ಆಲಂಕಾರು : ವೈನ್‌ಶಾಪ್ ಬಂದ್ ಮಾಡಿಸದೇ ಬರಿಗೈಯಲ್ಲಿ ವಾಪಸಾದ ಅಧಿಕಾರಿ ವೃಂದ, ಪೊಲೀಸರು ಪ್ರತಿಭಟನಕಾರರ ಕೆಂಗಣ್ಣಿಗೆ ಗುರಿಯಾದ ಘಟನೆ ಬುಧವಾರ ನಡೆಯಿತು.
ಇಲ್ಲಿಯ ದಲಿತ ಸೇವಾ ಸಮಿತಿ,ಬಾರ್ ವಿರೋಧಿ ಹೋರಾಟ ಸಮಿತಿ ಹಾಗೂ ಜನಜಾಗೃತಿ ವೇದಿಕೆ ಕಡಬ ವಲಯ ಸಂಯುಕ್ತವಾಗಿ ಪರವಾನಿಗೆ ಯಲ್ಲದೇ ಆರಂಭವಾಗಿರುವ ಉಪ್ಪಿನಂಗಡಿ ಯಿಂದ ತೆರವಾದ ವೈನ್‌ಶಾಪ್‌ನ್ನು ಕೂಡಲೇ ಮುಚ್ಚಿಸುವಂತೆ ಆಗ್ರಹಿಸಿ ಗ್ರಾ.ಪಂ. ವಠಾರದಲ್ಲಿ ಪ್ರತಿಭಟನೆ ನಡೆಸಿದವು.
ಈ ಸಂದರ್ಭ ಮನವಿಯನ್ನು ಸ್ವೀಕರಿಸಲು ಬಂದ ಪಿಡಿಒ ಅವರನ್ನು ಪ್ರತಿಭಟನಾಕಾರರು ತರಾಟೆಗೆ ಪಡೆದುಕೊಂಡರು. ಇದಕ್ಕೆ ಉತ್ತರಿಸಿದ ಪಿಡಿಒ, ಆ.30 ರಂದು ಕರೆದಿರುವ ವಿಶೇಷ ಗ್ರಾಮಸಭೆಯಲ್ಲಿ ಅಬಕಾರಿ ಅಧಿಕಾರಿಗಳು ಬಂದು ಉತ್ತರಿಸುವರು ಎಂದರು. ಇದರಿಂದ ಕುಪಿತರಾದ ಮಹಿಳೆಯರು ಅಲ್ಲಿಯವರೆಗೆ ವೈನ್‌ಶಾಪ್ ಮುಚ್ಚಿಸಿ ಎಂದು ಆಗ್ರಹಿಸಿದರು. ಇದು ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು.
ಸ್ಥಳಕ್ಕಾಗಮಿಸಿದ ಕಡಬ ಪ್ರಭಾರ ಠಾಣಾಧಿಕಾರಿ ಅಬ್ದುಲ್ ಖಾದರ್ ಮತ್ತು ಪಿಡಿಒ ಪ್ರತಿಭಟನೆ ನೇತೃತ್ವ ವಹಿಸಿದ್ದವರ ಮಧ್ಯೆ ಮಾತುಕತೆ ನಡೆಸಿದರು. ಅಂತಿಮವಾಗಿ ಪೊಲೀಸ್ ಬಂದೋಬಸ್ತ್ನಲ್ಲಿ ವೈನ್‌ಶಾಪ್‌ಗೆ ಬೀಗ ಜಡಿಯಲು ತೆರಳಿದರು. ಈ ಸಂದರ್ಭದಲ್ಲಿ ಪ್ರಭಾವಿ ರಾಜಕೀಯ ಮುಖಂಡರ ದೂರವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ ವೈನ್ ಶಾಪ್ ಬಂದ್ ಮಾಡದೇ ವಾಪಾಸಾದರು.
