Advertisement

15 ಗ್ರಾಮಗಳಲ್ಲಿ ನೀರಿಗೆ ಪರದಾಟ

11:53 AM May 04, 2020 | Naveen |

ಆಳಂದ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿ ಕೊಳ್ಳಬೇಕು ಎನ್ನುವ ಸರ್ಕಾರದ ಮುಂಜಾಗ್ರತಾ ಕ್ರಮದ ನಡುವೆಯೂ ತಾಲೂಕಿನ ತಾಂಡಾ ಸೇರಿದಂತೆ 188
ಹಳ್ಳಿಗಗಳ ಪೈಕಿ 15 ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈ ನಡುವೆ ನೀರು ಪೂರೈಕೆಗೆ ಅಗತ್ಯವಾಗಿರುವ ವಿದ್ಯುತ್‌ ಸರಬರಾಜು ಸಹ ನಿರೀಕ್ಷಿತವಾಗಿ ಪೂರೈಕೆ ಆಗುತ್ತಿಲ್ಲ. ನಿಂಗದಳ್ಳಿ, ತಡಕಲ್‌, ಮಾಡಿಯಾಳ, ಕಣ್ಮಸ್‌ ದಲಿತ ಬಡಾವಣೆ, ನಂದಗೂರ ಹೀಗೆ 15 ಹಳ್ಳಿಗಳಲ್ಲಿ ನೀರಿಲ್ಲದ ಪರಿಸ್ಥಿತಿ ತಲೆದೂರಿದೆ.

Advertisement

ಬಾರದ ಗ್ರಾ.ಪಂ ಅಧಿ ಕಾರಿಗಳು: ಕೋವಿಡ್‌-19 ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೇರಿದಂತೆ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಸ್ಪಂದಿಸಬೇಕಾದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನಕ್ಕೆ ಬರುತ್ತಲೇ ಇಲ್ಲ.

20 ಲಕ್ಷ ರೂ. ಬಿಡುಗಡೆ: ನೀರಿನ ಸಮಸ್ಯೆಗೆ ಸ್ಪಂದಿಸುವ ಸಲುವಾಗಿ ಟಾಸ್ಕ್ ಪೋರ್ಸ್‌ ಸಮಿತಿಯಿಂದ 20ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಪೈಪ್‌ಲೈನ್‌ ಕಾಮಗಾರಿ ಸೇರಿ
ಎಂಟು ಕೊಳವೆ ಬಾವಿ ತೋಡಬೇಕಿದ್ದು, ಈಗಾಗಲೇ ಮಾಡಿಯಾಳದಲ್ಲಿ ಕೊರೆದ ಕೊಳವೆ ವಿಫಲವಾಗಿದೆ. ಮದಗುಣಕಿಯಲ್ಲಿ ಒಂದಿಂಚು ನೀರು ದೊರೆತಿದ್ದು ಸಾಕಾಗೋದಿಲ್ಲ ಎಂದು ಜಿ.ಪಂ ಗ್ರಾಮೀಣ ನೀರು ಸರಬರಾಜು ಎಇಇ ಚಂದ್ರಮೌಳಿ ತಿಳಿಸಿದ್ದಾರೆ.

ಮಾಡಿಯಾಳ ಗ್ರಾ.ಪಂ ಕೇಂದ್ರವಾಗಿದ್ದು, ಹಲವು ದಿನಗಳಿಂದ ಜನತೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಲಾಕ್‌ ಡೌನ್‌ನಿಂದಾಗಿ ಗುಳೆಹೋದ ಕಾರ್ಮಿಕರು ಮರಳಿ ಬಂದಿದ್ದಾರೆ. ಕುಡಿಯಲು ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಸಂಬಂಧಿತರು ಸ್ಪಂದಿಸದಿದ್ದಲ್ಲಿ ಹೋರಾಟ ಕೈಗೊಳ್ಳಲಾಗುವುದು.
ಭೀಮಾಶಂಕರ
ಮಾಡಿಯಾಳ, ಸಿಪಿಐ ಜಿಲ್ಲಾ
ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next