Advertisement

ಅಲ್ಜೀರಿಯಾ ಮಿಲಿಟರಿ ವಿಮಾನ ಪತನ; 257 ಮಂದಿ ಬಲಿ

02:23 PM Apr 11, 2018 | Team Udayavani |

ಅಲ್‌ಜೀರ್ಸ್‌: ಅಲ್ಜೀರಿಯಾದ ರಾಜಧಾನಿ ಅಲ್‌ಜೀರ್ಸ್‌ನ ಬೌಫಾರಿರ್ಕ್‌ ವಿಮಾನ ನಿಲ್ದಾಣದ ಬಳಿ ಮಿಲಿಟರಿ ವಿಮಾನವೊಂದು ಬುಧವಾರ ದುರಂತಕ್ಕೀಡಾಗಿದೆ.

Advertisement

ಘೋರ ದುರಂತದಲ್ಲಿ ಮಿಲಿಟರಿ  ಸಿಬಂದಿಗಳು ಸೇರಿದಂತೆ ಕನಿಷ್ಠ 257 ಮಂದಿ  ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. 

ಇಲ್ಯೂಸಿನ್‌ ಐಎಲ್‌ 76 ಹೆಸರಿನ ವಿಮಾನದಲ್ಲಿ 250 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಹುಲ್ಲುಗಾವಲಿನಲ್ಲಿ ಪತನವಾಗಿದೆ. ವಿಮಾನದ ಬಾಲ ತಾಳೆ ಮರವೊಂದಕ್ಕೆ ಸಿಲುಕಿಕೊಂಡಿರುವುದು ಫೋಟೋಗಳಲ್ಲಿ ಕಂಡು ಬಂದಿದೆ.ಸ್ಥಳದಲ್ಲಿ ದಟ್ಟ ಕಪ್ಪು ಧೂಮ ಆವರಿಸಿಕೊಂಡಿದೆ. 

ಸ್ಥಳಕ್ಕೆ ರಕ್ಷಣಾ ತಂಡಗಳು ಸೇನಾ ಹೆಲಿಕ್ಯಾಪ್ಟರ್‌ಗಳು,15 ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ದೌಡಾಯಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next