Advertisement

ಸೌಹಾರ್ದತೆ ಬೆಳೆಸಲು ಧಾರ್ಮಿಕ ಕಾರ್ಯಕ್ರಮ ಸಹಕಾರಿ: ಪಾಟೀಲ

05:04 PM May 29, 2019 | Naveen |

ಆಲಮಟ್ಟಿ: ಗ್ರಾಮೀಣ ಜಾತ್ರೆಗಳು ಹಾಗೂ ಕ್ರೀಡೆಗಳು ಸರ್ವ ಧರ್ಮದವಲ್ಲಿ ಸೌಹಾರ್ದ ಮೂಡಿಸಲು ಸಹಕಾರಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ಮಂಗಳವಾರ ಬೇನಾಳ ಆರ್‌.ಎಸ್‌. ಗ್ರಾಮದಲ್ಲಿ ನಡೆದ ಶಕ್ತಿ ದೇವತೆ ದುರ್ಗಾದೇವಿ ಜಾತ್ರಾ ಮಹೋತ್ಸ ಉದ್ಘಾಟನೆ ಹಾಗೂ ಮುಂಗೋಳಿ ಕೂಗ್ಯಾವ ಜಾನಪದ ಹಾಡುಗಳ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಬೇನಾಳ ಗ್ರಾಮಕ್ಕೆ ನೂತನವಾಗಿ ಪಂಚಾಯತ್‌ ಮಾಡಿದರೂ ಕೂಡ ಹಳೆ ಪಂಚಾಯತ್‌ಗಳು ಮಾಡದ ಕಾರ್ಯವನ್ನು ಸಾಧನೆ ಮಾಡಿ ಬಸವನಬಾಗೇವಾಡಿ ತಾಲೂಕಿಗೆ ಮಾದರಿಯಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ದೇವರುಗಳನ್ನ್ನು ಕೂಡ ಜಾತೀಯತೆ ಹಾಗೂ ಧರ್ಮಾಧಾರಿತವಾಗಿ ಕಾಣಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಹಿಂದೂಗಳು ಹಾಗೂ ಮುಸಲ್ಮಾನರು ಭೇದವಿಲ್ಲದೇ ಆಚರಿಸುತ್ತಿರುವುದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದರು.

ರಾಜ್ಯವು ಭೀಕರ ಬರಗಾಲಕ್ಕೆ ತುತ್ತಾಗಿರುವುದರಿಂದ ನನಗೆ ಶಾಸಕ, ಸಚಿವ ಹೀಗೆ ಇನ್ನೊಂದು ಹುದ್ದೆ ಬೇಕೆಂದು ದೇವರಲ್ಲಿ ಕೇಳುವದಿಲ್ಲ. ರಾಜ್ಯದಲ್ಲಿ ಮಳೆಯಾಗಿ ರಾಜ್ಯಸುಭಿಕ್ಷವಾಗಲಿ ಎಂದು ಪ್ರಾರ್ಥಿಸುವದಾಗಿ ಹೇಳಿದರು.

ತಡವಾಗಿ ಆಗಮಿಸಿ ನಂತರ ಮಾತನಾಡಿದ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿಯವರು, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಎಲ್ಲ ಹಬ್ಬ ಹರಿದಿನಗಳಲ್ಲಿ ಸರ್ವ ಜನಾಂಗದವರೂ ಕೂಡಿ ಆಚರಿಸುವುದು ಈ ಹಿಂದಿನಿಂದಲೂ ಬಂದ ಸಂಪ್ರದಾಯ. ಇದೇ ರೀತಿ ಎಲ್ಲರೂ ಒಂದಾಗಿ ಸಹಬಾಳ್ವೆ ನಡೆಸುವದರಿಂದ ದೇಶದಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ಎಂದರು. ಹಿರಿಯ ಸಾಹಿತಿ ಅಲ್ಲಮ್ಮಪ್ರಭು ಉದ್ಘಾಟಿಸಿದರು.

Advertisement

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಆಸೀನರಾಗಿದ್ದ ಹಾಗೂ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಪಂ ಸದಸ್ಯರುಗಳಾದ ಚನ್ನಬಸಪ್ಪಗೌಡ ಪಾಟೀಲ, ಮಲ್ಲು ರಾಠೊಡ, ಚಿಮ್ಮಲಗಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚನಗೊಂಡ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ ಜಿಲ್ಲಾ ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಡಾ| ಯಲಗೂರೇಶ ಸಂಕನಾಳ, ಮಲ್ಲನಗೌಡ ನರಸನಗೌಡ್ರ, ಡಾ| ಪ್ರಕಾಶ ಬೀಳಗಿ, ಮಲ್ಲಪ್ಪ ಬೋರಣ್ಣವರ, ಗ್ಯಾನಪ್ಪಗೌಡ ಬಿರಾದಾರ, ಬಸವರಾಜ ಹಂಚಲಿ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ, ಬಿ.ಎಚ್. ಗಣಿ, ತುಕ್ಕಪ್ಪಗೌಡ ಬಿರಾದಾರ, ಜಿ.ಸಿ. ಮುತ್ತಲದಿನ್ನಿ, ಯಮನಪ್ಪ ಕುಂಬಾರ, ಬಿಳೇಕುದರಿ, ಬಾಗವಾನ ಸೇರಿದಂತೆ ಬೇನಾಳ ಗ್ರಾಪಂಅಧ್ಯಕ್ಷೆ ಹಾಗೂ ಸದಸ್ಯರು ಸೇರಿದಂತೆ ಮೊದಲಾದವರಿದ್ದರು.

ಸಮಾರಂಭದಲ್ಲಿ ಮುಂಗೋಳಿ ಕೂಗ್ಯಾವ ಕವನ ಸಂಕಲನವನ್ನು ಆರೋಗ್ಯ ಸಚಿವ ಶಿವಾನಂದ ಪಾಟೀಲ ಬಿಡುಗಡೆಗೊಳಿಸಿದರು. ಜಾತ್ರಾ ಕಾರ್ಯಕ್ರಮವನ್ನು ಅಲ್ಲಮಪ್ರಭು ಬೆಟ್ಟದೂರು ಉದ್ಘಾಟಿಸಿದರು. ನಿಲೇಶ ಬೇನಾಳ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ನಾಗರಾಜ ಕೊಳದಾನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next