Advertisement
ಉತ್ತರ ಕರ್ನಾಟಕವೆಂದರೆ ಕೇವಲ ಬಿಸಿಲ ನಾಡು ಎನ್ನುವವರಿಗೆ ಆಲಮಟ್ಟಿ ತೋರಿಸುವಂತಿದೆ. ಆಲಮಟ್ಟಿ ತನ್ನ ಬಳಿಗೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವದರೊಂದಿಗೆ ಹೊಸ ಹೊಸ ಪಕ್ಷಿಗಳು ಬಂದು ತಮ್ಮ ಸಂತಾನೋತ್ಪತ್ತಿ ಮಾಡಿಕೊಳ್ಳುವ ಬೀಡಾಗಿದೆ.
Related Articles
Advertisement
ಕೇವಲ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡ ಮರಗಳ ಮಧ್ಯದಲ್ಲಿಯೂ ರಾಜಸ್ಥಾನದ ಮರುಭೂಮಿಯಲ್ಲಿ ವಾಸಿಸುವ ಕುಟುಂಬಗಳು, ಅಜಂತಾ ಎಲ್ಲೋರಾಗಳನ್ನು ನೆನಪಿಸುವ ಗುಹೆಗಳು, ಆನೆ, ಒಂಟೆ, ಜಿರಾಫೆ, ಘೇಂಡಾಮೃಗ, ಮೊಸಳೆ ಹೀಗೆ ಹಲವಾರು ಪ್ರಾಣಿ ಹಾಗೂ ಪಕ್ಷಿಗಳು ನೈಜ ಎನ್ನುವಷ್ಟರ ಮಟ್ಟಿಗೆ ವಿವಿಧ ಕಲಾವಿದರು ಕಲಾಕೃತಿಗಳನ್ನು ರಚಿಸಿದ್ದಾರೆ.
ಗೋಪಾಲಕೃಷ್ಣ ಉದ್ಯಾನದಲ್ಲಿ ಬಾಲಕೃಷ್ಣನ ಲೀಲೆ ಹಾಗೂ ಮಥುರಾ ಪಟ್ಟಣದ ಚಿತ್ರಣ ಮತ್ತು ಲವ-ಕುಶ ಉದ್ಯಾನದಲ್ಲಿ ಶ್ರೀರಾಮಚಂದ್ರನ ಅಶ್ವಮೇಧದ ಕುದುರೆಯನ್ನು ರಾಮನ ಮಕ್ಕಳಾದ ಲವ-ಕುಶರು ಕಟ್ಟಿಹಾಕಿರುವದು ಅದರ ಬಿಡುಗಡೆಗೆ ಆಗಮಿಸಿದ ರಾಮನ ಸಹೋದರರು ಹಾಗೂ ವಾನರ ಸೇನೆಯೊಂದಿಗೆ ಲವ ಕುಶ ಅವರ ಯುದ್ಧದ ಸನ್ನಿವೇಶ ಮತ್ತು ರಾಮನೊಂದಿಗೆ ಯುದ್ದದ ಚಿತ್ರಣ ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿರುವುದಲ್ಲದೇ ಇಲ್ಲಿಯೂ ಕೂಡ ಹಲವಾರು ಔಷಧೀಯ ಸಂಪತ್ತು ಬೆಳೆಸಲಾಗಿದೆ.
ಸಿಲ್ವರ್ ಲೇಕ: ರಾಕ್ ಉದ್ಯಾನ ಪ್ರವೇಶ ಮಾಡಿದರೆ ಸಾಕು ಮೊದಲು ಸಿಗುವುದೇ ಸಿಲ್ವರ್ ಲೇಕ. ಇಲ್ಲಿ ಎಲ್ಲ ವಯೋಮಾನದ ಲಿಂಗ ಭೇದವಿಲ್ಲದೇ ದೋಣಿ ವಿಹಾರ ಮಾಡಲು ಕೃಷ್ಣಾ ಭಾಗ್ಯಜಲ ನಿಗಮ ವಿಶೇಷ ಕ್ರಮ ಕೈಗೊಂಡಿದೆ.
ಸಂಗೀತ ನೃತ್ಯಕಾರಂಜಿ: ಪ್ರತಿ ದಿನ ಸಂಜೆ 7:30ಕ್ಕೆ ಪ್ರದರ್ಶನ ನೀಡುವ ಸಂಗೀತ ನೃತ್ಯ ಕಾರಂಜಿ ಬಣ್ಣ ಬಣ್ಣದ ನೀರಿನಲ್ಲಿ ನರ್ತಿಸುವ ನೀರನ್ನು ನೋಡಿ ಕಣ್ತುಂಬಿಕೊಳ್ಳುವದೇ ಒಂದು ಸಂತಸದಾಯಕ ಅನುಭವ.
ರಾಷ್ಟ್ರೀಯ ಹೆದ್ದಾರಿ-13ರ ಮೂಲಕ ಆಲಮಟ್ಟಿಯ ಪ್ರವೇಶ ಮಾಡಿದರೆ ಸಾಕು ಸಾಕು ರಸ್ತೆ ಬದಿಯಲ್ಲಿ ಸಾಲು ಸಾಲು ಮರಗಳ ನೆರಳಿನಲ್ಲಿಯೇ ಪ್ರವೇಶ ಮಾಡಬೇಕು. ಇದರಿಂದ ಪಟ್ಟಣಕ್ಕೆ ಬರುವ ಅತಿಥಿಗಳಿಗೆ ವಿಶೇಷ ಸ್ವಾಗತದ ಅನುಭವವಾಗುತ್ತದೆ. ಇದರಿಂದ ಬಿಸಿಲಿನಲ್ಲಿ ಬಸವಳಿದು ಬರುವ ನೂರಾರು ಪ್ರವಾಸಿಗರಿಗೆ ತಂಪು-ತಂಪು ವಾತಾವರಣವು ಅವರನ್ನು ಉಲ್ಲಸಿತರನ್ನಾಗಿ ಮಾಡುವುದು ಸ್ಪಷ್ಟ.
ಶಂಕರ ಜಲ್ಲಿ