ಸ್ಟಾಕ್ ಹೋಮ್: 2022ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಮೂವರು ವಿಜ್ಞಾನಿಗಳಿಗೆ ಮಂಗಳವಾರ (ಅ.04) ಘೋಷಣೆಯಾಗಿದೆ. ಸಂಯೋಜಿತ ಪ್ರೋಟಾನ್ ಹಾಗೂ ಕ್ವಾಂಟಮ್ ಗೆ ಸಂಬಂಧಿಸಿದ ಸಂಶೋಧನೆಗಾಗಿ ನೊಬೆಲ್ ಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಭಾರತದಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡುವುದೇ ಪಿಎಫ್ಐ ನ ಮೂಲ ಉದ್ದೇಶ : ಸಿ.ಟಿ.ರವಿ
ಕ್ವಾಂಟಮ್ ಸ್ಥಿತಿಯನ್ನು ಬಳಸಿಕೊಂಡು ಮೂವರು ವಿಜ್ಞಾನಿಗಳು ಮಹತ್ವದ ಸಂಶೋಧನೆ ನಡೆಸಿದ್ದರು. ಎರಡು ಕಣಗಳು ಪ್ರತ್ಯೇಕಗೊಂಡಾಗಲೂ ಕೂಡಾ ಒಂದೇ ಘಟಕದಂತೆ ವರ್ತಿಸುತ್ತದೆ ಎಂಬುದನ್ನು ಈ ವಿಜ್ಞಾನಿಗಳು ಕಂಡು ಹಿಡಿದಿದ್ದು, ಇದರಿಂದಾಗಿ ಕ್ವಾಂಟಮ್ ಮಾಹಿತಿ ಆಧಾರದ ಮೇಲೆ ಹೊಸ ತಂತ್ರಜ್ಞಾನಕ್ಕೆ ದಾರಿ ಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಮೂವರು ಭೌತವಿಜ್ಞಾನಿಗಳಾದ ಎಲೈನ್ ಅಸ್ಪೆಕ್ಟ್, ಜಾನ್ ಎಫ್ ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ 2022ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ.
ಸೋಮವಾರ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರಿಗೆ ಮಾನವ ವಿಕಾಸದ ಕುರಿತ ಸಂಶೋಧನೆಗಾಗಿ ವೈದ್ಯಕೀಯ ವಿಭಾಗದಲ್ಲಿ 2022ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.