ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಇತ್ತೀಚೆಗೆ ಹನುಮಂತು ಅವರು ಆಗಮಿಸಿದ್ದರು. ಇದೀಗ ಮತ್ತೊಬ್ಬರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯ ನಾಲ್ಕನೇ ವಾರದ ಆಟ ರಾಜಕೀಯ ರಣಾರಂಗವಾಗಿ ಮಾರ್ಪಟ್ಟಿದೆ. ಎರಡು ತಂಡಗಳಾಗಿ ಸ್ಪರ್ಧಿಗಳು ರಾಜಕೀಯ ಪಕ್ಷವನ್ನು ರಚನೆ ಮಾಡಿಕೊಂಡಿದೆ.
ರಾಜಕೀಯ ಪಕ್ಷಗಳ ಸರಿ ತಪ್ಪುಗಳನ್ನು ಖಡಕ್ ಆಗಿಯೇ ಪ್ರಶ್ನೆ ಮಾಡೋಕೆ ಖ್ಯಾತ ಸುದ್ದಿವಾಚಕಿ ರಾಧಾ ಹಿರೇಗೌಡರ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯ ರಾಜಕೀಯ ಆಟವನ್ನು ಪ್ರಶ್ನೆ ಮಾಡೋಕೆ ಬರ್ತಾ ಇದ್ದಾರೆ ರಾಧಾ ಹಿರೇಗೌಡರ್. ನೀವು ಬಂದಿದ್ದೀರಿ ಅಂದರೆ ನಮಗೆ ನೀರು ಕುಡಿಸುತ್ತೀರಿ. ನೀವು ಸ್ಪರ್ಧಿಯಾಗಿ ಬಂದಿದ್ದೀರೋ ಹೇಗೋ ಅಂಥ ಚೈತ್ರಾ ರಾಧಾ ಅವರನ್ನು ಪ್ರಶ್ನಿಸಿದ್ದಾರೆ.
ನನಗೆ ಪಕ್ಷ ಎಲ್ಲ ಹೊಸತಲ್ಲ. ಭಾಷಣ ರಾಜಕೀಯ. ಐಶ್ವರ್ಯಾ ಅವರೇ ಎದೆ ಮುಟ್ಟಿಕೊಂಡು ಹೇಳಿ ನಿಮ್ಮ ಪಕ್ಷದಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದಾರಾ? ಏನು ಕೊಡ್ತೀರಾ ಜನರಿಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ತಿವಿಕ್ರಮ್ ಕಾಫಿ ಕೊಡುತ್ತೇವೆ ಅಂದಿದ್ದಾರೆ. ಐಶ್ವರ್ಯಾ ಅವರು ಮನರಂಜನೆ ಕೊಡುತ್ತೇವೆ ಅಂದಿದ್ದಾರೆ. ಅದಕ್ಕೆ ರಾಧಾ ಅವರು ಅದನ್ನು ನಿವೇನು ಕೊಡೋದು ಬಿಗ್ ಬಾಸ್ ಕೊಡುತ್ತಾರೆ. ನನ್ನನ್ನು ನಗಿಸುತ್ತೀರಾ ನಗಿಸಿ ಎಂದು ಮರು ಪ್ರಶ್ನಿಸಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ರಾಧಾ ಹಿರೇಗೌಡರ್ ಸ್ಪರ್ಧಿಯಾಗಿ ಬಂದಿದ್ದಾರೋ ಅಥವಾ ಗೆಸ್ಟ್ ಆಗಿ ಬಂದಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ರಾಜಕೀಯ:
ಟಾಸ್ಕ್ ವಿಚಾರವಾಗಿ ಬಿಗ್ ಬಾಸ್ ಎರಡು ತಂಡಗಳ ರಾಜಕೀಯ ಪಕ್ಷವನ್ನು ರಚನೆ ಮಾಡಲಾಗಿದೆ. ವಿಧಾನ ಸೌಧದಂತೆ ಬಿಗ್ ಸೌಧವಾಗಿ ದೊಡ್ಮನೆ ಮಾರ್ಪಟ್ಟಿದೆ.
ಪ್ರಾಮಾಣಿಕ, ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸ್ನೇಹ ಪಕ್ಷ ಎಂದು ಎರಡು ಪಕ್ಷಗಳನ್ನು ರಚನೆ ಮಾಡಲಾಗಿದೆ.
ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರ ರೀತಿಯಲ್ಲಿ ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಪೋಸ್ಟರ್ ಅಂಟಿಸುವ ವಿಚಾರದಲ್ಲಿ ಎರಡು ಪಕ್ಷಗಳ ನಡುವೆ ವಾದ – ವಾಗ್ವಾದ ನಡೆದಿದೆ.