ಆಲಮೇಲ: ಆರೋಗ್ಯ ಇಲಾಖೆ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯವನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಅಂಗವಿಕಲರಿಗೆ ಮನೆಯಲ್ಲೇ ಸ್ವಉದ್ಯೋಗ ಕೈಗೊಳ್ಳಲು ಜಿಲ್ಲಾಸ್ಪತ್ರೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಲಮೇಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪ್ರಶಾಂತ ದುಮಗೊಂಡ ಹೇಳಿದರು.
ಪಟ್ಟಣದ ನಿರ್ಮಲಾಲಯ ಸಮಾಜ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ದಿವ್ಯಾಂಗ ಚೇತನರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಅಂಗವಿಕಲರಿಗೆ ವಿಶೇಷ ಚೇತನರು ಎಂದು ಗುರುತಿಸಿ ಅವರ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಲಾಗುತ್ತಿದೆ. ವಿಕಲಚೇತನರು ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಕೇಳಿ ಪಡೆದುಕೊಳ್ಳಿ. ಕೆಲ ವಿಕಲಚೇತನರಿಗೆ ತಾಲೂಕು, ಜಿಲ್ಲಾಸ್ಪತ್ರೆಯಲ್ಲಿ ಡಾ| ಮರುಳಸಿದ್ದ ನೇತೃತ್ವದಲ್ಲಿ ಚಿಕಿತ್ಸೆ ಮತ್ತು ತರಬೇತಿ ನೀಡಲಾಗುತ್ತಿದೆ. ವಿಕಲಚೇತನರಿಗೆ ತರಬೇತಿ ನೀಡಿ ಆತ್ಮಸ್ಥೈರ್ಯ ತುಂಬಬೇಕು ಎಂದರು.
ನಿರ್ಮಲಾಲಯ ಸಂಸ್ಥೆಯ ಸಮಾಜ ಸೇವಕಿ ಸಿಸ್ಟರ್ ಒಲಿವಾ ಮಾತನಾಡಿ, ಈ ಭಾಗದ 30 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ವಿಕಲಚೇತನರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ಕೆಲಸ ನಮ್ಮ ಸಂಸ್ಥೆಯಿಂದ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪ್ಪು ಶೆಟ್ಟಿ ಮಾನತಾಡಿದರು. ಗ್ರಾಮ ಲೆಕ್ಕಾಧಿಕಾರಿ ಮತ್ತು ಪ್ರಭಾರಿ ಕಂದಾಯ ಅಧಿಕಾರಿ ಪಿ.ಕೆ. ಹುಡೆದ, ಸಿಂದಗಿ ಸರಕಾರಿ ಆಸ್ಪತ್ರೆಯ ಬುದ್ಧಿಮಾಂದ್ಯ ಸಲಹೆಗಾರ್ತಿ ಭಾಗ್ಯಶ್ರೀ, ಕರ್ನಾಟಕ ಅಂಗಲವಿಕಲರ ಐಕ್ಯತಾ ವೇದಿಕೆ ಅಧ್ಯಕ್ಷೆ ಸಬಿಯಾ ಬೇಗಂ, ಯಲ್ಲಮ್ಮ ಮುಳವಾರಡ ಮಾತನಾಡಿದರು. ನಿರ್ಮಲಾಲಯ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಸಿಸಿಲಿಯಾ, ಸಿಸ್ಟರ್ ಒಲಿವಾ, ರೇನುಕಾ ಮಾದರ, ಅನುಸುಯಾ ಪ್ಯಾಟಿ ಇದ್ದರು.
ಸಿಸ್ಟರ್ ಒಲಿವಾ ಸ್ವಾಗತಿಸಿದರು. ವಿಜಯ ಕುಮಸಗಿ ನಿರೂಪಿಸಿದರು. ಆನಂದ ಕುಮಸಗಿ ವಂದಿಸಿದರು.