Advertisement

ನಾಡದೊರೆಗೆ ಮನವಿಗಳ ಮಹಾಪೂರ

11:27 AM Oct 06, 2019 | Naveen |

ಆಲಮಟ್ಟಿ: ತುಂಬಿದ ಕೃಷ್ಣೆ ಜಲ ನಿಧಿಗೆ ಬಾಗಿನ ಅರ್ಪಿಸಲು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಈ ಭಾಗದ ರೈತರು ಹಾಗೂ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.

Advertisement

ಆಲಮಟ್ಟಿ ತಾಪಂ ಸದಸ್ಯ ಮಲ್ಲು ರಾಠೊಡ ನೇತೃತ್ವದಲ್ಲಿ ಆಲಮಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಸಲ್ಲಿಸಿ ನೂತನವಾಗಿ ಘೋಷಿಸಿದ ನಿಡಗುಂದಿ ತಾಲೂಕಿನೊಂದಿಗೆ ಏಷ್ಯಾ ಖಂಡದಲ್ಲಿಯೇ ಬೃಹತ್‌ ನೀರಾವರಿ ಯೋಜನೆಗಳಲ್ಲೊಂದಾಗಿರುವ ಕೃ.ಮೇ. ಯೋಜನೆ ಕೇಂದ್ರಸ್ಥಾನ ಆಲಮಟ್ಟಿಯನ್ನು ಸಂಯೋಜಿಸಿ ಸಂಯುಕ್ತ ತಾಲೂಕು ರಚನೆ ಮಾಡಬೇಕು. ಈಗಾಗಲೇ ಆಲಮಟ್ಟಿ ಜಿಪಂ, ತಾಪಂ ಹಾಗೂ ಗ್ರಾಪಂ ಕೇಂದ್ರಸ್ಥಾನ ಹೊಂದಿ ತಾಲೂಕು ಕೇಂದ್ರವಾಗಲು ಬೇಕಾಗುವ ಎಲ್ಲ ಅರ್ಹತೆ ಪಡೆದಿದೆ. ಗ್ರಾಪಂನ್ನು ಮೇಲ್ದರ್ಜೆಗೇರಿಸಿ ಪಪಂ, ನಿರಾಶ್ರಿತ ಸಂತ್ರಸ್ತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಡಿಗ್ರಿ ಕಾಲೇಜು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಅರ್ಪಿಸಿದರು.

ಶಂಕರಗೌಡ ಬಿರಾದಾರ ಹಾಗೂ ಶ್ರೀಕಾಂತ ಕೊಟ್ಟರಶೆಟ್ಟಿ ನೇತೃತ್ವದ ರಾಷ್ಟ್ರೀಯ ಬಸವ ಸೈನ್ಯವತಿಯಿಂದ ಮನವಿ ಸಲ್ಲಿಸಿ ಬಸವಬಾಗೇವಾಡಿಯನ್ನು ಕೂಡಲಸಂಗಮ ಪ್ರಾಧಿಕಾರದಿಂದ ಪ್ರತ್ಯೇಕಿಸಿ ಬಸವನಬಾಗೇವಾಡಿ ಎಂಬ ನೂತನ ಪ್ರಾಧಿಕಾರ ರಚಿಸಬೇಕು. ಇದರಿಂದ ಮಸಬಿನಾಳ, ಮುತ್ತಗಿ, ಇಂಗೇಶ್ವರ ಶರಣರ ಜನ್ಮ ಸ್ಥಳಗಳು ಸಮೀಪದಲ್ಲಿದ್ದು ಸಮಗ್ರ ಅಭಿವೃದ್ಧಿ ಹೊಂದುತ್ತವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next