Advertisement
ನಹಿ ಜ್ಞಾನೇನ ಸದೃಶಂ ಅಂತಾರೆ ಅಂದರೆ ಜ್ಞಾನಕ್ಕಿಂತ ಮಿಗಿಲಾದ ವಸ್ತು ಬೇರೆ ಇಲ್ಲ ಎಂಬರ್ಥದಲ್ಲಿ, ಜ್ಞಾನ ಸಂಪತ್ತು ಅಕ್ಷಯವಾದದ್ದು ಮತ್ತು ನಮಗೆಲ್ಲಾ ತಿಳಿದಿರುವಂತೆ ದೀಪದಿಂದ ದೀಪ ಹಚ್ಚಿದಾಗ ಬೆಳಕು ಹೆಚ್ಚುವಂತೆ ಜ್ಞಾನಿ ತನ್ನ ಜ್ಞಾನವನ್ನು ಇನ್ನೊಬ್ಬರಿಗೆ ಕಲಿಸಿದಾಗ ಅದು ಹೆಚ್ಚಾಗುತ್ತದೆ ಹೊರತು ಕ್ಷೀಣಿಸುವುದಿಲ್ಲ, ಅದನ್ನು ಕದಿಯಲೂ ಸಾಧ್ಯವಿಲ್ಲ ಆದರೆ, ನಿರ್ಲಕ್ಷ್ಯ ಮತ್ತು ಉದಾಸಿನತೆಯಿಂದ ಮರೆಯಬಹುದು.
Related Articles
Advertisement
ದೊಡ್ಡ ಮೇಧಾವಿಯೂ ಸಹ ಸಾಮಾನ್ಯ ಮನುಷ್ಯರಂತೆ ಸನ್ನಿವೇಶ ಪರಿಸ್ಥಿತಿಗಳ ಕೈಗೊಂಬೆಯಾಗುತ್ತಾರೆ, ಆದರೆ ಅದನ್ನೆಲ್ಲಾ ಮೀರಿ ಇತರರಿಗೆ ಆದರ್ಶರಾಗುವುದು ಅಸಾಮಾನ್ಯ ವ್ಯಕ್ತಿತ್ವವೇ ಸರಿ. ನಂತರ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದು, ಸ್ವಿಸ್ ದೇಶದ ಪೌರತ್ವವನ್ನು ಪಡೆದಿದ್ದು, ಎರಡನೇ ವಿಶ್ವಯುದ್ಧದಲ್ಲಿ ನಡೆದ ಯಹೂದಿಗಳ ಮಾರಣ ಹೋಮ, ಆ ಸಮಯದಲ್ಲಿ ಅಮೆರಿಕಾಗೆ ಹೋಗಿದ್ದರು. ತಾನೂ ಆ ಮಾರಣ ಹೋಮದಿಂದ ಪಾರಾಗಿ ಬಂದದ್ದಷ್ಟೆ ಅಲ್ಲದೆ, ಅದರಲ್ಲಿ ಸಿಕ್ಕಿಹಾಕಿಕೊಂಡವರ, ಅವರ ಮನೆಯವರ ದುಃಖಕ್ಕೆ ಸ್ಪಂದಿಸಿದ್ದು ಐನ್‍ಸ್ಟೈನ್ ವಿಶೇಷತೆ.
ಪ್ರತೀ ಮೇಧಾವಿಗಳು ಮತ್ತು ಸಾಧಕರ ಜೀವನ ಕಂಡಾಗ ಅವರಲ್ಲಿರುವ ವಿಶಿಷ್ಟ ಗುಣಗಳನ್ನು ನಾವು ಖಂಡಿತಾ ಕಾಣುತ್ತೇವೆ. ಒಮ್ಮೆ ಅಧ್ಯಯನಕ್ಕೆ ಕೂತರೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸತತ ಎಂಟು ಗಂಟೆಗಳಿಗಿಂತ ಹೆಚ್ಚುಕಾಲ ಏಳದೆ ಕುಳಿತು ಕೆಲಸ ಮಾಡುತ್ತಿದ್ದರಂತೆ. ಆ ಸಮಯದಲ್ಲಿ ಹಿತ-ಮಿತವಾದ ಆಹಾರ ಸೇವನೆಯನ್ನು ರೂಢಿಸಿಕೊಂಡಿದ್ದ ಬಗ್ಗೆ ಉಲ್ಲೇಖಗಳಿವೆ. ಇದನ್ನೇ ಹಿರಿಯರು ಆಸನ ವಿಜಯವೆಂದು ಕರೆದದ್ದು. ಇಂತಹ ಹಲವು ಅಮೂಲ್ಯ ಗುಣಗಳ ಆಗರ ಅಲ್ಬರ್ಟ್ ಐನ್‍ಸ್ಟೈನ್.
ಸಣ್ಣವರಿದ್ದಾಗ 5 ವರ್ಷಗಳವರೆಗೆ ಮಾತೇ ಆಡದೆ ಇದ್ದರು, ಅದು ಮಾತು ಬರದೆ ಅಲ್ಲ, ಆ ಕಣ್ಣುಗಳು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದವು. ಅವುಗಳಿಗೆ ತಿಳಿದುಕೊಳ್ಳುವ ಹಸಿವಿತ್ತು ಹೊರತು ಈಗಿನ ಕೆಲ ಸ್ವಯಂ ಘೋಷಿತ ಮೇಧಾವಿಗಳಂತೆ ಒಣ ಭಾಷಣ ಮಾಡುವ ಇಚ್ಛೆ ಅವರಿಗಿರಲಿಲ್ಲ ಎಂದುಕೊಳ್ಳುತ್ತೇನೆ.
ಅಧ್ಯಾಪಕರು ತಾಯಿಗೆ ಮಗ ದಡ್ಡನೆಂದು ಪತ್ರ ಬರೆದಾಗಲೂ ತಾಯಿ ಅದನ್ನು ಮಗನಿಗೆ ತಿಳಿಸೋ ಬದಲು ಆಕೆ ನೀನು ಉಳಿದವರಂತಲ್ಲ ಎಂದು ಹುರಿದುಂಬಿಸಿದಳಲ್ಲ ಆ ಮಹಾತಾಯಿ ಓದಿದ್ದು ಮಗ ಅಲ್ಬರ್ಟ್ ಐನ್‍ಸ್ಟೈನ್ ರ ಮುಖವನ್ನಲ್ಲ ಮನಸ್ಸನ್ನು. ಇಂತಹ ಮಾತೆ ಅದ್ಭುತ ಮೇಧಾವಿಗೆ ಜನ್ಮ ನೀಡಿಲ್ಲ ಆದರೆ, ಜನ್ಮ ನೀಡಿದ ಮಗನನ್ನು ಮೇಧಾವಿಯಾಗಿ ಪರಿವರ್ತಿಸಲು ಪ್ರೇರಕ ಶಕ್ತಿಯಾದಳು. ಹಾಗಾಗಿ ನಾವು ಇತರರಿಂದ ಅವರ ಒಳ್ಳೆಯ ಗುಣಗಳನ್ನು ಕಂಡು ಪ್ರಶಂಸಿಸಿ ಬೆನ್ನು ತಟ್ಟೋಣ, ನಾವೂ ಅವರ ಸದ್ಗುಣಗಳನ್ನು ರೂಢಿಸಿಕೊಂಡು ಗುರಿ ಮುಟ್ಟೋಣ.