Advertisement

ಆಲಮಟ್ಟಿ ರಾಕ್‌ ಗಾರ್ಡನ್‌ಗೆ ಪ್ರವಾಸಿಗರ ದಂಡು

10:56 AM Jun 07, 2019 | Naveen |

ಆಲಮಟ್ಟಿ: ಒಂದು ತಿಂಗಳು ಉಪವಾಸ ವ್ರತದ ನಂತರ (ರಂಜಾನ್‌ ಹಬ್ಬದ ಮರುದಿನ) ಗುರುವಾರ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಸಾವಿರಾರು ಮುಸ್ಲಿಂ ಬಾಂಧವರು ಕುಟುಂಬ ಸಮೇತ ಪಟ್ಟಣದ ವಿವಿಧ ಉದ್ಯಾನಗಳಿಗೆ ಆಗಮಿಸಿದ್ದು ಕಂಡು ಬಂತು.

Advertisement

ಸಾವಿರಾರು ಮಹಿಳೆಯರು, ಮಕ್ಕಳು, ವಯೋವೃದ್ಧರು, ಯುವಕರೆನ್ನದೆ ಎಲ್ಲ ವಯೋಮಾನದವರೂ ಇಲ್ಲಿಯ ರಾಕ್‌ ಉದ್ಯಾನ, ಲವ-ಕುಶ ಉದ್ಯಾನ, ಗೋಪಾಲ ಕೃಷ್ಣ ಉದ್ಯಾನ ಹೀಗೆ ಹಲವಾರು ಉದ್ಯಾನಗಳು, ನದಿ ತೀರದಲ್ಲಿ ಹಾಗೂ ಸಂಜೆ ಸಂಗೀತ ನೃತ್ಯ ಕಾರಂಜಿ ವೀಕ್ಷಿಸಿ ಸಂಭ್ರಮಪಟ್ಟರು.

ವಿಜಯಪುರ, ಬಾಗಲಕೊಟೆ, ಗದಗ, ಕಲಬುರಗಿ, ಕೊಪ್ಪಳ ಹಾಗೂ ಸೊಲ್ಲಾಪುರ ಸೇರಿದಂತೆ ವಿವಿಧ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಿಂದ ಪ್ರವಾಸಿಗರು ಆಟೋ, ಕಾರು, ರೈಲು, ಬಸ್‌, ಲಾರಿ, ದ್ವಿಚಕ್ರ ವಾಹನಗಳ ಮೂಲಕ ಆಗಮಿಸುತ್ತಿರುವುದು ಸಾಮಾನ್ಯವಾಗಿತ್ತು.

ರಾಕ್‌ ಉದ್ಯಾನದ ವಿವಿಧ ಮರಗಳ ಕೆಳಗೆ ಸೇರಿದ್ದ ಸಾವಿರಾರು ಸಂಖ್ಯೆಯ ಪ್ರವಾಸಿಗರು, ತಾವು ಕಟ್ಟಿಕೊಂಡು ತಂದಿರುವ ಸಿಹಿ ಭೋಜನ ಸವಿದಿದ್ದು ಎಲ್ಲೆಡೆ ಕಂಡು ಬಂತು. ರಾಕ್‌ ಉದ್ಯಾನವನದ ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆಯಲು ಜನರ ಸರದಿ ಸಾಲು ಬಹಳ ಉದ್ದವಾಗಿತ್ತು. ಮಧ್ಯಾಹ್ನ ನಂತರ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾಗಿದ್ದ‌ರಿಂದ ಪ್ರವಾಸಿಗರು ಪ್ರವೇಶ ಟಿಕೆಟ್ ಪಡೆಯಲು ಹರಸಾಹಸ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next