ಅಲೀಶಾ ಮುಂಬಯಿಗೆ ಬಂದ ಬಳಿಕ ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಇದೀಗ ಮಾತೃ ಎಂಬ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಿಗೆ ದ ಡಾರ್ಕ್ ಸೈಡ್ ಅಫ್ ಲೈಫ್ : ಮುಂಬಯಿ ಸಿಟಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದರಲ್ಲಿ ನಿರ್ದೇಶಕ ಮಹೇಶ್ ಭಟ್ ಕೂಡಾ ಮುಖ್ಯ ಪಾತ್ರವೊಂದರಲ್ಲಿ ಕಾಣಿಸುತ್ತಿರುವುದೊಂದು ವಿಶೇಷತೆ. ಇಮ್ರಾನ್ ಹಶ್ಮಿಯ ಮೈ ಹಸºಂಡ್ಸ್ ವೈಫ್ ಮತ್ತು ಆಯಿನಾ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದ ಅಲೀಶಾ 2016ರ ಡೇರ್ ಯೂ ಚಿತ್ರದ ಬಳಿಕ ಚಿತ್ರರಂಗದಿಂದ ತುಸು ದೂರವಾಗಿದ್ದಳು. ಇಷ್ಟರ ತನಕ ಅಲೀಶಾಳಿಗೆ ಸಿಕ್ಕಿರುವುದೆಲ್ಲ ಡಾರ್ಕ್ ಪಾತ್ರಗಳು. ಅಂದರೆ, ವಾಸ್ತವಕ್ಕೆ ಹತ್ತಿರವಾಗಿರುವ ಹಸಿಹಸಿ ಪಾತ್ರಗಳು. ಇಂಥ ಪಾತ್ರಗಳೇ ತನಗಿಷ್ಟ ಎನ್ನುವ ಅಲೀಶಾ ಮಾತ್‌ೃ ಮತ್ತು ದ ಡಾರ್ಕ್ ಸೈಡ್ ಆಫ್ ಲೈಫ್ : ಮುಂಬಯಿ ಸಿಟಿಯಲ್ಲೂ ಅದೇ ಮಾದರಿಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾಳೆ. ಕಡೆಗೂ ಬದುಕಿನಲ್ಲೊಂದು ನೆಲೆ ಕಂಡುಕೊಂಡ ಖುಷಿಯಲ್ಲಿರುವ ಅಲೀಶಾ ಸದ್ಯದಲ್ಲೇ ತಮಿಳಿಗೂ ಹೋಗಲಿದ್ದಾಳಂತೆ. Advertisement
ಅಲೀಶಾವಾಸ್ಯಮ್
06:00 AM Oct 05, 2018 | |
Advertisement
Udayavani is now on Telegram. Click here to join our channel and stay updated with the latest news.