ಬಳಿಕ ಪ್ರತಿಭಟನಾಕಾರರೊಂದಿಗೆ ಮಾತನಾ ಡಿದ ಠಾಣಾಧಿಕಾರಿ, ವೈನ್‌ಶಾಪ್‌ಗ್ಳಿಗೆ ಜಿಲ್ಲಾ ಅಬಕಾರಿ ಡಿ ಸಿಯಿಂದ ಪರವಾನಿಗೆ ಪಡೆದರೆ ಸಾಕು. ಗ್ರಾ.ಪಂ. ನ ಪರವಾನಿಗೆ ಬೇಕಿಲ್ಲ ಎಂದರು. ಕೂಡಲೇ ಪ್ರತಿಭಟನಾಕಾರರು ಅಬಕಾರಿ ಅಧಿಕಾರಿಗಳನ್ನು ಕರೆಸುವಂತೆ ಪಟ್ಟು ಹಿಡಿ ದರು. ಜನಜಾಗೃತಿ ವೇದಿಕೆಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್ ಮಾತನಾಡಿ, ಆ.30ರ ವಿಶೇಷ ಗ್ರಾಮ ಸಭೆಯಲ್ಲಿ ಅಬಕಾರಿ ಅಧಿಕಾರಿಗಳು ಉತ್ತರ ನೀಡುವರು. ಒಂದುವೇಳೆ ಬಾರದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನ ಸಭೆ
ಇದಕ್ಕೆ ಮುನ್ನ ಮಾರುಕಟ್ಟೆ ಬಳಿಯಿಂದ ಆರಂಭ ವಾದ ಪ್ರತಿಭಟನೆ ಮೆರವಣಿಗೆ ಪಂ. ವಠಾರಕ್ಕೆ ಸೇರಿ, ಸಭೆ ನಡೆಸಲಾಯಿತು.
ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ, ಅನ್ಯಾಯಕ್ಕೆ ತಲೆ ಬಾಗು ವುದು ಹೇಡಿತನ. ರಾಜ್ಯ ಸರಕಾರ 1 ರೂ.ಗೆ ಅಕ್ಕಿ ಕೊಡುತ್ತದೆ. ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಯಾವುದೇ ರಾಜಕೀಯ ನಾಯಕರು ಮದ್ಯ ಮುಕ್ತ ರಾಜ್ಯ-ರಾಷ್ಟ್ರವನ್ನಾಗಿಸಲು ಪ್ರಯತ್ನಿಸುತ್ತಿಲ್ಲ ಎಂದು ವಿಷಾದಿಸಿದರು.
ಜನವಸತಿ ಇರುವ ಸ್ಥಳಗಳಲ್ಲಿ ವೈನ್‌ಶಾಪ್, ಬಾರ್‌ಗೆ ಪರವಾನಿಗೆ ನೀಡುವ ಬದಲು ತ್ಯಾಜ್ಯ ವಿಲೇವಾರಿ ಘಟಕದ ಬಳಿ ಸರಕಾರ ನಿರ್ಮಿಸಲಿ ಎಂದು ಅಂಬೇಡ್ಕರ್‌ವಾದಿ ದಯಾನಂದ ನುಡಿ ದರು. ಎಲ್ಲ ಅನಿಷ್ಟಗಳಿಂದ ಮುಕ್ತರಾಗಲು ವೈನ್ ಶಾಪ್ ರದ್ದಾಗ ಬೇಕು ಎಂದು ಪಂ. ಸದಸ್ಯ ಕೇಶವ ಗೌಡ ಆಲಡ್ಕ ಆಗ್ರಹಿಸಿದರು. ಎಲ್ಲೆಡೆ ಸರ್ವ ರೀತಿಯ ಶಾಂತಿ ನೆಲೆಸಲಿ ಎಂಬ ನಾರಾಯಣ ಗುರುಸ್ವಾಮಿಗಳ ತತ್ತÌ ಅನುಸರಿಸುವ ಬದಲು ಮದ್ಯದಂಗಡಿ ಪ್ರಾರಂಭಿಸಿ ಅವಮಾನ ಮಾಡಿ ದ್ದಾರೆ ಎಂದು ತಾ.ಪಂ. ಸದಸ್ಯೆ ತಾರಾ ಕೇಪುಳು ಟೀಕಿಸಿದರು.