Advertisement

ಐದು ಗ್ರಾಮಗಳಿಗೆ ವಕ್ಕರಿಸಿದ ಸೋಂಕು

12:18 PM Jun 01, 2020 | Naveen |

ಆಳಂದ: ಮುಂಬೈನಿಂದ ಬಂದವರು ಇನ್ನೇನು ಕ್ವಾರಂಟೈನ್‌ ಅವಧಿ ಮುಗಿಯತು ಎಂದು ತಪಾಸಣೆ ವರದಿ ಬರುವ ಮೊದಲೆ ಮನೆಗಳಿಗೆ ತೆರೆಳಿ 7 ದಿನ ಅವಧಿಗಾಗಿ ಹೋಂ ಕ್ವಾರಂಟೈನ್‌ ಗೆ ಒಳಗಾಗಿದ್ದ ಸುಮಾರು 10 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Advertisement

ತಾಲೂಕಿನ ಭೂಸನೂರ ಗ್ರಾಮದಲ್ಲಿ ಇಬ್ಬರು ಬಾಲಕಿಯರು ಮತ್ತು ಓರ್ವ ಬಾಲಕ ಹಾಗೂ ಓರ್ವ ಪುರುಷನಿಗೆ ಸೋಂಕು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಮತ್ತೊಂದೆಡೆ ನರೋಣಾ ಕೆ. ತಾಂಡಾದಲ್ಲಿ ಓರ್ವ ಮಹಿಳೆ, ಕಿಣ್ಣಿಸುಲ್ತಾನ ತಾಂಡಾದಲ್ಲಿ 18 ವರ್ಷದ ಯುವತಿ, ಕೊರಳ್ಳಿಯ ಗ್ರಾಮದಲ್ಲಿ ಓರ್ವ ಯುವತಿ ಹಾಗೂ ಓರ್ವ ಮಹಿಳೆಗೆ ಸೋಂಕು ದೃಢಪಟಿದೆ. ಇವರೆಲ್ಲರು ಮುಂಬೈನಿಂದ ಆಗಮಿಸಿ ಗ್ರಾಮಗಳಲ್ಲಿನ ಕ್ವಾರಂಟೈನ್‌ಲ್ಲಿದ್ದರು. ಅಲ್ಲದೆ, ಧುತ್ತರಗಾಂವ ಗ್ರಾಮಕ್ಕೆ ಪುಣೆಯಿಂದ ಆಗಮಿಸಿದ್ದ ಓರ್ವ ಯುವತಿಗೂ ಕೋವಿಡ್‌-19 ಸೋಂಕು ತಗುಲಿದೆ.

