Advertisement

ಆಲಮೇಲ: ಮಾಸ್ಕ್ ಧರಿಸದ ವ್ಯಾಪಾರಿಗಳಿಗೆ ದಂಡ

04:27 PM Jun 06, 2020 | Naveen |

ಆಲಮೇಲ: ಕೋವಿಡ್‌-19 ಹರಡದಂತೆ ಅಗತ್ಯ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳದ ಅಂಗಡಿ ಮತ್ತು ಬೀದಿಬದಿ ವ್ಯಾಪರಸ್ಥರಿಗೆ ಇಂಡಿ ಎಸಿ ಸ್ನೇಹಲ್‌ ಲೋಕಂಡೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.

Advertisement

ಶುಕ್ರವಾರ ಸಾಯಂಕಾಲ ಪಪಂ ಅಧಿಕಾರಿ ಮತ್ತು ಪೊಲೀಸ್‌ ಇಲಾಖೆ ಸಹಯೋಗದೊಂದಿಗೆ ಪಟ್ಟಣದಲ್ಲೆಡೆ ಪರಿಶೀಲಿಸಿದರು. ಮಾಸ್ಕ್ ಧರಿಸದೆ ವ್ಯಾಪಾರ ಮಾಡುವರಿಗೆ 100 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದರು. ಎಣ್ಣೆಯಿಂದ ಕರಿದ ಪದಾರ್ಥಗಳ ಬೀದಿ ಬದಿ ಮಾರುವುದನ್ನು ನಿಷೇಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಅಳವಡಿಸಿಕೊಂಡರೆ ವ್ಯಾಪಾರಕ್ಕೆ ಅವಕಾಶ ನೀಡಿ ಎಂದು ಪೋಲಿಸರಿಗೆ ತಿಳಿಸಿದ ಅವರು, ದೇವರ ಅಗಸಿ ಹತ್ತಿರದ ಹಣ್ಣು, ತರಕಾರಿ ವ್ಯಾಪಾರ ಬೇರೆಡೆ ಸ್ಥಳಾಂತರಿಸಲು ಸೂಚಿಸಿದರು.

ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ ಮಾತನಾಡಿ, ಮಾಸ್ಕ್ ಧರಿಸದ ವ್ಯಾಪಾರಸ್ಥರಿಗೆ ದಂಡ ವಿಧಿಸಿದ್ದು 4,200 ರೂ. ಸಂಗ್ರಹವಾಗಿದೆ. ದೇವರ ಅಗಸಿ ನಿರ್ಮಾಣ ಶುರುವಾಗಲಿದ್ದು ವ್ಯಾಪಾರಸ್ಥರು ತೆರವು ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next