Advertisement

ಆಲಮಟ್ಟಿ ಜಲಾಶಯ ಭರ್ತಿಗೆ ದಿನಗಣನೆ

02:00 PM Jul 12, 2020 | Suhan S |

ಆಲಮಟ್ಟಿ: ಕೃಷ್ಣೆಯ ಉಗಮಸ್ಥಾನ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವುದು ಆಲಮಟ್ಟಿ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನಲ್ಲಿ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಇದರಿಂದ ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿದೆ.

Advertisement

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣೆಯ ಒಡಲಮಕ್ಕಳ ಸಂತಸ ಇಮ್ಮಡಿಗೊಂಡಂತಾಗಿದೆ. 519.6 ಮೀ. ಗರಿಷ್ಠ ಎತ್ತರದಲ್ಲಿ 123.081ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ 517.36 ಮೀ. ಎತ್ತರವಾಗಿ 89.013 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರಲ್ಲಿ ಜಲಚರಗಳಿಗೆ 17.62 ಟಿಎಂಸಿ ಅಡಿ ನೀರು ಮೀಸಲಾಗಿದ್ದು, ಇನ್ನುಳಿದ 71.393 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದೆ.

ಲಾಲ ಬಹದ್ದೂರಶಾಸ್ತ್ರಿ ಜಲಾಶಯಕ್ಕೆ ಶನಿವಾರ 73,791 ಕ್ಯೂಸೆಕ್‌ ನೀರು ಹರಿದುಬಂದಿದೆ. ಇನ್ನುಳಿದಂತೆ ಜಲಾಶಯದ ಬಲಭಾಗದಲ್ಲಿರುವ ಕೆಪಿಸಿಎಲ್‌ನ ಆಲಮಟ್ಟಿ ಜಲವಿದ್ಯುದಾಗಾರದ ಮೂಲಕವಾಗಿ 35 ಸಾವಿರ ಕ್ಯೂಸೆಕ್‌ ನೀರನ್ನು ನದಿಪಾತ್ರಕ್ಕೆ ಹರಿದು ಬಿಡಲಾಗುತ್ತಿದೆ. ಇನ್ನುಳಿದಂತೆ 600 ಕ್ಯೂಸೆಕ್‌ ನೀರನ್ನು ಮುಳವಾಡ ಏತನೀರಾವರಿ ಯೋಜನೆ ವ್ಯಾಪ್ತಿಯ ವಿವಿಧ ಕಾಲುವೆಗಳ ಮೂಲಕಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ಮತ್ತು ಬಹುಹಳ್ಳಿ ಕುಡಿಯುವ ನೀರಿನ ಘಟಕಗಳಿಗೆ ಹಾಗೂ ಶಾಸ್ತ್ರಿ ಜಲಾಶಯದ ಹಿನ್ನೀರಿನ ಭಾಷ್ಪೀಭವನ ಸೇರಿದಂತೆ 500 ಕ್ಯೂಸೆಕ್‌ ಸೇರಿ ಒಟ್ಟು 36,110 ಕ್ಯೂಸೆಕ್‌ ನೀರು ಹೊರಹೋಗುತ್ತಿದೆ. ಕಳೆದ ವರ್ಷ ಇದೇ ದಿನ 514.90 ಮೀ. ಎತ್ತರದಲ್ಲಿ 1,04,290 ಕ್ಯೂಸೆಕ್‌ ನೀರು ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದುಬರುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next