Advertisement

ಮಾಂಟೆ ಕಾರ್ಲೊ ಮಾಸ್ಟರ್ : ಜ್ವೆರೇವ್‌ ಕ್ವಾರ್ಟರ್‌ ಫೈನಲ್‌ ಪ್ರವೇಶ

06:25 AM Apr 20, 2018 | Team Udayavani |

ಮಾಂಟೆ ಕಾರ್ಲೊ: ಜರ್ಮನಿಯ 3ನೇ ಶ್ರೇಯಾಂಕಿತ ಆಟಗಾರ ಅಲೆಕ್ಸಾಂಡರ್‌ ಜ್ವೆರೇವ್‌ “ಮಾಂಟೆ ಕಾರ್ಲೊ ಮಾಸ್ಟರ್’ ಟೆನಿಸ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇಲ್ಲಿ ಸಹೋದರ ಮಿಶಾ ಜ್ವೆರೇವ್‌ ಜತೆ ಕಾದಾಡುವ ಸಾಧ್ಯತೆಯೊಂದನ್ನು ತೆರೆದಿರಿಸಿದ್ದಾರೆ.

Advertisement

ಗುರುವಾರದ ಪಂದ್ಯದಲ್ಲಿ ಅಲೆಕ್ಸಾಂಡರ್‌ ಜ್ವೆರೇವ್‌ ತಮ್ಮದೇ ದೇಶದ ಜಾನ್‌ ಲೆನ್ನಾರ್ಡ್‌ ಸ್ಟ್ರಫ್ ಅವರನ್ನು 6-4, 4-6, 6-4 ಅಂತರದಿಂದ ಮಣಿಸಿದರು. ಮಿಶಾ ಜ್ವೆರೇವ್‌-ರಿಚರ್ಡ್‌ ಗಾಸ್ಕ್ವೆಟ್‌ ಇನ್ನೊಂದು ಪಂದ್ಯದಲ್ಲಿ ಸೆಣಸಲಿದ್ದು, ಇಲ್ಲಿ ಗೆದ್ದವರನ್ನು ಅಲೆಕ್ಸಾಂಡರ್‌ ಜ್ವೆರೇವ್‌ ಎದುರಿಸಲಿದ್ದಾರೆ.”ನನ್ನ ಅಣ್ಣನೇ ಗೆಲ್ಲಲಿ. ನಾಳೆಯ ದಿನ ಅದ್ಭುತವಾಗಿ ಗೋಚರಿಸಲಿ’ ಎಂಬುದಾಗಿ ಅಲೆಕ್ಸಾಂಡರ್‌ ಜ್ವೆರೇವ್‌ ಪ್ರತಿಕ್ರಿಯಿಸಿದ್ದಾರೆ.

ಬೆಲ್ಜಿಯಂನ 6ನೇ ಶ್ರೇಯಾಂಕದ ಟೆನಿಸಿಗ ಡೇವಿಡ್‌ ಗೊಫಿನ್‌ ಸ್ಪೇನಿನ ರಾಬರ್ಟೊ ಬಟಿಸ್ಟ ಅಗುಟ್‌ ಅವರನ್ನು 6-4, 7-5 ಅಂತರದಿಂದ ಸೋಲಿಸಿ ಮುನ್ನಡೆದಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಗ್ರಿಗರ್‌ ಡಿಮಿಟ್ರೋವ್‌ ಅಥವಾ ಫಿಲಿಪ್‌ ಕೋಹ್ಲಶ್ರೀಬರ್‌ ವಿರುದ್ಧ ಸೆಣಸುವರು.

Advertisement

Udayavani is now on Telegram. Click here to join our channel and stay updated with the latest news.

Next