Advertisement

ಕ್ವಾರಂಟೈನ್‌ ಕೇಂದ್ರಗಳಲ್ಲಿ ಅವ್ಯವಸ್ಥೆ ಆಗರ

01:23 PM May 25, 2020 | Naveen |

ಆಳಂದ: ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸದಿಂದ ಏಳು ಜನರು ಅಸುನೀಗಿದ್ದು, 141 ಜನ ಸೋಂಕಿತರಿದ್ದಾರೆ. ತಬ್ಲೀಘಿ ಹಾಗೂ ಮುಂಬೈ ವಲಸಿಗರ ಮೂಲಕ ಸೋಂಕು ಎಲ್ಲೆಡೆ ಹಬ್ಬಿ ಗಂಡಾಂತರ ತಂದೊಡ್ಡಿದೆ. ವಲಸಿಗರು ಕ್ವಾರಂಟೈನ್‌ದಲ್ಲಿದ್ದಾರೆ. ಆದರೆ ಕ್ವಾರಂಟೈನ್‌ ಕೇಂದ್ರಗಳೇ ಅವ್ಯವಸ್ಥೆ ಆಗರವಾಗಿವೆ. ಮೂಲಭೂತ ಸೌಲಭ್ಯಗಳಿಲ್ಲದೇ ಕ್ವಾರಂಟೈನ್‌ ಕೇಂದ್ರಗಳೇ ಅನಾರೋಗ್ಯಕ್ಕೆ ಒಳಗಾಗಿರುವಾಗ ಅಲ್ಲಿನ ವಲಸಿಗರ ಪಾಡು ಹೇಳತೀರದಂತಾಗಿದೆ.

Advertisement

ಹಡಲಗಿ ಗ್ರಾಮದಲ್ಲಿ ಕ್ವಾರಂಟೈನ್‌ ಮಾಡಿರುವ ಜನರಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಕೆಲವರನ್ನು ಊರಲ್ಲಿ ಬಿಡಲಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ ಸಣ್ಣಮನಿ ಆರೋಪಿಸಿದ್ದಾರೆ. ತೀರ್ಥ ತಾಂಡಾ ಮತ್ತು ಗ್ರಾಮದಲ್ಲಿ ಸ್ಥಳೀಯರು ವಿರೋಧಿಸಿದ್ದಕ್ಕೆ 200 ಜನರು ತಮ್ಮ ಹೊಲಗಳಲ್ಲಿ ಸ್ವಯಂ ಕ್ವಾರಂಟೈನ್‌ ಮಾಡಿಕೊಂಡಿದ್ದಾರೆ. ಇವರಿಗೆ ಸೌಲಭ್ಯ ನೀಡುವಂತೆ ಒತ್ತಾಯಿಸಿದಾಗ ಆರು ದಿನಗಳ ಬಳಿಕ ದಿನಸಿ ಕಿಟ್‌ ನೀಡಲಾಗಿದೆ. ಮದಗುಣಕಿ, ಯಳಸಂಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿದ ಕಾರ್ಮಿಕರಿಗೆ ಪ್ರಾಥಮಿಕ ಸುರಕ್ಷಾ ಕ್ರಮಗಳನ್ನು ನೀಡಿಲ್ಲ. ಅಂತರ ಕಾಪಾಡಿಕೊಂಡಿಲ್ಲ. ಕಾರ್ಮಿಕರು ಮುಂಜಾಗ್ರತೆ ಅರಿವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸಣ್ಣಮನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಲಸೆ ಬಂದವರನ್ನು ನಿಂಗದಳ್ಳಿ ಮತ್ತು ಮದಗುಣಕಿ ಗ್ರಾಮದಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಜನರು ಮುಂಜಾಗ್ರತೆ ವಹಿಸುತ್ತಿಲ್ಲ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅವೈಜ್ಞಾನಿಕ ಕ್ವಾರಂಟೈನ್‌: ಗ್ರಾಮಗಳ ಶಾಲೆಗಳಲ್ಲಿ ಕ್ವಾರಂಟೈನ್‌ ಕೈಗೊಳ್ಳುವ ಬದಲು ಆಳಂದ ಪಟ್ಟಣ ಅಥವಾ ಹೋಬಳಿ ಮಟ್ಟದಲ್ಲಿ ದೊಡ್ಡ ಕಟ್ಟಡ, ಮೂಲಸೌಲಭ್ಯ ಇರುವ ಸ್ಥಳಗಳಲ್ಲಿ ಕೈಗೊಳ್ಳಬೇಕಿತ್ತು. ಆಯಾ ಗ್ರಾಮಗಳ ಶಾಲೆಗಳಲ್ಲಿ ಕ್ವಾರಂಟೈನ್‌ ಮಾಡಿದ್ದರಿಂದ ಊಟ, ವಸತಿ ನೀರು ಮೂಲ ಸೌಲಭ್ಯ ಒದಗಿಸುವ ಜವಾಬ್ದಾರಿ ಹೊತ್ತಿರುವ ಗ್ರಾ.ಪಂಗಳು ಸೂಕ್ತ ಕ್ರಮ ಕೈಗೊಳ್ಳಲು ಆಗದ ಕಾರಣ ಸ್ಥಳೀಯ ಸಿಬ್ಬಂದಿ ಪರದಾಡುವಂತೆ ಆಗಿದೆ. ಯಾದಗಿರಿ ಜಿಲ್ಲೆ ಮಾದರಿಯಂತೆ ಇಲ್ಲೂ ಒಂದೇ ಕಡೆ ಕ್ವಾರಂಟೈನ್‌ ಕೇಂದ್ರ ಸ್ಥಾಪಿಸಿದ್ದರೆ ಆಯಾ ಗ್ರಾ.ಪಂ ಸಿಬ್ಬಂದಿ ನಿಯೋಜಿಸಿ ತಮ್ಮ ವ್ಯಾಪ್ತಿಯ ಸಂಬಂ ಧಿತರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುತ್ತಿತ್ತು.

