Advertisement
ಶುಕ್ರವಾರ ಆಲಮಟ್ಟಿಯ ಮಂಜಪ್ಪ ಹರ್ಡೇಕರ ಸ್ಮಾರಕ ಭವನದಲ್ಲಿ ನಡೆದ ರಾಜ್ಯಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶಿವಾನಂದ ಪಾಟೀಲ, ದೇಶದಲ್ಲಿ ಸಂವಿಧಾನ ಜಾರಿಗೆ ಬರದೇ ಇದ್ದರೆ ನಮ್ಮ ದೇಶದಲ್ಲಿ ಜಾತಿ ಹೆಸರಿನಲ್ಲಿ ಎಷ್ಟು ಭಾಗವಾಗಿ ವಿಂಗಡಣೆಯಾಗುತ್ತಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಸಂವಿಧಾನದ ಮೇಲೆ ಆಡಳಿತ ನಡೆಯುತ್ತಿದ್ದರೂ ಕೂಡ ರಾಜ್ಯಗಳ ಗಡಿ ರೇಖೆ, ನದಿ ನೀರು ಹೀಗೆ ಮಾನವನಿಗೆ ಅಗತ್ಯವಿರುವ ಮಾನವೀಯ ನೆಲೆಗಟ್ಟಿನಲ್ಲಿ ಸಹಕಾರ ನೀಡಬಹುದಾಗಿದ್ದರೂ ಕೂಡ ಅದನ್ನು ಹೊರತು ಪಡಿಸಿ ವ್ಯಾಜ್ಯಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಡಾ| ಅಂಬೇಡ್ಕರ್ ವಿಚಾರಗಳನ್ನು ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೇ ಜಗತ್ತಿಗೆ ದಾರಿ ತೋರಿದ ಚೇತನ. ಅವರನ್ನು ವಿಶ್ವ ಇರುವವರೆಗೆ ಇಡಿ ಪ್ರಪಂಚವೇ ಆರಾಧಿಸುತ್ತದೆ. ದೇಶದ ಪ್ರತಿಯೊಬ್ಬ ಮಹಿಳೆ ಸುಶಿಕ್ಷಿತಳಾಗಬೇಕು. ಇನ್ನು ಇತ್ತೀಚಿನ ದಿನಗಳಲ್ಲಿ ವಾಕ್ ಸ್ವಾತಂತ್ರ್ಯ ಹೆಸರಿನಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಧೀಜಿಯವರಂಥವರಿಗೂ ನಿಂದನೆ ಮಾಡಲಾಗುತ್ತಿದೆ. ಇದು ಆಗಬಾರದು ಎಂದರು.
ಬಸವನಬಾಗೇವಾಡಿ ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ಮಾತನಾಡಿ, ಸಮಾಜದ ಕಟ್ಟಕಡೆ ಮನುಷ್ಯನಿಗೂ ಸಂವಿಧಾನ ಬದ್ಧವಾಗಿರುವ ಎಲ್ಲ ಸೌಕರ್ಯ ಹಾಗೂ ಹಕ್ಕುಗಳು ದೊರೆತು ಸಮಾಜದ ಮುಖ್ಯವಾಹಿನಿಗೆ ಬಂದು ಸಂವಿಧಾನದ ಆಶಯ ಈಡೇರಿದಂತಾಗಲು ದೇಶದಲ್ಲಿ ಹರ್ಡೇಕರ ಮಂಜಪ್ಪನವರು, ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ಆದರ್ಶಗಳನ್ನು ದೇಶದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಬಿ. ಶ್ರೀನಿವಾಸ, ಹಿಂದೂ ಧರ್ಮದಲ್ಲಿ ಜಾತೀಯತೆ ಹೆಚ್ಚು, ಶೋಷಿತ ಜನಾಂಗದ ಏಳ್ಗೆಗಾಗಿ ಬುದ್ಧ, ಬಸವಣ್ಣನವರು ಸಮ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸಿದ ಮಹಾನ್ ಚೇತನಗಳು. ಆದರೆ 1919 ಸೆ. 29ರಂದು ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರವರು ಶೋಷಿತರನ್ನು ಮೇಲ್ಪಂಕ್ತಿಗೆ ತರಲು ಶೇ. 50 ಮೀಸಲಾತಿ ಕಲ್ಪಿಸಿದ್ದರು. ಇದನ್ನು ವಿರೋಧಿಸಿದ್ದ ಆಗಿನ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರನ್ನು ಹುದ್ದೆಯಿಂದ ತೆಗೆದು ಹಾಕಿದ್ದರು ಎಂದರು.
ಸ್ವಾತಂತ್ರ್ಯ ನಂತರ ಡಾ| ಅಂಬೇಡ್ಕರ್ ಅವರು ಶೋಷಿತರಿಗೆ ನ್ಯಾಯ ಒದಗಿಸುವುದರ ಜೊತೆಗೆ ಸರ್ವರೂ ಸಮಾನರಾಗಲು ಆಶಯ ಹೊಂದಿದ್ದರು. ಆದರೆ ವಾಸ್ತವವಾಗಿ ಇನ್ನೂ ಬೇರು ಮಟ್ಟದಿಂದ ಅಸ್ಪೃಶ್ಯತೆ ಹೋಗಿಲ್ಲ, ದಲಿತ ಚಳುವಳಿ ಯಾವುದೇ ಧರ್ಮ, ಜಾತಿಗಳ ವಿರುದ್ಧವಲ್ಲ ಶೋಷಣೆಯ ವಿರುದ್ಧವಾಗಿದೆ ಎಂದು ಹೇಳಿದರು.
ಈ ವೇಳೆ ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ| ಸುಜಾತಾ ಚಲವಾದಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರಾಜ್ಯ ಸಂಚಾಲಕ ಡಾ| ಡಿ.ಜಿ. ಸಾಗರ, ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ತಹಶೀಲ್ದಾರ್ ಎಂ.ಎನ್. ಚೋರಗಸ್ತಿ, ವಿ.ಎಂ. ಪಟ್ಟಣಶೆಟ್ಟಿ, ರಮೇಶ ಆಸಂಗಿ, ರಾಹುಲ್ ಕುಬಕಡ್ಡಿ, ಪರಶುರಾಮ ಕಾಂಬಳೆ, ಅಶೋಕ ಚಲವಾದಿ ಮೊದಲಾದವರಿದ್ದರು. ವಿನಾಯಕ ಗುಣಸಾಗರ ಸ್ವಾಗತಿಸಿದರು. ವೈ.ಸಿ. ಮಯೂರ ನಿರೂಪಿಸಿದರು. ಅಶೋಕ ಚಲವಾದಿ ವಂದಿಸಿದರು.