Advertisement
ಚಿಮ್ಮಲಗಿಭಾಗ-1ಬಿದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ನೂತನವಾಗಿ ನಿರ್ಮಿಸಿರುವಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಏಷ್ಯಾ ಖಂಡದಲ್ಲಿಯೇ ಬೃಹತ್ ನೀರಾವರಿ ಯೋಜನೆಗಳಲ್ಲೊಂದಾಗಿದೆ. ಇದು ಸಾಕಾರಗೊಳ್ಳಲು ಅಖಂಡ ವಿಜಯಪುರ ಜಿಲ್ಲೆಯ ಜನತೆಯ ತ್ಯಾಗದ ಫಲವಾಗಿರುವುದರಿಂದ ಇಡಿ ಉತ್ತರಕರ್ನಾಟಕದ ಜನರು ಕುಡಿಯುವ ನೀರು ಹಾಗೂ ವಿವಿಧ ಉದ್ದೇಶಗಳಿಗೆ ನೀರನ್ನು ಪಡೆಯುವಂತಾಗಿದೆ ಎಂದರು. ನಾಗರಿಕರು ದೇವಾಲಯಗಳನ್ನು ನಿರ್ಮಿಸಲು ಕೊಡುವ ಮಹತ್ವವನ್ನು ಶಾಲೆಗಳನ್ನು ನಿರ್ಮಿಸಲು ಕೊಡಬೇಕು. ತಾವು 15 ವರ್ಷ ಈ ಕ್ಷೇತ್ರದ ಶಾಸಕನಾಗಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಕೇಂದ್ರಗಳಿಗೆ ನೀಡಲಾಗಿದ್ದು ಈಗ ಮೊದಲಿಗಿಂತಲೂ ಕ್ಷೇತ್ರದ ಅಭಿವೃದ್ಧಿಗಾಗಿ 2 ಕೋಟಿವರೆಗೆ ಅನುದಾನ ಲಭ್ಯವಾಗುತ್ತಿದ್ದು ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುವುದು ಎಂದರು.
ಮಾಡುತ್ತಿರುವುದು ವಿಪರ್ಯಾಸ ಎಂದರು. ದೇಶಕ್ಕೆ ಉತ್ತರ ಹಿಂದೂಸ್ತಾನದ ಉತ್ತರಪ್ರದೇಶು ಐವರು ಪ್ರಧಾನ ಮಂತ್ರಿಗಳನ್ನು ನೀಡಿದೆ. ಆದರೆ ಶಾಲೆಗಳನ್ನು ಕೊಟ್ಟಿಲ್ಲ, ನಮ್ಮಲ್ಲಿ ಒಬ್ಬರೇ ಪ್ರಧಾನಿಯಾಗಿದ್ದರೂ ಶಾಲೆಗಳನ್ನು ಅತಿ ಹೆಚ್ಚು ನಿರ್ಮಾಣ ಮಾಡಿದ ರಾಜ್ಯ ಕರ್ನಾಟಕ. ದಿ| ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿರುವ ವೇಳೆಯಲ್ಲಿ ಉಚಿತ ಪಠ್ಯಪುಸ್ತಕದಿಂದ ಆರಂಭವಾಗಿ ನಂತರ ಬಂದಿರುವ ಮುಖ್ಯಮಂತ್ರಿಯವರು ಒಂದೊಂದು ವಿಶೇಷ ಕ್ರಮಗಳನ್ನು ಕೈಗೊಂಡು ಮಾದರಿ ಸೌಲಭ್ಯಗಳನ್ನು ಒದಗಿಸಿದ್ದಾರೆ. ಈ ಎಲ್ಲ ಸೌಲಭ್ಯಗಳನ್ನು ಪಡೆದು ಶಿಕ್ಷಣ ನೀಡದಿದ್ದರೆ ಅವರಿಂಥ ಪಾಪಿಗಳು ಬೇರೆ ಇಲ್ಲ ಎಂದು ಹೇಳಿದರು.
Related Articles
Advertisement
ಆಲಮಟ್ಟಿಯ ವಿಶೇಷ ಭೂ ಸ್ವಾಧೀನಾಕಾರಿ ಎ.ರಘು ಮಾತನಾಡಿದರು. ಚಿಮ್ಮಲಗಿ ಅರಳೆಲೆಕಟ್ಟಿಮನಿ ಹಿರೇಮಠದ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ, ಮಲ್ಲಮ್ಮ ಹಡಪದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಮಲ್ಲು ರಾಠೊಡ, ಗ್ರಾಪಂ ಅಧ್ಯಕ್ಷೆ ಸೈದಮ್ಮ ಬೆಣ್ಣಿ, ಬಿ.ಟಿ. ಗೌಡರ, ಎ.ಕೆ. ಚಲವಾದಿ, ಎಸ್.ಜಿ. ಭೋಸಲೆ, ಡಾ| ಎಸ್.ಎಸ್. ಓತಗೇರಿ, ಮಂಜುಳಾ ಘಂಟಿ, ನಜೀರಸಾಬ ಮುದ್ದೇಬಿಹಾಳ, ರೇವತಿ ಭಗವತಿ, ಭಾರತಿ ಉಪ್ಪಾರ, ಎಂ.ಆರ್. ಕಮತಗಿ, ಸಿ.ಎಸ್. ಕುಂಬಾರ, ತಾನಾಜಿ ನಾಗರಾಳ, ರಾಹುಲ್ ಕುಬಕಡ್ಡಿ ಮೊದಲಾದವರಿದ್ದರು. ಬಿ.ಐ. ಖ್ಯಾಡಿ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು.