Advertisement

ಅಂತರ ಪಾಲಿಸಿ ಕೋವಿಡ್ ಓಡಿಸಿ

06:35 PM May 11, 2020 | Naveen |

ಆಲಮಟ್ಟಿ: ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರು ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿ ಆಲಮಟ್ಟಿ ಗ್ರಾಪಂ ವ್ಯಾಪ್ತಿಯ ಬಡ ಕುಟುಂಬಗಳಿಗೆ ಇತ್ತೀಚೆಗೆ ಇಲ್ಲಿನ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆಹಾರಧಾನ್ಯದ ಕಿಟ್‌ ವಿತರಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಜಗತ್ತಿನ 250ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮಹಾಮಾರಿ ಕೋವಿಡ್‌-19 ತನ್ನ ಕಬಂಧಬಾಹು ಚಾಚಿದೆ. ದೇಶದಲ್ಲಿ ಕೋವಿಡ್  ಸೋಂಕು ತಡೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿತ್ತು. ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡುವ ಜತಗೆ ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಸಂಚರಿಸುವ ಮೂಲಕ ಕೋವಿಡ್ ತಡೆಗೆ ಸಹಕರಿಸಬೇಕು ಎಂದರು.

ಲಾಕ್‌ಡೌನ್‌ದಿಂದಾಗಿ ಕಾರ್ಮಿಕರು, ಹಿಂದುಳಿದವರು, ಅಲೆಮಾರಿಗಳಿಗೆ ದುಡಿಮೆ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂಥಹವರಿಗೆ ಸಂಘ-ಸಂಸ್ಥೆಗಳು ಸೇರಿ ಹಲವರು ನೆರವು ನೀಡುತ್ತಿದ್ದಾರೆ. ತಾವು ಹಾಗೂ ಗೆಳೆಯರ ಬಳಗ ಮತ್ತು ವಿಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿ 3.5ಕೋಟಿ ಮೊತ್ತದ 25ಸಾವಿರಕ್ಕೂ ಅಧಿಕ ಕಿಟ್‌ಗಳನ್ನು ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಆಲಮಟ್ಟಿ, ಅರಳದಿನ್ನಿ, ಚಿಮ್ಮಲಗಿ ಭಾಗ-1ಎ ಮತ್ತು ಬಿ, ಲೇಬರ್‌ ಕಾಲೋನಿ ಸೇರಿದಂತೆ ವಿವಿಧೆಡೆ ಬಡ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಿಸಿದರು. ತಾಪಂ ಸದಸ್ಯ ಮಲ್ಲು ರಾಠೊಡ, ಗ್ರಾಪಂ ಅಧ್ಯಕ್ಷೆ ಸೈದಮ್ಮಾ ಬೆಣ್ಣಿ, ಉಪಾಧ್ಯಕ್ಷ ಬಿ.ಜೆ.ನದಾಫ, ಮಹಾಂತೇಶ ಹಿರೇಮಠ, ಎಂ.ಆರ್‌.ಕಮತಗಿ, ಇಬ್ರಾಹಿಂ ತೆಲಗಿ, ಸಿ.ಎಸ್‌.ಕುಂಬಾರ, ಲಕ್ಷ್ಮಣ ಹಂಡರಗಲ್ಲ, ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ, ತಾಪಂ ಇಒ ಭಾರತಿ.ಎಸ್‌.ಚೆಲುವಯ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next