Advertisement

14ರ ನಂತರ ಮದ್ಯ ಸಿಗುತ್ತೆ

04:20 PM Apr 10, 2020 | Suhan S |

ಮುಳಬಾಗಿಲು: ಮದ್ಯ ಪ್ರಿಯರು ಲಾಕ್‌ ಡೌನ್‌ಗೆ ಸಹಕಾರ ನೀಡಬೇಕು, ಏ.14ರ ನಂತರ ಮದ್ಯ ಸಿಗಲಿದ್ದು, ಯಾರೂ ಧೃತಿಗೆಡಬೇಕಿಲ್ಲ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು.

Advertisement

ತಾಲೂಕಿನ ಆಂಧ್ರಗಡಿ ಭಾಗದ ನಂಗಲಿ ಮತ್ತು ಹೆಬ್ಬಣ ಚೆಕ್‌ ಪೋಸ್ಟ್‌ ಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತೆ ಪರಿಶೀಲಿಸಿ ಮಾತನಾಡಿದ ಅವರು, ಪ್ರತಿ ದಿನ ಕಂಟ್ರೋಲ್‌ ರೂಂಗೆ ಮದ್ಯಕ್ಕೆ ಸಂಬಂಧಿಸಿದ ಕರೆಗಳು ಹೆಚ್ಚು ಬರುತ್ತಿವೆ. ಏನು ಮಾಡುವುದು ಸ್ವಲ್ಪ ದಿನಗಳ ಮಟ್ಟಿಗೆ ಮದ್ಯ ಪ್ರಿಯರು ತಾಳ್ಮೆಯಿಂದ ಇರಬೇಕು ಎಂದು ವಿವರಿಸಿದರು.

ಹೆಚ್ಚಿನ ಭದ್ರತೆ ಕಲ್ಪಿಸಿ: ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಕಂಡು ಬಂದಿಲ್ಲವಾದರೂ ನೆರೆಯ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ 17 ಮತ್ತು ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಪಲಮನೇರು ತಾಲೂಕಿನಲ್ಲಿ 3 ಕೋವಿಡ್ 19  ಸೋಂಕಿತ ಪ್ರಕರಣಗಳು ದೃಢಪಟ್ಟಿರುವುದರಿಂದ ಆಂಧ್ರದಿಂದ ತಾಲೂಕಿಗೆ ಯಾರೂ ಬರದಂತೆ ಚೆಕ್‌ ಪೋಸ್ಟ್‌ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿಗೆ ಸೂಚಿಸಿದರು.

ರಾಜ್ಯದ 18 ಜಿಲ್ಲೆಗಳಲ್ಲಿ ಮಾತ್ರ ಕೋವಿಡ್ 19 ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇಲ್ಲವೆಂಬುದು ಸ್ವಲ್ಪ ನೆಮ್ಮದಿಯ ವಿಷಯ. ಕೊರೋನಾ ತಡೆ ಗಟ್ಟಲು ಶ್ರಮವಹಿಸುತ್ತಿರುವ ಜಿಲ್ಲಾಡ ಳಿತ ಮತ್ತು ಇದಕ್ಕೆ ಸಹಕರಿಸುತ್ತಿರುವ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನ ವರು ಕ್ಯಾಬಿನೆಟ್‌ ಸಭೆ ಕರೆದಿದ್ದು, ಸಭೆಯಲ್ಲಿ ಲಾಕ್‌ ಡೌನ್‌ ವಿಚಾರ ಪ್ರಸ್ತಾಪ ವಾಗಲಿದೆ. 14ರ ನಂತರ ಲಾಕ್‌ಡೌನ್‌ ಮುಂದು ವರಿಯ ಬೇಕಾ? ಇಲ್ಲ ಸಡಿಲ ಗೊಳಿಸ ಬೇಕೆಂಬುದು ನಿರ್ಧಾರವಾಗ ಲಿದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಎಸ್‌ಪಿ ಕಾರ್ತಿಕ್‌ರೆಡ್ಡಿ, ತಹಶೀಲ್ದಾರ್‌ ಕೆ.ಎನ್‌.ರಾಜ ಶೇಖರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ, ಸಿಪಿಐ ಮಾರ್ಕಂಡಯ್ಯ, ನಂಗಲಿ ಪಿ ಎಸ್‌ಐ ಅನಿಲ್‌ಕುಮಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next