ಇವರೆಲ್ಲರು ವಲಸೆ ಹೋಗಿ ಬಂದಿದ್ದರಿಂದ ಆಯಾ ಗ್ರಾಮಗಳ ಕ್ವಾರಂಟೈನ್‌ನಲ್ಲಿ ಸುಮಾರು 14 ದಿನಗಳವರೆಗೆ ಇರಿಸಲಾಗಿತ್ತು. ಅವಧಿ ಮುಗಿಯುತ್ತ ಬರುತ್ತಿದ್ದಂತೆ ಮನೆಗಳಿಗೆ ತೆರಳಿದ್ದಾರೆ. ಮನೆಗೆ ತೆರಳುವ ಮೊದಲು ಆರೋಗ್ಯ ಇಲಾಖೆಯಿಂದ ಇವರ ಗಂಟಲು ದ್ರವ ಮಾದರಿಯ ಪಡೆದು ತಪಾಸಣೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ವರದಿ ಬರುವ ತನಕ ಕ್ವಾರಂಟೈನ್‌ನಲ್ಲಿರಬೇಕಾದವರು ಮನೆಗಳಿಗೆ ಕಳುಹಿಸಲಾಗಿದೆ. ಮನೆಗೆ ಬಿಟ್ಟ ಎರಡ್ಮೂರು ದಿನಗಳಾದ ಬಳಿಕ ಈ 10 ಜನರಲ್ಲಿ ಸಕಾರಾತ್ಮಕವಾಗಿ ಸೋಂಕು ಪತ್ತೆಯಾದ ಮೇಲೆ ಮತ್ತೆ ಇವರೆಲ್ಲರನ್ನು ಹುಡುಕಿ ಆಸ್ಪತ್ರೆಗೆ ಸೇರಿಸಲಾಗಿದೆ. ಸುಮಾರು 14ನೇ ದಿನಗಳ ಕಾಲ ಇವರೆಲ್ಲರಿಗೂ ಸರ್ಕಾರಿ ಕ್ವಾರಂಟೈನ್‌ ಲ್ಲಿದ್ದಾಗ ಕೋವಿಡ್ ಸೋಂಕಿನ ಕುರಿತು ಯಾವುದೇ ಲಕ್ಷಣಗಳಿರಲಿಲ್ಲ. ತಪಾಸಣೆ ಬಳಿಕ ಸೋಂಕು ದೃಢಪಟ್ಟಿದ್ದು,ಇದರಿಂದ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ಆಡಳಿತ ಹೈ ಅಲರ್ಟ್‌: ಕ್ವಾರಂಟೈನಲ್ಲಿದ್ದ ನೂರಾರು ಜನರ ಪೈಕಿ ಪ್ರಾಥಮಿಕ ವರದಿಯಲ್ಲಿ 10 ಜನರಿಗೆ ಯಾವುದೇ ಲಕ್ಷಣ ಇಲ್ಲವೆಂದು ವರದಿ ಬರುವ ಮೊದಲೆ ಮನೆಗೆ ಕಳುಹಿಸಿಲಾಗಿದೆ. ಆದರೆ ವರದಿಯಲ್ಲಿ ಸೋಂಕು ಪತ್ತೆಯಾಗಿದ್ದರಿದ ಈಗ ತಾಲೂಕು ಆಡಳಿತ ಹೈ ಅಲರ್ಟ್‌ ಆಗುವ ಮೂಲಕ ಕ್ವಾರಂಟೈನ್‌ ಮುಗಿದ ಮನೆಗೆ ತೆರಳಿದವರ ಮೇಲೂ ಹದ್ದಿನ ಕಣ್ಣಿಟ್ಟು, ಎಲ್ಲಾ ಕ್ವಾರಂಟೈನ್‌ಗಳ ಆರೋಗ್ಯದ ಮಾಹಿತಿ ಕಲೆಹಾಕಲು ಚುರುಕಿನ ಕಾರ್ಯಾಚರಣೆ ಆರಂಭಿಸಿದೆ.

ಸಭೆ ಕರೆದು ತಾಕೀತು: ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾವಹಿಸಲು ಸರ್ಕಾರ ಕ್ವಾರಂಟೈನ್‌ ವಾಚ್‌ ಆ್ಯಪ್‌ ಮೂಲಕ ಗ್ರಾಪಂ ಸಿಬ್ಬಂದಿ ಮನೆ, ಮನೆಗೆ ತೆರಳಿ ಅವರ ಆರೋಗ್ಯದ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸುವಂತೆ ತಹಶೀಲ್ದಾರ್‌ ದಯಾನಂದ ಪಾಟೀಲ ಗ್ರಾಪಂ ಸಿಬ್ಬಂದಿಗೆ ಭಾನುವಾರ ಸಭೆ ಕರೆದು ತಾಕೀತು ಮಾಡಿದ್ದಾರೆ.

Advertisement

ಕಟ್ಟುನಿಟ್ಟಿನ ಕ್ರಮ: ಕ್ವಾರಂಟೈನ್‌ನಲ್ಲಿದ್ದು 14 ದಿನಗಳ ಮುಗಿದವರಿಗೆ ಗಂಟಲು ದ್ರವದ ಮಾದರಿ ಪಡೆದು, ಥರ್ಮಲ್‌ ಸ್ಕ್ರೀನಿಂಗ್‌ ತಪಾಸಣೆ ಕೈಗೊಂಡು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ ಇನ್ನೂ 7 ದಿನಗಳ ಕಾಲ ತಮ್ಮ ಮನೆಯಲ್ಲೂ ಸ್ವಯಂ ಕ್ವಾರಂಟೈನ್‌ ಕೈಗೊಳ್ಳುವಂತೆ ಸೂಚಿಸುತ್ತೇವೆ. ಹೋ ಕ್ವಾರಂಟೈನ್‌ಗೆ ಒಳಗಾದ ಈ 10 ಜನರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂಳಿದ ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾವಹಿಸಲು ಆಶಾ ಕಾರ್ಯಕರ್ತೆಯರ ಮೂಲಕವೂ ವರದಿ ಪಡೆಯಲಾಗುತ್ತದೆ ಎಂದು ಆರೋಗ್ಯಾಧಿಕಾರಿ ಡಾ| ಶ್ರೀನಿವಾಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next