Advertisement
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ನೀಡಲಾಗುತ್ತಿದ್ದು, ಸ್ಥಳೀಯ ಗ್ರಾಪಂಗಳಿಗೆಅಧಿಕಾರ ನೀಡಲಾಗಿದೆ. ಆದರೆ, ಪರವಾನಗಿಪಡೆಯದೇ ನಡೆಸುತ್ತಿರುವ ಆಲೆಮನೆಗಳು ಹೆಚ್ಚಾಗಿದೆ. ಕೆಲವು ರೈತರು ತಾವೇ ಆಲೆಮನೆಗಳನ್ನು ನಡೆಸುತ್ತಿದ್ದರೆ, ಬಹುತೇಕ ಮಂದಿ ಹೊರ ರಾಜ್ಯದವರಿಗೆ ಬಾಡಿಗೆ ಹಾಗೂ ಗುತ್ತಿಗೆ ಆಧಾರದ ಮೇಲೆ ಆಲೆಮನೆ ನೀಡಿದ್ದಾರೆ.ಆದರೆ ಅದಕ್ಕೆ ಯಾವುದೇ ಪರವಾನಗಿ ಪಡೆದಿಲ್ಲ.
Related Articles
Advertisement
ಸಾವಯವ ಬೆಲ್ಲದ ಅರಿವು ಅಗತ್ಯ :
ಗ್ರಾಹಕರು ಕಲರ್ ಇರುವ ಬೆಲ್ಲವನ್ನು ಹೆಚ್ಚು ಖರೀದಿಸುತ್ತಾರೆ. ಆದರೆ ಅದನ್ನು ರಸಾಯನಿಕದಿಂದ ತಯಾರಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಸಾವಯವ ಬೆಲ್ಲ ಕಪ್ಪಗಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಆತ್ಮನಿರ್ಭರ್‌ಭಾರತ್ ಯೋಜನೆಯಡಿ ಮಂಡ್ಯ ಬೆಲ್ಲ ಆಯ್ಕೆಯಾಗಿದೆ. ಆದರೆ ಅದನ್ನು ಹಾಳುಮಾಡಲು ಹೊರಗಿನ ಕೆಲವರು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಲೆಮನೆ ಮಾಲಿಕರ ಸಂಘದ ತಾಲೂಕು ಅಧ್ಯಕ್ಷ ಸೋಮಶಂಕರೇಗೌಡ ತಿಳಿಸಿದರು.
ಸಾವಯವ ಬೆಲ್ಲ ಖರೀದಿಗೆ ಹಿಂದೇಟು :
ಪ್ರಸ್ತುತ ಕಬ್ಬಿನ ಕೊರತೆ ಉಂಟಾಗಿರುವುದರಿಂದ ಬೇರೆ ರಾಜ್ಯಗಳಿಂದ ಬೆಲ್ಲದ ಟ್ರೇಡರ್ಗಳು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಬೆಲ್ಲ ಕಲರ್‌ನಿಂದ ಕೂಡಿದ್ದು, ಬೇಡಿಕೆ ಹೆಚ್ಚಿದೆ. ಮಂಡ್ಯ ಸಾವಯವ ಬೆಲ್ಲದ ದರ ಹೆಚ್ಚಾಗಿರುವುದರಿಂದ, ಬೇರೆ ರಾಜ್ಯದಿಂದ ಬೆಲ್ಲವನ್ನು ಆಮದುಮಾಡಿಕೊಳ್ಳಲಾಗುತ್ತಿದೆ. ಸಾವಯವ ಬೆಲ್ಲಕಪ್ಪಾಗಿರುವುದರಿಂದ ಖರೀದಿಗೆ ಹಿಂದೇಟುಹಾಕುತ್ತಾರೆ. ಹೀಗಾಗಿ ಬೇರೆರಾಜ್ಯಗಳಿಂದ ಬೆಲ್ಲ ಸರಬರಾಜುಮಾಡಿಕೊಳ್ಳಲಾಗುತ್ತದೆ ಎಂದು ಬೆಲ್ಲವರ್ತಕರೊಬ್ಬರು ತಿಳಿಸಿದರು.
ವಿವಿಧೆಡೆ ಅಧಿಕಾರಿಗಳ ದಾಳಿ : ಕಳೆದ ಶನಿವಾರ ಬೇರೆ ರಾಜ್ಯಗಳಿಂದ ಕಳಪೆ ಗುಣಮಟ್ಟದ ಬೆಲ್ಲಪೂರೈಕೆಯಾಗುತ್ತಿರುವ ಬಗ್ಗೆ ರೈತರದೂರಿನ ಮೇರೆಗೆ ಆಹಾರ ಸುರಕ್ಷತೆ,ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಾಳಿ ನಡೆಸಿದರು. ಮಂಡ್ಯ ತಾಲೂಕು ಸೇರಿದಂತೆಜಿಲ್ಲೆಯ ವಿವಿಧೆಡೆ 40 ಆಲೆಮನೆಗಳಮೇಲೆ ದಾಳಿ ನಡೆಸಿ ಸುಮಾರು 29ಆಲೆಮನೆಗಳ ಬೆಲ್ಲದ ಮಾದರಿ ಸಂಗ್ರಹಿಸಿ ಲ್ಯಾಬ್‌ಗ ಕಳುಹಿಸಲಾಗಿದೆ.
ಹೊರ ರಾಜ್ಯಗಳಿಂದ ಕಳಪೆ ಗುಣಮಟ್ಟದ ಬೆಲ್ಲಸರಬರಾಜು ಮಾಡಿಕೊಂಡು ಅದಕ್ಕೆ ಸಕ್ಕರೆ ಹಾಗೂ ರಸಾಯನಿಕ ಹಾಕಿ ಬೆಲ್ಲ ತಯಾರಿಸಲಾಗುತ್ತಿದೆ. ಇದರಿಂದ ಮಂಡ್ಯ ಬೆಲ್ಲಕ್ಕೆ ತೊಂದರೆಯಾಗುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಆಲೆಮನೆಗಳಮೇಲೆ ದಾಳಿ ನಡೆಸಲಾಗಿದ್ದು, ದಾಳಿ ಮುಂದುವರಿಸ ಲಾಗಿದೆ. ಪರವಾನಗಿ ಪಡೆಯದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗುತ್ತಿದೆ. – ಡಾ.ಜಿ.ಸಿ.ಬೆಟ್ಟಸ್ವಾಮಿ, ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಮಂಡ್ಯ
-ಎಚ್.ಶಿವರಾಜು