Advertisement
ವಿಶ್ವಕಪ್ ನ ದ್ವಿತೀಯ ಉಪಾಂತ್ಯ ಪಂದ್ಯದಲ್ಲಿ ಆಸೀಸ್ ವಿಕೆಟ್ ಕೀಪರ್ ಬ್ಯಾಟ್ಸಮನ್ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ನಡೆಸುತ್ತಿದ್ದರು. ಪಂದ್ಯದ ಎಂಟನೇ ಓವರ್, ಆರ್ಚರ್ ಎಸೆದ ಕೊನೆಯ ಎಸೆತ 139 ಕಿ.ಮೀ ವೇಗದಲ್ಲಿ ಬಂದಿತ್ತು. ಮುಖಕ್ಕೆ ನೇರವಾಗಿ ಬಂದ ಬೌನ್ಸರ್ ಅನ್ನು ತಡೆಯಲು ಹೋದ ಕ್ಯಾರಿಗೆ ಅದು ಸಾಧ್ಯವಾಗಿಲ್ಲ. ಚೆಂಡು ನೇರವಾಗಿ ಕ್ಯಾರಿ ಗಲ್ಲಕ್ಕೆ ಬಡಿದು ಹೆಲ್ಮೆಟ್ ಅನ್ನು ಹಾರಿಸಿ ಮುಂದೆ ಹೋಯಿತು. ಗಲ್ಲದಿಂದ ಒಸರಿದ ರಕ್ತ ಮೈದಾನಕ್ಕೆ ಹರಿದಿತ್ತು.
ಅಲೆಕ್ಸ್ ಕ್ಯಾರಿ ಮುಖಕ್ಕೆ ಚೆಂಡು ಬಡಿದಾಗ ಎಲ್ಲರಿಗೂ ಒಮ್ಮೆ ಫಿಲಿಪ್ಸ್ ಹ್ಯೂಸ್ ಪ್ರಕರಣ ನೆನಪು ಬಂದಿತ್ತು. ಆದರೆ ಅದೃಷ್ಟಶವಾತ್ ಹೆಚ್ಚಿನ ಗಾಯವಾಗದೆ ಕ್ಯಾರಿ ಮತ್ತೆ ಆಡಲಿಳಿದಾಗ ಕ್ರಿಕೆಟ್ ಜಗತ್ತು ನಿರಾಳವಾಯಿತು.