Advertisement

ಸಾಹು ಮೇಲೆ‌ ಹಲ್ಲೆ ಖಂಡಿಸಿ ಪ್ರತಿಭಟನೆ

10:11 AM May 23, 2019 | Naveen |

ಆಳಂದ: ತಾಲೂಕಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಬೆಳೆಗಾರ ಸಂಘದ ತಾಲೂಕು ಅಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ ಸಾಹು ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕು ಘಟಕ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿತು.

Advertisement

ಸೇನೆ ತಾಲೂಕು ಅಧ್ಯಕ್ಷ ರಮೇಶ ಜಗತಿ ನೇತೃತ್ವದಲ್ಲಿ ಗ್ರೇಡ್‌-2 ತಹಶೀಲ್ದಾರ್‌ ಬಿ.ಜಿ. ಕುದರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಕಾರ್ಖಾನೆ ಆಡಳಿತ ಮಂಡಳಿ 9 ವರ್ಷಗಳಿಂದಲೂ 100 ಕೋಟಿ ರೂ. ಬಾಕಿ ನೀಡದೆ, ರೈತರ ಜತೆಯಲ್ಲಿ ಚಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬಾಕಿ ಹಣ ಕೇಳಲು ಹೋದ ಬೆಳೆಗಾರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು ಅವರ ಮೇಲೆಯೇ ಕಾರ್ಖಾನೆಯಲ್ಲಿರುವ ಬಾಡಿಗೆ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಪೊಲೀಸರ ಸಹಾಯದಿಂದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು

ಇಂಥ ಅನೇಕ ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತಿವೆ. ಕಾರ್ಖಾನೆಯವರ ದಬ್ಟಾಳಿಕೆ ರೈತರ ಮೇಲೆ ದಿನೇ ದಿನೇ ಹೆಚ್ಚಾಗುತ್ತಿದೆ. ತಾಲೂಕಿನ ಕಬ್ಬು ಬೆಳೆಗಾರರು ಕಾರ್ಖಾನೆ ಆಡಳಿತ ಮಂಡಳಿ ಭಯದಲ್ಲಿ ಬದುಕುತ್ತಿದ್ದಾರೆ ಎಂದು ಆರೋಪಿಸಿದರು.

ಎನ್‌ಎಸ್‌ಎಲ್ಗೆ ಕೆಲವರು ಹಿಂಬಾಗಿಲಿನಿಂದ ಬೆಂಬಲ ನೀಡುತ್ತಿದ್ದಾರೆ. ತಾಲೂಕಿನ ಶಾಸಕರಿಗೆ ಕಾರ್ಖಾನೆ ವಿಷಯ ಗೊತ್ತಿದೆ. ಹಾಗಾಗಿ ರೈತರಿಗೆ ನ್ಯಾಯ ಕೊಡಸಬೇಕು. ತಾಲೂಕು, ಜಿಲ್ಲಾಡಳಿತ ಕೂಡಲೇ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. 15 ದಿನದಲ್ಲಿ ರೈತರ ಬಾಕಿ ಮೊತ್ತ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸೇನೆಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಸಲ್ಲಿಸಿ ಎಚ್ಚರಿಸಿದರು.

Advertisement

ಜಯ ಕರ್ನಾಟಕ ಸಂಘಟನೆ ಯುವ ಘಟಕದ ಅಧ್ಯಕ್ಷ ಪ್ರಕಾಶ ಪಾಟೀಲ, ಪ್ರಮುಖ ರೇವಪ್ಪ ಪೊಲೀಸ್‌ಪಾಟೀಲ, ಮಹಾಂತೇಶ ಅರಗುಂಡಗಿ, ಉಮೇಶ ಗಿರಿ ಗೋಸಾವಿ, ನಾಗರಾಜ ಪೊಲೀಸ್‌ಪಾಟೀಲ, ಶರಣಬಸಪ್ಪ ಮುನ್ನೋಳ್ಳಿ, ಸಂಜಯಕುಮಾರ ಕಲ್ಮಂತಣಿ, ಶರಬಸಪ್ಪ ಮಠ, ಸಂಗಮನಾಥ ಜಗತಿ, ಸೋಮನಾಥ ಹಿರೋಳಿ, ಭಾಗ್ಯೇಶ ಪಾಟೀಲ, ಮಲ್ಲು ಅರಳ ಗುಂಡಗಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next