Advertisement
ಈ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಒಟ್ಟು 9 ಝೀಕಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಪ್ರಕರಣಗಳಲ್ಲಿ 6 ಮಂದಿ ರಾಜಧಾನಿಯ ಜಿಗಣಿಯವರೇ ಇದ್ದು, ಮೂವರು ಶಿವಮೊಗ್ಗದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕೂಡ ಸ್ಪಷ್ಟನೆ ಪಡಿಸಿದ್ದಾರೆ.
ಝೀಕಾ ಸೋಂಕು ದೃಢಪಟ್ಟವರಲ್ಲಿ ಜಿಗಣಿಯ ಗರ್ಭಿಣಿಯೂ ಇದ್ದಾರೆ. ಈಗಾಗಲೇ ಅವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದರು.
Related Articles
ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕ ಶೀಘ್ರ ಸಜ್ಜು
ವಿದೇಶಗಳಿಂದ ವಿಮಾನ ನಿಲ್ದಾಣ ಹಾಗೂ ಸಮುದ್ರದ ಬಂದರುಗಳ ಮೂಲಕ ರಾಜ್ಯಕ್ಕೆ ಪ್ರವೇಶ ಪಡೆಯುವವರಲ್ಲಿ ಮಂಕಿ ಪಾಕ್ಸ್ ಲಕ್ಷಣಗಳಿದ್ದರೆ ತತ್‌ಕ್ಷಣವೇ ತಪಾಸಣೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಮೌಖಿಕ ಆದೇಶ ನೀಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Advertisement
ವಿಕಾಸಸೌಧದಲ್ಲಿ ಮಂಕಿ ಪಾಕ್ಸ್ ಸಂಬಂಧ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮಾತನಾಡಿ, ಮಂಕಿಪಾಕ್ಸ್ ಕುರಿತು ಕೇಂದ್ರದಿಂದ ನಿಗದಿತ ಮಾರ್ಗಸೂಚಿ ಬಂದಿಲ್ಲ. ರಾಜ್ಯ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕ ಸಜ್ಜುಗೊಳಿಸಲಾಗುತ್ತದೆ ಎಂದರು. ಸೋಂಕು ಎದುರಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗುತ್ತದೆ. ಜನರು ಭಯಪಡುವ ಅಗತ್ಯವಿಲ್ಲ ಎಂದರು.