ಅನುಚಿತ ವರ್ತನೆಗೆ ಶಿಕ್ಷೆ: ಕ್ವಾರಂಟೈನ್‌ಗೆ ದಾಖಲಾದವರಿಂದ 12 ದಿನಗಳ ಬಳಿಕ ವೈದ್ಯ ಸಿಬ್ಬಂದಿಗಳಿಂದ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಿ ಕೊಡಲಾಗುವುದು. ಸಕಾರಾತ್ಮಕ ವರದಿ ಬಂದರೆ 15 ದಿನಗಳ ಬಳಿಕ ಮನೆಗೆ ಕಳುಹಿಸಲಾಗುವುದು. ಕೋವಿಡ್‌-19 ಶಂಕೆ ವ್ಯಕ್ತವಾದರೆ ಜಿಲ್ಲಾ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಕ್ವಾರಂಟೈನ್‌ ದಲ್ಲಿ ಇದ್ದವರು ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದರೆ, ಬೇಕಾಬಿಟ್ಟಿ ಹೊರಗೆ ಓಡಾಡಿದರೆ ಜೈಲು ಶಿಕ್ಷೆ ವಿ ಧಿಸಲಾಗುವುದು ಎಂದು ತಹಶೀಲ್ದಾರ್‌ ದಯಾನಂದ ಪಾಟೀಲ ಎಚ್ಚರಿಸಿದ್ದಾರೆ.

ಸಮಸ್ಯೆಗಳಿದ್ದರೆ ನಾಗರಿಕರು ಸಹಾಯವಾಣಿ ಸಂಖ್ಯೆ 08477-202428ಕ್ಕೆ ಕರೆ ಮಾಡಿ ತಿಳಿಸಬೇಕು. ಆಯಾ ಗ್ರಾಮದ ಶಾಲೆಗಳಲ್ಲಿ ಕ್ವಾರಂಟೈನ್‌ ಮಾಡಿ ಸೌಕರ್ಯ ಒದಗಿಸಲಾಗುತ್ತಿದೆ. ಗ್ರಾಮೀಣ ಕ್ವಾರಂಟೈನ್‌ ಕೇಂದ್ರಗಳನ್ನು ಬಿಟ್ಟು ದೊಡ್ಡ ಮಟ್ಟದಲ್ಲಿ ಕಿತ್ತೂರುರಾಣಿ ಚನ್ನಮ್ಮ ವಸತಿ, ಆದರ್ಶ ಮತ್ತು ಕಸ್ತೂರಬಾ ಶಾಲೆಗಳಲ್ಲಿ ಕ್ವಾರಂಟೈನ್‌ ಸ್ಥಾಪಿಸಲು ವ್ಯವಸ್ಥೆ ಇದೆ. 141 ಕ್ವಾರಂಟೈನ್‌ಗಳಲ್ಲಿ 5862 ಜನರು ದಾಖಲಾಗಿದ್ದಾರೆ. ಆಯಾ ಸಂಬಂಧಿ ತ ಗ್ರಾ.ಪಂ ಅಭಿವೃದ್ಧಿ ಅಧಿ ಕಾರಿಗಳು ಊಟ, ವ್ಯವಸ್ಥೆ ನೋಡಿಕೊಳ್ಳುತ್ತಿದ್ದು, ಅಡುಗೆ ಸಹಾಯಕರ ಮೂಲಕ ಅಡುಗೆ ಮಾಡಿ ನೀಡಲಾಗುತ್ತಿದೆ. ವಾರದಲ್ಲಿ ಎರಡು ಬಾರಿ ಬಾಳೆ ಹಣ್ಣು, ಮೊಟ್ಟೆ, ಮಕ್ಕಳಿಗೆ ಹಾಲು, ಬಿಸ್ಕಿಟ್‌ ನೀಡಲಾಗುತ್ತಿದೆ. ಮನೋರಂಜನೆಗಾಗಿ ಟಿವಿ, ಕೇರಂಬೋರ್ಡ್‌ ನೀಡಲಾಗಿದೆ.
ದಯಾನಂದ ಪಾಟೀಲ,
ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next