Advertisement

ದಾಖಲೆ ಪ್ರಮಾಣದಲ್ಲಿ ನದಿಗೆ ನೀರು ಬಿಡುಗಡೆ

03:04 PM Aug 07, 2019 | Naveen |

ಆಲಮಟ್ಟಿ: ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಕಳೆದ ದಶಕದ ಅವಧಿಯಲ್ಲಿಯೇ 2019ರ ಆ.6ರಂದು 4 ಲಕ್ಷ ಕ್ಯೂಸೆಕ್‌ ನೀರು ಹೊರ ಬಿಟ್ಟಿರುವುದು ದಾಖಲೆಯಾಗಿದೆ.

Advertisement

ಇದಕ್ಕೂ ಮೊದಲು ಆ. 2005ರಂದು ಒಳ ಹರಿವು 4.41ಲಕ್ಷ ಮತ್ತು ಹೊರ ಹರಿವು 4.45 ಲಕ್ಷ ಕ್ಯೂಸೆಕ್‌ ಆಗಿತ್ತು. 2008ರ ಆ. 17ರಲ್ಲಿ ಒಳಹರಿವು 2.75 ಲಕ್ಷ ಇದ್ದಾಗ ಜಲಾಶಯದಿಂದ 1.90 ಲಕ್ಷ ಕ್ಯೂಸೆಕ್‌ ಬಿಡಲಾಗಿದ್ದರೆ 2010ಜು. 31ರಂದು 2 ಲಕ್ಷ ಕ್ಯೂಕೆಸ್‌ ಒಳ ಹರಿವಿದ್ದಾಗ 2.59 ಲಕ್ಷ ಕೂಸೆಕ್‌ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿತ್ತು. ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದಲ್ಲಿ 2002ರಿಂದ ನೀರಿನ ಸಂಗ್ರಹ ಆರಂಭವಾಗಿದೆ. 2005ರ ದಾಖಲೆ¿ಸರಿಗಟ್ಟುವಷ್ಟು ಪ್ರಮಾಣದಲ್ಲಿ ಜಲಾಶಯಕ್ಕೆ ಒಳ ಹರಿವು ಇಲ್ಲ.

2009ರಿಂದ 2019ರ ವರೆಗಿನ ಅವಧಿಯಲ್ಲಿ ಸರಾಸರಿ 2 ಲಕ್ಷ ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರಬಿಡಲಾಗಿದೆ. 2019ರ ಆ. 6ರ ಮಧ್ಯಾಹ್ನ 3:00ರಿಂದ ಜಲಾಶಯದ 13 ಗೇಟ್‌ಗಳನ್ನು 3.4 ಮೀ ಹಾಗೂ 13ಗೇಟುಗಳನ್ನು 3.6 ಮೀಗಳಿಗೆ ಎತ್ತರಿಸಿ ಒಟ್ಟು 26 ಗೇಟುಗಳಿಂದ 3, 63, 217 ಕ್ಯೂಸೆಕ್‌ ನೀರು ಹಾಗೂ ಕರ್ನಾಟಕ ಜಲವಿದ್ಯುದ್ದಾಗಾರ ಆಲಮಟ್ಟಿ ಘಟಕದ 55 ಮೆ.ವ್ಯಾಟ್ 5 ಹಾಗೂ 15 ಮೆ.ವ್ಯಾ.ನ 1ಘಟಕ ಸೇರಿ ಒಟ್ಟು 6 ಘಟಕಗಳ ಮೂಲಕ 37 ಸಾವಿರ ಕ್ಯೂಸೆಕ್‌ ನೀರನ್ನು ನದಿ ಪಾತ್ರದಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಟ್ಟಾರೆ 4 ಲಕ್ಷಕ್ಕೂ ಅಧಿಕ ಕ್ಯೂಕೆಸ್‌ ನೀರನ್ನು ಬಿಡಲಾಗುತ್ತಿದೆ.

