Advertisement
ಹೊಸ ವರ್ಷಾಚರಣೆಗೆ ಬೆಂಗಳೂರು, ಮಂಗಳೂರು ಸಹಿತ ರಾಜ್ಯದ ಪ್ರಮುಖ ನಗರಗಳಲ್ಲಿ ಕೋಟ್ಯಂತರ ರೂ. ವಹಿ ವಾಟು ನಡೆಸಲು ಡ್ರಗ್ ಪೆಡ್ಲರ್‌ಗಳು ಮುಂದಾಗುತ್ತಿರುವುದು ಹಾಗೂ ಆನ್ ಲೈನ್ ಮೂಲಕ ಆರ್ಡರ್ ಪಡೆಯು ತ್ತಿರುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
Related Articles
Advertisement
ಕಳ್ಳ ಮಾರ್ಗ ಬೆಂಗಳೂರು ಸಹಿತ ರಾಜ್ಯದ ಪ್ರಮುಖ ನಗರಗಳಿಗೆ ಕಳ್ಳ ಮಾರ್ಗದ ಮೂಲಕ ಡ್ರಗ್ಸ್ ಪ್ರವೇಶವಾಗುತ್ತಿದೆ. ವಿಮಾನ, ಹಡಗುಗಳ ಮೂಲಕ ಎಲ್‌ಎಸ್‌ಡಿ, ಎಂಡಿಎಂಎ, ಎಲ್‌ಎಸ್‌ಡಿ ಸ್ಟಿಪ್ಸ್, ಎಕ್ಸ್‌ಟೆಸ್ಸಿ, ಬ್ರೌನ್ ಶುಗರ್, ಕೊಕೇನ್, ಹ್ಯಾಶಿಶ್, ಚರಸ್‌ಗಳು ದೊಡ್ಡ ಪ್ರಮಾಣದಲ್ಲಿ ಇರಾನ್ ದೇಶಕ್ಕೆ ಬಂದು, ಅಲ್ಲಿಂದ ಹಡಗಿನಲ್ಲಿ ಕಳ್ಳಸಾಗಾಣಿಕೆ ಮೂಲಕ ಕೊಚ್ಚಿ, ಗೋವಾ, ಚೆನ್ನೈ, ಮುಂಬಯಿಗೆ ತಲುಪಿ ರಾಜ್ಯಕ್ಕೆ ರವಾನೆಯಾಗುತ್ತಿದೆ. ಎನ್‌ಸಿಬಿ ಅಧಿಕಾರಿಗಳ ಕಣ್ಣು ತಪ್ಪಿಸಿ ಡಾರ್ಕ್‌ವೆಬ್‌ನಟಾರ್ ಬ್ರೋಸರ್ಸ್, ಡ್ರಿಯೇಡ್ ವೆಬ್ ಸೈಟ್, ಕೊರಿಯರ್ ಮೂಲಕ ತಲುಪಿ ಸುವ ಜಾಲವೇ ರಾಜ್ಯದಲ್ಲಿದೆ.
ಒಡಿಶಾ, ಬಾಂಗ್ಲಾದೇಶ, ಆಂಧ್ರಪ್ರದೇಶ ಕರ್ನೂಲ್ , ಅನಂತಪುರ, ವಿಶಾಖಪಟ್ಟಣ, ತಮಿಳುನಾಡಿನ ಕೃಷ್ಣಗಿರಿ, ಗೋವಾದಿಂದ ಸ್ಥಳೀಯ ಗಾಂಜಾ, ಅಫೀಮು ಬರುವ ಸುಳಿವು ಸಿಕ್ಕಿದೆ.
ವಿದ್ಯಾರ್ಥಿಗಳು ಹೊಸ ವರ್ಷಾಚರಣೆಗೆ ವೆಬ್‌ಸೈಟ್‌ಗಳು, ವಾಟ್ಸ್‌ಆ್ಯಪ್, ಫೇಸ್‌ಬುಕ್ ಗ್ರೂಪ್, ಟೆಲಿಗ್ರಾಮ್, ಇನ್‌ಸ್ಟಾ ಗ್ರಾಂನಲ್ಲಿ ಗ್ರೂಪ್ ಸೃಷ್ಟಿಸಿ ಇದರಲ್ಲಿರುವ ಪೆಡ್ಲರ್‌ಗಳನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರನ್ನು ಹೆಡೆಮುರಿ ಕಟ್ಟುವ ಕಾರ್ಯಾಚರಣೆ ಬೆಂಗಳೂರಿನಲ್ಲಿ ಶನಿವಾರದಿಂದಲೇ ಶುರುವಾಗಿದ್ದು, ಕೇರಳ ಮೂಲದ ಶಬೀರ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಎರಡು ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಮತ್ತೂಂದು ಪ್ರಕರಣದಲ್ಲಿ ಹೊಸ ವರ್ಷ ಮತ್ತು ಕ್ರಿಸ್ಮಸ್ ಹಬ್ಬ ಹಿನ್ನೆಲೆಯಲ್ಲಿ ಮಾದಕ ವಸ್ತುಗಳನ್ನು ಸಂಗ್ರಹಿಸಿ, ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ಆರೋಪದಲ್ಲಿ ಒಡಿಶಾದ ಇಬ್ಬರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 35 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಹೊಸ ವರ್ಷಾಚರಣೆ ವೇಳೆ ಡ್ರಗ್ಸ್ ಸೇವಿಸುವವರ ವಿರುದ್ಧ ಪೊಲೀಸರು ಎಲ್ಲೆಡೆ ನಿಗಾ ಇಡಲಿದ್ದಾರೆ. ಕಾನೂನು ಉಲ್ಲಂ ಸದೆ ಹೊಸ ವರ್ಷ ಆಚರಿಸಿ. ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ.-ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ. ಡ್ಯಾನ್ಸ್ ಬಾರ್‌ಗಳೇ ಡ್ರಗ್ಸ್ ಅಡ್ಡೆ
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರಮುಖ ಡ್ಯಾನ್ಸ್‌ಬಾರ್‌ಗಳು, ಪಬ್‌ಗಳು, ಬಾನೆತ್ತರದ ಅಪಾರ್ಟ್‌ಮೆಂಟ್‌ಗಳು, ಪಂಚತಾರಾ ಹೊಟೇಲ್‌ಗಳ ರೂಂಗಳು, ನಗರದ ಹೊರ ವಲಯದ ನಿರ್ಜನ ಪ್ರದೇಶಗಳೇ ಡ್ರಗ್ಸ್ ಸೇವನೆಯ ಅಡ್ಡೆಯಾಗಿದೆ. -ಅವಿನಾಶ್ ಮೂಡಂಬಿಕಾನ