Advertisement

Singer Charli; ಬ್ರಾಟ್‌ ‘2024ರ ವರ್ಷದ ಪದ’

01:20 AM Nov 04, 2024 | Team Udayavani |

ಲಂಡನ್‌: ಖ್ಯಾತ ಆಲ್ಬಂ ಗಾಯಕಿ ಚಾರ್ಲಿ ಎಕ್ಸ್‌ಸಿಎಕ್ಸ್‌ ಅವರ ಜನಪ್ರಿಯ ಮ್ಯೂಸಿಕ್‌ ಆಲ್ಬಂನಲ್ಲಿ ಬಳಕೆ ಮಾಡಲಾಗಿರುವ “ಬ್ರಾಟ್‌’ ಎಂಬ ಪದವನ್ನು ಕೊಲಿನ್ಸ್‌ ಡಿಕ್ಷನರಿ “2024ನೇ ವರ್ಷದ ಪದ’ ಎಂದು ಆಯ್ಕೆ ಮಾಡಿದೆ. ಸಾಮಾನ್ಯವಾಗಿ “ಬ್ರಾಟ್‌’ (Brat) ಪದ ಅವಿಧೇಯತೆ ಎಂಬ ಅರ್ಥವನ್ನು ಸೂಚಿಸುತ್ತದೆ. ಅದನ್ನು ಡಿಕÏನರಿಗೆ ಸೇರಿದ್ದಕ್ಕೆ ಸಮರ್ಥನೆ ನೀಡಿದ ಕೊಲಿನ್ಸ್‌ “ಆ ಪದ ಆತ್ಮವಿಶ್ವಾಸ, ಸ್ವತಂತ್ರ ಮನೋಭಾವ ಮತ್ತು ವೈಭವೋಪೇತ ಮನಃಸ್ಥಿತಿಯನ್ನು ವಿವರಿಸುತ್ತದೆ. ಚಾರ್ಲಿ ಅವರ ಆಲ್ಬಂ ಮೂಲಕ ಈ ಪದ ಜನಪ್ರಿಯವಾಗು ವುದರ ಜತೆಗೆ ಪ್ರಪಂಚದ ಜನರಲ್ಲಿ ಅದರ ಬಳಕೆ ಯಥೇತ್ಛವಾಗಿದೆ’ ಎಂದು ಹೇಳಿಕೊಂಡಿದೆ. ಅದೊಂದು ಜೀವನ ಶೈಲಿ ಎಂದು ವಿವರಣೆ ನೀಡಿದೆ.

Advertisement

ಈ ವರ್ಷದ ಜುಲೈಯಲ್ಲಿ ಗಾಯಕಿ ಚಾರ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಉಲ್ಲೇಖೀಸಿ “ಕಮಲಾ ಈಸ್‌ ಬ್ರಾಟ್‌’ ಎಂದು ಟ್ವೀಟ್‌ ಮಾಡಿದ್ದರು. ಅಮೆರಿಕದ ಗಾಯಕ ಟೇಲರ್‌ ಸ್ವಿಫ್ಟ್ ಅವರ “ಇರಾ’ ಕೂಡ ಡಿಕÏನರಿಯಲ್ಲಿ ಸ್ಥಾನ ಪಡೆದಿದೆ. ಇನ್ನು ಪ್ರವಾಸೋದ್ಯಮ ವಿರೋಧಿ ಪದಗಳಾಗಿ ರುವ “ಆ್ಯಂಟಿ- ಟೂರಿಸಂ’, ಗಂಭೀರ ತಪ್ಪು ಎಂಬ ಅರ್ಥ ಕೊಡುವ “ಡೆಲುಲು’ ಪದಗಳೂ ಪೈಪೋಟಿಯಲ್ಲಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next