Advertisement

ಕೋಟ್ಯಂತರ ರೂ. ನಷ್ಟ-ಜನ ಜೀವನ ಪರದಾಟ

12:34 PM Mar 20, 2020 | |

ಆಳಂದ: ಕೊರೊನಾ ವೈರಸ್‌ ಹರಡದಿರಲು ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಅಂಗಡಿ, ಮುಗ್ಗಟ್ಟನ್ನು ಬಂದ್‌ ಮಾಡಿದ್ದರಿಂದ ಹಾಗೂ ಗುರುವಾರ ಸಂತೆ ರದ್ದು ಮಾಡಿದ್ದರಿಂದ ಕೋಟ್ಯಂತರ ರೂ.ಗಳ ಆರ್ಥಿಕ ವಹಿವಾಟಿನಲ್ಲಿ ನಷ್ಟ ಉಂಟಾಗಿದ್ದು, ಜನ- ಜೀವನ ಸಂಕಷ್ಟದಿಂದ ಬಳಲುವಂತಾಗಿತ್ತು.

Advertisement

ಬೆಳಗ್ಗೆಯಿಂದಲೇ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪಟ್ಟಣಕ್ಕೆ ಬರುತ್ತಿದ್ದ ವ್ಯಾಪಾರಿಗಳನ್ನು ದೂರದಲ್ಲೇ ತಡೆದು ವಾಪಸ್‌ ಕಳುಹಿಸಲಾಯಿತು. ತರಕಾರಿ, ಬಟ್ಟೆ, ದವಸ-ಧಾನ್ಯಗಳ ಸಂತೆ ತೆರೆಯದಂತೆ ಪುರಸಭೆ ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು.

ಪಟ್ಟಣ ಒಳ ಹಾಗೂ ಹೊರಭಾಗದಲ್ಲಿ ಸಂಪೂರ್ಣ ಬಂದ್‌ ಆಗಿದ್ದರೂ ಜನರ ಓಡಾಟ ಮಾತ್ರ ಎಂದಿನಂತೆ ಇತ್ತು. ಔಷಧಿ ಅಂಗಡಿ, ಆಸ್ಪತ್ರೆಗಳನ್ನು ಹೊರತು ಪಡಿಸಿ ಕಿರಾಣಿ, ತರಕಾರಿ, ಹೋಟೆಲ್‌ ಮುಚ್ಚಿದ್ದರಿಂದ ಹಾಲು, ಹಣ್ಣು, ತರಕಾರಿ, ಚಹಾ, ಗುಟ್ಕಾ ಸೇರಿದಂತೆ ದಿನ ಬಳಕೆ ವಸ್ತುಗಳು ದೊರೆಯದೆ ಜನರು
ಪರದಾಡಿದರು.

ಮತ್ತೊಂದೆಡೆ ಮಹಾರಾಷ್ಟ್ರಕ್ಕೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿತ್ತು. ಅಲ್ಲದೇ ಖಾಸಗಿ ಜೀಪು, ಬಸ್‌ಗಳು ಸಂಚರಿಸಿದಂತೆ ನೋಡಿಕೊಳ್ಳಬೇಕು. ಮಂದಿರ, ಮಸೀದಿಗಳಲ್ಲಿ ಸಾರ್ವಜನಿಕ ಪ್ರಾರ್ಥನೆ, ಹೆಚ್ಚಿನ ಜನರು ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳದೇ ಇರುವಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್‌ ದಯಾನಂದ ಪಾಟೀಲ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದಾರೆ.

ಸಿಪಿಐ ಶಿವಾನದ ಗಾಣಿಗರ್‌, ಪುರಸಭೆ ಮುಖ್ಯಾಧಿಕಾರಿ ಬಾಬುರಾವ್‌ ವಿಭೂತೆ, ತಾ.ಪಂ ಇಒ ಡಾ| ಸಂಜಯ ರೆಡ್ಡಿ, ಆರೋಗ್ಯಾಧಿಕಾರಿ ಡಾ| ಜಿ.ಅಭಯಕುಮಾರ, ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ, ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಮಡಿವಾಳ ಮತ್ತಿತರರು ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next