Advertisement

ಜ್ವೆರೇವ್‌ ವಿರುದ್ಧ ಸೆಣಸುವ ಅಲೆಕ್ಸ್‌ ಡಿ ಮಿನೌರ್‌

06:20 AM Aug 06, 2018 | Team Udayavani |

ವಾಷಿಂಗ್ಟನ್‌: ಆಸ್ಟ್ರೇಲಿಯದ 19ರ ಹರೆಯದ ಯುವ ಟೆನಿಸಿಗ ಅಲೆಕ್ಸ್‌ ಡಿ ಮಿನೌರ್‌ ವಾಷಿಂಗ್ಟನ್‌ ಓಪನ್‌ ಪಂದ್ಯಾವಳಿಯ ಫೈನಲ್‌ ತಲುಪಿದ್ದಾರೆ. ಇಲ್ಲಿ ಹಾಲಿ ಚಾಂಪಿಯನ್‌ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ ಸೆಣಸಲಿದ್ದಾರೆ.

Advertisement

ಸೆಮಿಫೈನಲ್‌ನಲ್ಲಿ ರಶ್ಯದ ಮತ್ತೋರ್ವ ಯುವ ಆಟಗಾರ ಆಂದ್ರೆಯ್‌ ರುಬ್ಲೆವ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಮಿನೌರ್‌ 5-7, 7-6 (8-6), 6-4 ಅಂತರದ ಜಯ ಸಾಧಿಸಿದರು. 2 ಗಂಟೆ, 52 ನಿಮಿಷಗಳ ಕಾಲ ಇವರ ಸ್ಪರ್ಧೆ ಸಾಗಿತು. ಇನ್ನೊಂದು ಉಪಾಂತ್ಯದಲ್ಲಿ ಜ್ವೆರೇವ್‌ 6-2, 6-4ರಿಂದ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಾಸ್‌ ಅವರನ್ನು ಮಣಿಸಿದರು.

ಇದು 2007ರ ಬಳಿಕ ಕಿರಿಯರಿಬ್ಬರ ನಡುವಿನ ಎಟಿಪಿ ಫೈನಲ್‌ ದಾಖಲೆಯಾಗಿದೆ. ಜ್ವೆರೇವ್‌ (21) ಹಾಗೂ ಮಿನೌರ್‌ (19) ಅವರ ಒಟ್ಟು ವಯಸ್ಸು 40 ವರ್ಷಗಳಾಗಿದ್ದು, 2007ರ ಇಂಡಿಯಾನ ವೆಲ್ಸ್‌ ಫೈನಲ್‌ನಲ್ಲಿ ಸೆಣಸಿದ ರಫೆಲ್‌ ನಡಾಲ್‌ (20) ಮತ್ತು ನೊವಾಕ್‌ ಜೊಕೋವಿಕ್‌ (19) ಅವರ ಒಟ್ಟು ವಯಸ್ಸು ಕೂಡ ಇಷ್ಟೇ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next