ಸುಳ್ಯ: ನಗರದಲ್ಲಿ ಅಲೆಮಾರಿಗಳು ಅಲ್ಲಲ್ಲಿ ಕಂಡುಬರುತ್ತಿದ್ದು ಅಂಗಡಿ ಮಾಲಕರು ಸೇರಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣ ವಾಗಿದೆ. ಇಲ್ಲಿನ ಖಾಸಗಿ ಹಾಗೂ ಸರಕಾರಿ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು ಇವರ ಮೂಲ ಎಲ್ಲಿ ಎಂಬುದು ಪತ್ತೆಯಾಗಿಲ್ಲ.
ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಆಪರಿಚಿತರಿಂದ ದರೋಡೆ, ಕೊಲೆ, ಆತ್ಯಾಚಾರ ಮುಂತಾದ ಘಟನೆಗಳು ನಡೆ ದಿರುವ ಉದಾಹರಣೆಗಳಿರುವುದರಿಂದ ಇವರ ಇರುವಿಕೆಯು ಒಂದು ರೀತಿಯ ಭೀತಿಗೂ ಕಾರಣವಾಗಿದೆ.
ನಿರಾಶ್ರಿತರ ಗುಂಪಿನಲ್ಲಿ ಮಕ್ಕಳು ಕೂಡ ಇದ್ದು ಸರಿಯಾದ ಆಹಾರ- ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಸರಿಯಾದ ಶಿಕ್ಷಣ ದೊರೆಯದೆ ಮಕ್ಕಳು ದಾರಿ ತಪ್ಪುವ ಆಪಾಯವಿದೆ. ಸಂಬಂಧಪಟ್ಟ ಇಲಾಖೆಯವರು ಇವರ ಮೂಲವನ್ನು ಪತ್ತೆ ಮಾಡಿ ಆವರನ್ನು ಆವರ ಊರುಗಳಿಗೆ ತಲುಪಿಸುವ ಯೋಜನೆ ರೂಪಿಸಬೇಕು ಇಲ್ಲವೇ ಆವರಿಗೆ ಆವಶ್ಯಕತೆ ಇದ್ದರೆ ವಸತಿ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ನಿರಾಶ್ರಿತರ ಸಮಸ್ಯೆ ಒಂದೆಡೆಯಾದರೆ ಇತ್ತ ಕುಡುಕರ ಹಾವಳಿಯೂ ಹೆಚ್ಚಾಗುತ್ತಿದೆ. ಸರಕಾರಿ ಬಸ್ ತಂಗುದಾಣದ ಬಳಿ ಆಸುಪಾಸಿನಲ್ಲಿ ಕುಡುಕರ ಹಾವಳಿ ಎಲ್ಲೆ ಮೀರಿದ್ದು, ಸಾಮಾನ್ಯರು ಓಡಾಡಲು ಮುಜುಗರ ಪಡುವಂತಾಗಿದೆ.
ಅಲೆಮಾರಿಗಳನ್ನು ಮಂಗಳೂರಿನ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಆಶ್ರಯ ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದೇವೆ. ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ನಗರ ಶುಚಿತ್ವಕ್ಕೆ ಕ್ರಮ ಕೈಗೊಳ್ಳಲಾಗುವುದು.
–ವಿನಯ್ ಕುಮಾರ್ ಕಂದಡ್ಕ, ನ.ಪಂ. ಆಧ್ಯಕ್ಷರು, ಸುಳ್ಯ