Advertisement

ಎನ್ ಪಿ ಎಸ್ ಹೂಡಿಕೆದಾರರಿಗೆ ಪಿ ಎಫ್ ಆರ್ ಡಿ ಎ ನಿಂದ ಮಹತ್ತರವಾದ ಪ್ರಕಟಣೆ ..!?

01:23 PM Apr 06, 2021 | Team Udayavani |

ನವ ದೆಹಲಿ :  ಪೆನ್ಷನ್ ಫಂಡ್ ರೆಗ್ಯುಲೆಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA), ನ್ಯಾಷನಲ್ ಪೆನ್ಷನ್ ಸಿಸ್ಟಂ(ಎನ್ ಪಿ ಎಸ್) ನಲ್ಲಿ ಪೆನ್ಷನ್ ಫಂಡ್ ಗಳ ಮೂಲಕ ಚಾರ್ಜ್ ಮಾಡಲಾಗುವ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಶುಲ್ಕದಲ್ಲಿ ಏರಿಕೆ ಮಾಡಿದೆ. ಈ ಶುಲ್ಕ ಏರಿಕೆ ಏಪ್ರಿಲ್ 1, 2021ರಿಂದ ಜಾರಿಗೆ ಬಂದಿದೆ.

Advertisement

ಮೊದಲು ಒಟ್ಟು ಅಸೆಟ್ ನ ಶೇಕಡಾ 0.01ರಷ್ಟಿದ್ದ ಶುಲ್ಕ ಇದೀಗ ಏರಿಕೆಯಾಗಿದೆ. ಆದರೆ ಅದರ ಗಡಿ ಪೆನ್ಷನ್ ಫಂಡ್ ನ ಟೋಟಲ್ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ ನ ಶೇಕಡಾ 0.09 ರಷ್ಟು ಇಡಲಾಗುವುದು ಮತ್ತು ಇದು ಪೆನ್ಷನ್ ಫಂಡ್ ನ ಒಟ್ಟು ಅಸೆಟ್ ನ ಅಂಡರ್ ಮ್ಯಾನೇಜ್ಮೆಂಟ್ ಮೇಲೆ ಆಧಾರಿತವಾಗಿರಲಿದೆ.

 ಓದಿ : ಕಸ ಎಂದು ಎಸೆಯಬೇಡಿ : ಈರುಳ್ಳಿ ಸಿಪ್ಪೆಯಲ್ಲಿದೆ ಆರೋಗ್ಯದ ಗುಟ್ಟು

ಫಂಡ್ಸ್ ಗೆ ತಿದ್ದುಪಡಿ ಮಾಡಲಾಗಿರುವ ರಚನೆಗಳ ಅಡಿ  ಈ ಎ ಎಮ್ ಯು ಮ್ಯಾನೇಜ್ಮೆಂಟ್ ಶುಲ್ಕ ವಿವಿಧ ಸ್ಲ್ಯಾಬ್ ಅನ್ವಯಿಸಲಾಗುತ್ತದೆ. ಈ ಪ್ರಕಾರ 10 ಸಾವಿರ ಕೋಟಿ ರೂ.ವರೆಗಿನ ಎ ಎಮ್ ಯು(Asset Under Management) ಗಳಿಗೆ ಗರಿಷ್ಟ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಶುಲ್ಕ ಶೇ.0.09ರಷ್ಟು ಆಗಲಿದೆ.

10,001 –  50,000 ಕೋಟಿ ರೂ.ಗಳ ವರೆಗಿನ ಶುಲ್ಕ ಶೇ.0.06ಕ್ಕೆ ಸೀಮಿತವಾಗಲಿದೆ.   50,001 – 1,50,000 ಕೋಟಿ ರೂ.ಗಳ ವರೆಗಿನ ಎ ಎಮ್ ಯು ಗಳಿಗೆ ಶೇ.0.05ರಷ್ಟಿರಲಿದ್ದರೆ, 1,50,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಎ ಎಮ್ ಯು ಗಳಿಗೆ ಇದು ಶೇ.0.04 ರಷ್ಟು ಇರಲಿದೆ.

Advertisement

ಚಂದಾದಾರರಿಗೆ ಕಳುಹಿಸಲಾಗಿರುವ ಅಧಿಸೂಚನೆಯ ಪ್ರಕಾರ, ನೂತನ ಸ್ಲ್ಯಾಬ್ ಆಧಾರಿತ ಸಂರಚನೆ ಮಾರ್ಚ್ 30, 2021ಕ್ಕೆ ಪಿ ಎಫ್ ಆರ್ ಡಿ ಎಯ ನೊಂದಣಿಯ ಹೊಸ ಸರ್ಟಿಫಿಕೆಟ್ ಗಳಿಗೆ ಅನ್ವಯಿಸಲಿದೆ.

ಪೆನ್ಷನ್ ಫಂಡ್ ರೆಗ್ಯುಲೆಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA), ನ್ಯಾಷನಲ್ ಪೆನ್ಷನ್ ಸಿಸ್ಟಂ ನಲ್ಲಿ ಪೆನ್ಷನ್ ಫಂಡ್ ಗಳ ಮೂಲಕ ಚಾರ್ಜ್ ಮಾಡಲಾಗುವ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಶುಲ್ಕದಲ್ಲಿ  ಏರಿಕೆ ಮಾಡಿದೆ.

 ಓದಿ : ಉಡುಪಿ: ಮನೆ ಮುಂಭಾಗ ನಿಲ್ಲಿಸಿರುವ ವಾಹನಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

Advertisement

Udayavani is now on Telegram. Click here to join our channel and stay updated with the latest news.

Next