5.30ರ ಸುಮಾರಿಗೆ ಚಿರತೆ ಬಾತ್‌ರೂಮ್‌ನ ಒಳಗಿಂದ ಘರ್ಜಿಸಲು ಆರಂಭಿಸಿದಾಗ ಅರಣ್ಯ ಇಲಾಖೆಗೆ, ಸುತ್ತಮುತ್ತಲಿನ ಜನರಿಗೆ ಮಾಹಿತಿ ನೀಡಿದರು.
Advertisement
ಮುಂಜಾನೆ ವಿಷಯ ತಿಳಿದ ತತ್‌ಕ್ಷಣ ಅರಣ್ಯ ಇಲಾಖೆಯ ಅಧಿಕಾರಿ ಕ್ಲಿಫರ್ಡ್ ಲೋಬೊ, ಸಿಬಂದಿ ತಂಡವು ಸ್ಥಳೀಯರ ಸಹಕಾರದಿಂದ ಚಿರತೆ ಇದ್ದ ರೂಮಿನ ಬಾಗಿಲಿನ ಮುಂಭಾಗಕ್ಕೆ ಬೋನನ್ನು ಅಳವಡಿಸಿ ಕೋಣೆಯ ಬಾಗಿಲು ತೆರೆದಾಗ ಚಿರತೆಯು ಬೋನಿನೊಳಕ್ಕೆ ಬಂದಿದೆ. ಹೀಗೆ ಚಿರತೆಯನ್ನು ಬೋನಿನಲ್ಲಿ ಬಂಧಿಸುವಲ್ಲಿ ಅರಣ್ಯ ಇಲಾಖೆಯವರು ಸಫಲರಾಗಿದ್ದಾರೆ. 2ರಿಂದ 3 ವರ್ಷ ಪ್ರಾಯದ ಗಂಡುಚಿರತೆ ಅದಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ತಂತಿಗೆ ಸಿಲುಕಿದ ಇನ್ನೊಂದು ಚಿರತೆ ಮಂದಾರ್ತಿ ಕಾಡೂರಿನ ಗದ್ದೆ ಬದಿಯಲ್ಲಿ ತಂತಿ ಬೇಲಿಗೆ ಸುಮಾರು 2 ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಸಿಲುಕಿದ್ದು, ಸ್ಥಳೀಯರ ಮಾಹಿತಿಯಂತೆ ಮಂಗಳವಾರ ಬೆಳಗ್ಗೆ ಅಲ್ಲಿಗೆ ತೆರಳಿದ ಅರಣ್ಯ ಇಲಾಖೆಯ ತಂಡ ಚಿರತೆಗೆ ಅರಿವಳಿಕೆ ನೀಡಿ ತಂತಿ ಬೇಲಿಯಿಂದ ಬಿಡಿಸಿ ಬೋನಿಗೆ ಹಾಕುವಲ್ಲಿ ಯಶಸ್ವಿಯಾದರು. ರಕ್ಷಣೆ ಮಾಡಿದ ಎರಡೂ ಚಿರತೆಗಳನ್ನು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.