519. 60ಮೀ ಗರಿಷ್ಠ ಎತ್ತರ ಮತ್ತು ಗರಿಷ್ಠ 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಮಂಗಳವಾರ 517. 65ಮೀ ಎತ್ತರದಲ್ಲಿ 75.239 ಟಿಎಂಸಿ ಅಡಿ ನೀರು ಸಂಗ್ರಹ ಮಾಡಿಕೊಂಡು ಸಂಜೆ ವೇಳೆಗೆ 3, 60, 194 ಕ್ಯೂಸೆಕ್‌ ಒಳ ಹರಿವಿದ್ದರೆ 4 ಲಕ್ಷಕ್ಕೂ ಅಧಿಕ ಕ್ಯೂಕೆಸ್‌ ನೀರು ಹೊರಹರಿವಿದೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುಮಾರು 300 ಎಂಎಂ ವರೆಗೆ ಮಳೆ ಸುರಿಯುತ್ತಿರುವ ಪರಿಣಾಮ ರಾತ್ರಿ ವೇಳೆಗೆ ಜಲಾಶಯದಿಂದ ಈಗ 4 ಲಕ್ಷ ಕ್ಯೂಕೆಸ್‌ ನೀರು ಹೊರಬಿಟ್ಟಿದ್ದರೆ ಅದು 4.50 ಲಕ್ಷ ಕ್ಯೂಕೆಸ್‌ ವರೆಗೆ ಏರುವ ಸಾಧ್ಯತೆಗಳಿವೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಾಗಲಕೋಟೆ ತಾಲೂಕು ಹಾಗೂ ಹುನಗುಂದ ತಾಲೂಕಿನ ಸುಮಾರು 30 ಗ್ರಾಮಗಳ ಜಮೀನು ಅಲ್ಲದೇ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಮತ್ತು ನಿಡಗುಂದಿ ತಾಲೂಕಿನ 29 ಗ್ರಾಮಗಳ ಜಮೀನಿನ ಬೆಳೆಗಳು ಜಲಾವೃತವಾಗಿವೆ.

ಜಿಲ್ಲಾಧಿಕಾರಿ ಭೇಟಿ: ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಅರಳದಿನ್ನಿ ಗ್ರಾಮಕ್ಕೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ವಿಕಾಸ ಸುರಳಕರ, ಎಸ್‌ಪಿ ಪ್ರಕಾಶ ನಿಕ್ಕಂ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ತಮ್ಮ ಕಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕೆಲವು ಸೂಚನೆ ನೀಡಿದರು.

ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಕೃಷ್ಣಾಭಾಗ್ಯ ಜಲ ನಿಗಮದ ಅಣೆಕಟ್ಟು ವೃತ್ತ ಪ್ರಭಾರಿ ಅಧೀಕ್ಷಕ ಅಭಿಯಂತರ ಬಿ.ಎಸ್‌.ಪಾಟೀಲ, ಡಿ. ಬಸವರಾಜು, ಎಸ್‌.ಎಸ್‌. ಚಲವಾದಿ, ಎಚ್.ಸಿ.ನರೇಂದ್ರ, ಡಿವೈಎಸ್‌ಪಿ ಮಹೇಶ್ವರಗೌಡ ಪಾಟೀಲ, ಸಿಪಿಐ ಎಂ.ಎನ್‌. ಶಿರಹಟ್ಟಿ, ಉಪತಹಶೀಲ್ದಾರ್‌ ಶ್ರೀಶೈಲ ರಾಘಪ್ಪಗೋಳ, ಗಂಗಾಧರ ಜೂಲಗುಡ್ಡ, ನಾನಾಗೌಡ ಪಾಟೀಲ ಆಲಮಟ್ಟಿ ಪಿಎಸ್‌ಐ ಎಸ್‌.ವೈ.ನಾಯ್ಕೋಡಿ, ನಿಡಗುಂದಿ ಪಿಎಸ್‌ಐ ಬಿ.ಬಿ. ಬೀಸನಕೊಪ್ಪ ಹಾಗೂ ಕೆಎಸ್‌ಐಸೆಫ್‌ ಆಲಮಟ್ಟಿ ಘಟಕದ ಪಿಎಸ್‌ಐ ಈರಪ್ಪ ವಾಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next