ಆಲ್ದೂರು: ಸಮೀಪದ ವಸ್ತಾರೆ ಗ್ರಾಮದ ರಾಜ್ಯ ಹೆದ್ದಾರಿ 27 ರಲ್ಲಿ ರವಿವಾರ ಬೆಳಗಿನ ಜಾವ ಬೈಕ್ – ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಲ್ದೂರು ಸಮೀಪದ ಅರೆನೂರು ಗ್ರಾಮದ ವಿಲಾಸ್ ( 19 ) ಮೃತಪಟ್ಟ ದುರ್ದೈವಿ.
ವಿಲಾಸ್ ಚಿಕ್ಕಮಗಳೂರು ಮೂಗ್ತಿಹಳ್ಳಿ ಸಮೀಪದ ಅಂಬರ್‌ವ್ಯಾಲಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು ಶನಿವಾರ ಮನೆಗೆ ಬಂದಿದ್ದರು. ಭಾನುವಾರ ಬೆಳಗ್ಗಿನ ಜಾವ ಬೈಕ್‌ನಲ್ಲಿ ಮತ್ತೆ ಕೆಲಸಕ್ಕೆ ಹಿಂದಿರುಗುವಾಗ ವಸ್ತಾರೆ ಸಮೀಪ ನವೀನ್ ಅವರ ಕೋಳಿ ಫಾರಂ ಸಮೀಪದ ರಸ್ತೆಯಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿದ್ದು ವಿಲಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಭಂದಿಸಿದಂತೆ ವಿಲಾಸ್ ತಂದೆ ಲಕ್ಷ್ಮಣಗೌಡ ಆಲ್ದೂರು ಠಾಣೆಗೆ ದೂರು ನೀಡಿದ್ದಾರೆ.