Advertisement
ಹೌದು ಈಗ ಯಾವುದಪ್ಪ ಚುನಾವಣೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಶಾಸಕರುಗಳು ರಾಜೀನಾಮೆ ನೀಡುತ್ತಿರುವ ವೇಳೆಯಲ್ಲಿ ಎಂದು ಹುಬ್ಬೇರಿಸಬೇಡಿ. ಇದು ಸ್ಥಳೀಯ ಮಂಜಪ್ಪ ಹರ್ಡೇಕರ ಅವರ ಸ್ಮಾರಕ ಪಪೂ ಮಹಾವಿದ್ಯಾಲಯ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್‌ಗಾಗಿ ನಡೆದ ಚುನಾವಣೆ ದೃಶ್ಯ.
Related Articles
Advertisement
ಮತದಾರರು ತಮ್ಮ ಮತ ಚಲಾಯಿಸಲು ಗುರುತಿ ಚೀಟಿಯಂತೆ ಆಧಾರ್ ಕಾರ್ಡ್ ಬಳಸಲಾಯಿತು. ಮತ ಚಲಾಯಿಸಿದ ಮತದಾರರಿಗೆ ಬೆರಳಿಗೆ ಶಾಯಿ ಹಚ್ಚಲಾಯಿತು. ಅಲ್ಲದೇ ವಿದ್ಯಾರ್ಥಿನಿಯರಿಗಾಗಿಯೇ ಸಖೀ ಮತಗಟ್ಟೆ ಆರಂಭಿಸಿ ಅದನ್ನು ಶಿಕ್ಷಕಿಯರಾದ ಎಸ್.ಎಂ. ಸಜ್ಜನ, ಜಗದೇವಿ.ಕೆ, ದೀಪಾ ಚಲಮಿ ಮತಗಟ್ಟೆ ಅಧಿಕಾರಿ ಹಾಗೂ ಪ್ರಿಸೈಡಿಂಗ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರಲ್ಲದೇ ಅವರ ಭದ್ರತೆಗಾಗಿ ಗೈಡ್ಸ್ ವಿದ್ಯಾರ್ಥಿನಿಯರನ್ನು ನೇಮಕ ಮಾಡಲಾಗಿತ್ತು.
•ಪುರುಷರಿಗಾಗಿ ಸ್ಕೌಟ್ಸ್: 8 ಹುದ್ದೆಗಳಿಗೆ 19 ಉಮೇದುದಾರರು ಈ ಚುನಾವಣೆಯಲ್ಲಿ ಆಯ್ಕೆ ಬಯಸಿ ಸ್ಪರ್ಧಾಕಣದಲ್ಲುಳಿದು ಬಿರುಸಿನ ಪ್ರಚಾರದೊಂದಿಗೆ ಮತ ಯಾಚಿಸಿದರು.
ಪ್ರಧಾನ ಮಂತ್ರಿ, ಉಪ ಪ್ರಧಾನಿ, ಮಹಿಳಾ ಪ್ರತಿನಿಧಿ ಹುದ್ದೆಗಾಗಿ ಜರುಗಿದ ಚುನಾವಣೆಯಲ್ಲಿ ಶೇ. 92 ಮತದಾನವಾಯಿತು. ಶಾಲಾ ಸ್ಕೌಟ್ಸ್ ಅಧಿಕಾರಿ ಎಂ.ಎಚ್. ಬಳಬಟ್ಟಿ ನೇತೃತ್ವದಲ್ಲಿ ಸ್ಕೌಟ್ಸ್ ವಿದ್ಯಾರ್ಥಿಗಳು ಮುಂಜಾಗೃತಾ ಕ್ರಮವಾಗಿ ಯಾವುದೇ ತೊಂದರೆವಾಗದಂತೆ ಬಿಗಿ ಬಂದೊಬಸ್ತ್ ನಡೆಸಿದರು. ಒಬ್ಬ ಮತದಾರ ಒಟ್ಟು 8 ಮತ ಚಲಾಯಿಸಿ ತಮ್ಮ ಹಕ್ಕನ್ನು ಸಾಬೀತುಪಡಿಸಿದರು.
ಮತಗಟ್ಟೆ ಅಧಿಕಾರಿಯಾಗಿ ಯು.ಎ. ಹಿರೇಮಠ, ಎನ್.ಎಸ್. ಬಿರಾದಾರ, ಮಹೇಶ ಗಾಳಪ್ಪಗೋಳ, ಜಿ.ಎಂ. ಹಿರೇಮಠ, ಕಾರ್ಯ ನಿರ್ವಹಿಸಿದರು.
ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯೋಪಾಧ್ಯಾಯ ಎಸ್.ಐ. ಗಿಡ್ಡಪ್ಪಗೋಳ ಕಾರ್ಯ ನಿರ್ವಹಿಸಿದರು. ಒಟ್ಟಾರೆ ಸಾರ್ವತ್ರಿಕ ಚುನಾವಣೆಯಂತೆ ಶಾಲಾ ಸಂಸತ್ ಚುನಾವಣೆ ನಡೆದು ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಂಬಿಸುವಂತಾಗಿತ್ತು.