Advertisement
ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ಕೂಡ ಕೃಷ್ಣೆಯ ಉಗಮ ಸ್ಥಾನ ಮಹಾಬಳೇಶ್ವರ ಸೇರಿದಂತೆ ಸಾಂಗ್ಲಿ ಹಾಗೂ ಸಾತಾರಾ ಜಿಲ್ಲೆಗಳು ಸೇರಿದಂತೆ ರತ್ನಗಿರಿ, ಕರಾಡಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ 2019 ಜುಲೈ 2ರ ರಾತ್ರಿಯಿಂದ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಆರಂಭವಾಗಿತ್ತು.
Related Articles
Advertisement
ಭದ್ರತಾ ವೈಫಲ್ಯ: ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಉಗ್ರರ ಹಿಟ್ ಲಿಸ್ಟ್‌ನಲ್ಲಿರುವುದರಿಂದ ಜಲಾಶಯದ ಭದ್ರತೆಗಾಗಿ ರಾಜ್ಯ ಕೈಗಾರಿಕಾ ಭದ್ರತಾ ಪಡೆ ನಿಯೋಜನೆ ಮಾಡಲಾಗಿದೆ. ಭದ್ರತಾ ಪಡೆಗೆ ಗಸ್ತು ವಾಹನ, ನೀರಿನಲ್ಲಿ ಹೋಗಲು ಸುಸಜ್ಜಿತ ಬೋಟ್ ವ್ಯವಸ್ಥೆ ಸೇರಿದಂತೆ ಕಿ.ಮೀ.ಗಳ ಅಂತರದಲ್ಲಿಯೇ ಹೊಡೆದುರುಳಿಸಬಲ್ಲ ಅತ್ಯಾಧುನಿಕ ಶಸ್ತ್ರಾಗಳು ಇವೆ. ಇಷ್ಟೆಲ್ಲ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದ್ದರೂ ಅದನ್ನು ಪಾಲಿಸಬೇಕಾದ ಭದ್ರತಾ ಪಡೆ ಸಿಬ್ಬಂದಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ತಾಳಿದ್ದರ ಪರಿಣಾಮ ಜಲಾಶಯದಿಂದ 500 ಮೀ. ಜಲಾಶಯದ ಹಿಂಭಾಗ ಹಾಗೂ 500 ಮೀ. ಮುಂಭಾಗ ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಕೂಡ ಮೀನುಗಾರರ ವೇಷದಲ್ಲಿ ಯಾರಾದರೂ ದುಷ್ಕರ್ಮಿಗಳು ಬಂದರೆ ಗತಿಯೇನು? ಮೀನುಗಾರರು ಮಾತ್ರ ಜಲಾಶಯದ ಕಟ್ಟಡಕ್ಕೆ ಹೊಂದಿಕೊಂಡೇ ಮೀನು ಹಿಡಿಯುತ್ತಿದ್ದರೂ ಕೂಡ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀನುಗಾರರ ಬಲೆಯನ್ನು ಸಾಕಷ್ಟು ಬಾರಿ ತುಂಡರಿಸಲಾಗಿದೆಯಲ್ಲದೇ ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಕೂಡ ಮತ್ತೆ ನಿಷೇಧಿತ ಪ್ರದೇಶದಲ್ಲಿ ಆಗಮಿಸುತ್ತಿದ್ದಾರೆ. ಆದ್ದರಿಂದ ನುರಿತ ಈಜುಗಾರರ ತಂಡ ರಚಿಸಿಕೊಂಡು ನೂತನ ಮಾದರಿಯ ದೋಣಿ ವ್ಯವಸ್ಥೆ ಮಾಡಿಕೊಂಡು ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.•ಈರಪ್ಪ ವಾಲಿ,
ಕೈಗಾರಿಕಾ ಭದ್ರತಾ ಪಡೆ ಮೇಲ್ವಿಚಾರಣೆ ಹೊತ್ತಿರುವ ಪಿಎಸೈ