Advertisement

ಲಸಿಕೆ ಸ್ಲಾಟ್‌ ಪಡೆಯಲು ಅಲರ್ಟ್‌ ಮೆಸೇಜ್‌ ಪಡೆಯಿರಿ

02:19 AM May 14, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಲಸಿಕೆಗಾಗಿ ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿಗೆ ಇಂಟರ್‌ನೆಟ್‌ ಲಭ್ಯವಿಲ್ಲದ ಸ್ಥಳದಲ್ಲಿ ಅಡಚಣೆ ಉಂಟಾಗುತ್ತಿದೆ. ಅದಕ್ಕಾಗಿ ಚೆನ್ನೈಯಲ್ಲಿ ಬ್ಯುಸಿನೆಸ್‌ ಅನಾಲಿಸ್ಟ್‌ ವೃತ್ತಿಯಲ್ಲಿರುವ ಬ್ರೆಟಿ ಥಾಮಸ್‌ (35) ಎಂಬುವರು ಲಸಿಕೆ ಹಾಕಿಸಲು ಸ್ಲಾಟ್‌ಗಳು ಯಾವಾಗ ಲಭ್ಯವಾಗುತ್ತವೆ ಎಂಬ ಬಗ್ಗೆ ಹೊಸ ತಂತ್ರಾಂಶ ಕಂಡುಹಿಡಿದಿದ್ದಾರೆ.

Advertisement

ಅದಕ್ಕೆ ಟೆಲಿಗ್ರಾಂ ಮೂಲಕ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಸುಮಾರು 4 ಲಕ್ಷ ಮಂದಿ ಸದಸ್ಯರು ಈಗ ಇದ್ದಾರೆ. “ಹೆಚ್ಚಿನ ನಗರ ಮತ್ತು ಪಟ್ಟಣಗಳನ್ನು ಕೇಂದ್ರೀಕರಿಸಿ ಈ ವ್ಯವಸ್ಥೆ ರೂಪಿಸಿದ್ದೇನೆ. ಕೋವಿನ್‌ ವೆಬ್‌ಸೈಟ್‌ನಲ್ಲಿ ಲಸಿಕೆಯ ಸ್ಲಾಟ್‌ ಮುಕ್ತವಾಗುತ್ತಿ ದ್ದಂತೆ ಸದಸ್ಯರಿಗೆ ಅಲರ್ಟ್‌ ಮೆಸೇಜ್‌ ರವಾನೆಯಾಗುತ್ತದೆ. ಹೀಗಾಗಿ ಇಂಟರ್‌ನೆಟ್‌ ವ್ಯವಸ್ಥೆ ಇರುವವರು ಅಂಥವರಿಗೆ ನೆರವು ನೀಡಬೇಕು’ ಎಂದು “ಎಎಫ್ಪಿ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಆದರೆ ದೇಶದ ಇತರ ಸ್ಥಳಗಳಲ್ಲಿ ಇಂಟರ್‌ನೆಟ್‌ ಲಭ್ಯವಿಲ್ಲದ, ಸ್ಮಾರ್ಟ್‌ಫೋನ್‌ ಬಳಕೆ ಅರಿವು ಇಲ್ಲದವರಿಗೆ ನೋಂದಣಿಗೆ ಅಡ್ಡಿಯಾಗುತ್ತಿರುವುದರ ಬಗ್ಗೆ ಸುದ್ದಿಸಂಸ್ಥೆ ವರದಿ ಮಾಡಿದೆ. ಕೇಂದ್ರ ಸರಕಾರ ಮೇ 1ರಿಂದ 18-44 ವರ್ಷ ವಯೋಮಿತಿ ಯವರಿಗೂ ಲಸಿಕೆ ನೀಡುವ ಬಗ್ಗೆ ಘೋಷಣೆ ಮಾಡಿತು.

ಆದರೆ ವಿವಿಧ ರಾಜ್ಯಗಳಲ್ಲಿ ದಾಸ್ತಾನು ಕೊರತೆಯೂ ಎದುರಾಯಿತು. ಹೀಗಾಗಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ 18-44 ವರ್ಷ ವಯೋಮಿತಿ ಯವರಿಗೆ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

ಈವರೆಗೆ ದೇಶದಲ್ಲಿ, ಶೇ. 3ರಷ್ಟು ಜನರಿಗೆ ಲಸಿಕೆ ಪೂರ್ಣಪ್ರಮಾಣದಲ್ಲಿ ಸಿಕ್ಕಿದೆ. ಇದಕ್ಕೆ ಹೆಚ್ಚುವರಿಯಾಗಿ ಶೇ. 10.6ರಷ್ಟು ಜನರು ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next