Advertisement

ಗೂಗಲ್ ನ ಈ ಸೇವೆಗೆ ಜೂನ್ 1 ರಿಂದ ಶುಲ್ಕ ಪಾವತಿಸಬೇಕು..! ಇಲ್ಲಿದೆ ಮಾಹಿತಿ  

03:29 PM May 11, 2021 | Team Udayavani |

ನವ ದೆಹಲಿ : ಈಗ ಎಲ್ಲದಕ್ಕೂ ಗೂಗಲ್ ನನ್ನು ಆಶ್ರಯಿಸಿಕೊಂಡಿರುವ ಕಾಲ. ಇಂಟರ್ ನೆಟ್ ನನ್ನು  ಬಳಸಿಕೊಳ್ಳಬೇಕೆಂದರೇ ಗೂಗಲ್ ನನ್ನು ಪ್ರವೇಸಿಸಲೇ ಬೇಕು. ಜಗತ್ತೇ ಒಂದು ಹಳ್ಳಿ ಎಂದಾಗುತ್ತಿರುವ ಕಾಲಘಟ್ಟದಲ್ಲಿ ಅಂಗೈಯೊಳಗೆ ಇಂದು ಗೂಗಲ್ ಮೂಲಕ ನಾವು ಎಲ್ಲವನ್ನೂ ತಿಳಿದುಕೊಳ್ಳಬಹುದಾಗಿದೆ.

Advertisement

ಸರ್ಚ್ ಇಂಜಿನ್ ಗೂಗಲ್ ಸಂಸ್ಥೆ ಈಗ ತನ್ನ ಬಳಕೆದಾರರಿಗೆ ಈಗ ದೊಡ್ಡ ಆಘಾತವೊಂದನ್ನು ನೀಡಿದೆ. ಹೌದು, ಗೂಗಲ್ ನ ಸೇವೆಗಳಿಗಾಗಿ ಈಗ ಬಳಕೆದಾರರು ಶುಲ್ಕವನ್ನು ಪಾವತಿಸಬೇಕಾಗಿದೆ. ಹೌದು, ಜೂನ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಓದಿ :  ಈದುಲ್ ಫ್ರಿತ್ ಹಬ್ಬವನ್ನು ಸರಳವಾಗಿ ಆಚರಿಸಿ, ಬಡವರಿಗೆ ಸಹಾಯ ಮಾಡಿ:ಜಿಲ್ಲಾ ಮುಸ್ಲಿಮ್ ಒಕ್ಕೂಟ

ಗೂಗಲ್ ಫೋಟೋಗಳಲ್ಲಿ ಉಚಿತ ಕ್ಲೌಡ್ ಸ್ಟೋರೇಜ್ ಜೂನ್ 1 ರಿಂದ ಮುಕ್ತಾಯಗೊಳ್ಳಲಿದೆ. ಟೆಕ್ ದೈತ್ಯ ಗೂಗಲ್ ತನ್ನ ಶೇಖರಣಾ ಸೇವೆಗಾಗಿ ಬಳಕೆದಾರರಿಗೆ ಶುಲ್ಕ ವಿಧಿಸುವ ಯೋಜನೆಯನ್ನು ಪ್ರಕಟಿಸಿದೆ.

ಗೂಗಲ್ ಫೋಟೋಗಳು ಪ್ರಸ್ತುತ ತನ್ನ ಎಲ್ಲ ಬಳಕೆದಾರರಿಗೆ ಅನ್‌ ಲಿಮಿಟೆಡ್ ಸ್ಟೋರೇಜ್ ಒದಗಿಸುತ್ತಿದ್ದು, ಇನ್ಮುಂದೆ ಈ ಸೇವೆಯನ್ನು ನೀಡಲು ಸಾಧ್ಯವಿಲ್ಲವೆಂದು ಗೂಗಲ್ ತಿಳಿಸಿದೆ.

Advertisement

ಜೂನ್ 1 ರಿಂದ ಗ್ರಾಹಕರು ಗೂಗಲ್ ಫೋಟೋಗಳಲ್ಲಿ ಕೇವಲ 15 ಜಿಬಿ ಸ್ಟೋರೇಜ್ ಮಾತ್ರ ಉಚಿತವಾಗಿ ಪಡೆಯಬಹುದು. ಅದಕ್ಕೂ ಹೆಚ್ಚಿನ ಫೋಟೋ ಸ್ಟೋರೇಜ್ ಗಳಿಗಾಗಿ ಬಳಕೆದಾರರು ಶುಲ್ಕವನ್ನು ಪಾವತಿಸ ಬೇಕಾಗುತ್ತದೆ. ಜೂನ್ 1 ರಿಂದ ನೀವು ಸ್ಟೋರೇಜ್ ಆಗುವ ಎಲ್ಲಾ ಫೋಟೋಗಳಿಗೆ 15 ಜಿಬಿ ಮಿತಿ ಅನ್ವಯಿಸುತ್ತದೆ ಎಂದು ಗೂಗಲ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಓದಿ : ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕು : ಡಾ.ಕೆ.ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next