Advertisement

ಅಕ್ಷಿತ್‌ ಶಶಿಕುಮಾರ್ ‌ಈಗ ಸಮಿತ್‌

12:54 PM Dec 15, 2020 | Suhan S |

ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌  ಶಶಿಕುಮಾರ್‌ ಅಭಿನಯದ ಚೊಚ್ಚಲ ಚಿತ್ರ “ಸೀತಾಯಣ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದರ ನಡುವೆಯೇ ಅಕ್ಷಿತ್‌ ಅಭಿನಯದ ಎರಡನೇ ಚಿತ್ರ ಕೂಡ ಇತ್ತೀಚೆಗೆ ಸೆಟ್ಟಿಗೇರಿದೆ. ಅಕ್ಷಿತ್‌ ಶಶಿಕುಮಾರ್‌ ಅಭಿನಯದ ಎರಡನೇ ಚಿತ್ರಕ್ಕೆ “ಸಮಿತ್‌’ ಎಂದು ಹೆಸರಿಡಲಾಗಿದ್ದು, ಹೈದರಾಬಾದ್‌ ನಲ್ಲಿ ಚಿತ್ರತಂಡ ಚಿತ್ರದ ಮುಹೂರ್ತವನ್ನು ನೆರವೇರಿಸಿದೆ.

Advertisement

ಕನ್ನಡ, ತೆಲುಗು ಮತ್ತು ತಮಿಳು ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾವಾಗಲಿರುವ ಈ ಚಿತ್ರವನ್ನು ಮಲೆಯಾಳಂಗೂ ಡಬ್‌ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಇನ್ನು “ಸಮಿತ್‌’ ಚಿತ್ರದಲ್ಲಿ ಅಕ್ಷಿತ್‌ ಶಶಿಕುಮಾರ್‌ ಅವರಿಗೆ ಚಾಂದಿನಿ ಹಾಗೂ ಅನುವರ್ಣ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದ ಇತರ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ಈ ಚಿತ್ರದ ಚಿತ್ರೀಕರಣಆರಂಭವಾಗಲಿದೆ. “ಅರುಣಾಂ ಫಿಲಿಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸತೀಶ್‌ ಮಲೆಂಪಾಟಿ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ : ಶಿವರಾಜ್‌ ಕುಮಾರ್‌ ಶಿವಪ್ಪ ಲುಕ್‌ ವೈರಲ್‌ ಕುತೂಹಲ ಹೆಚ್ಚಿಸಿದ ಚಿತ್ರ

ಕೆಲ ವರ್ಷದ ಹಿಂದೆ ನಡೆದ ನೈಜಘಟನೆ ಆಧರಿಸಿರುವ ಈಚಿ ತ್ರ ಲವ್‌ ಕಂ ಸಸ್ಪೆನ್ಸ್‌-ಥ್ರಿಲ್ಲಿಂಗ್‌ ಶೈಲಿಯಲ್ಲಿ ಮೂಡಿಬರುತ್ತಿದೆ ಎಂದಿದೆ ಚಿತ್ರತಂಡ. ಸದ್ಯ ಚಿತ್ರದ ಮುಹೂರ್ತದಂದು ಚಿತ್ರತಂಡ ಚಿತ್ರದ ಪೋಸ್ಟರ್‌ ಕೂಡ ಬಿಡುಗಡೆ ಮಾಡಿದೆ. ಸುಮಾರು ಐವತ್ತು ದಿನಗಳ ಕಾಲ ಬೆಂಗಳೂರು, ಹೈದರಬಾದ್‌, ಚೆನ್ನೈ ಸುತ್ತಮುತ್ತ ಚಿತ್ರದ ಚಿತ್ರೀಕರಣನಡೆಯಲಿದ್ದು, ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next