Advertisement
ನೋಟ್ ಬ್ಯಾನ್ ಸಂದರ್ಭ ಸ್ವರ್ಣೋದ್ಯಮಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿತ್ತು. ಆದರೆ ಭಾರತೀಯರು ಚಿನ್ನದ ಮೇಲೆ ಇಟ್ಟಿರುವ ವಿಶ್ವಾಸದಿಂದ ಇದು ಅಷ್ಟೊಂದು ಪರಿಣಾಮ ಬೀರಿಲ್ಲ. ಈ ಬಾರಿಯ ಅಕ್ಷಯ ತೃತೀಯಾದಂದು ಬಹುತೇಕ ಸ್ವರ್ಣ ಮಳಿಗೆಗಳು ಬೆಳಗ್ಗೆ 7ರಿಂದ ರಾತ್ರಿ 9-10ರ ವರೆಗೆ ಗ್ರಾಹಕರಿಗಾಗಿ ತೆರೆಯಲಿದ್ದು, ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರಕುವ ನಿರೀಕ್ಷೆ ಇದೆ ಎಂದರು.
ರಾಜ್ಯದ 30 ಜಿಲ್ಲೆಗಳ ಅಸೋಸಿಯೇಶನ್ ಅಧ್ಯಕ್ಷರನ್ನು ನಿರ್ದೇಶಕರನ್ನಾಗಿ ಹೊಂದಿದ ಕೆಜೆಎಫ್ ಸಂಸ್ಥೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಜುವೆಲರಿ ಉದ್ಯಮಿಗಳು, ಕೆಲಸಗಾರರನ್ನು ಪ್ರತಿನಿಧಿಸುತ್ತಿದ್ದು, ಉದ್ಯಮದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಜುವೆಲರ್ಗಳು ಎದುರಿಸುತ್ತಿರುವ ಎಲ್ಲ ಬಗೆಯ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ “ಸ್ವರ್ಣ ಜ್ಞಾನ’ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದರ ಪ್ರಯೋಜನವನ್ನು ಎಲ್ಲ ಜುವೆಲರ್ಗಳು ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದವರು ತಿಳಿಸಿದರು. ಜೆಮ್ ಆ್ಯಂಡ್ ಜುವೆಲರಿಗೆ ಕೌನ್ಸಿಲ್ ರಚನೆ
ದೇಶದಲ್ಲಿ ಜಿಎಸ್‌ಟಿ ಅಳವಡಿಕೆ ಸಂದರ್ಭ ಜಿಎಸ್‌ಟಿ ಕಾನೂನು ಪ್ರಕಾರ ಮಿತಿಯು ಕನಿಷ್ಠ ಶೇ. 5, ಗರಿಷ್ಠ ಶೇ. 28 ಇದ್ದಾಗಲೂ ಫೆಡರೇಶನ್ ಕೇಂದ್ರ ಸರಕಾರದೊಂದಿಗೆ ಚರ್ಚಿಸಿ, ಮನವರಿಕೆ ಮಾಡಿ ಸ್ವರ್ಣೋದ್ಯಮದಲ್ಲಿ ಮಿತಿಗಿಂತಲೂ ಕನಿಷ್ಠ ಶೇ. 3 ಬರುವಂತೆ ಮಾಡಲಾಗಿದೆ. ಕೇಂದ್ರ ಸರಕಾರವು ನೀತಿ ಆಯೋಗದ ಅಧೀನದಲ್ಲಿ ಎಲ್ಲ ರಂಗಗಳಲ್ಲಿಯೂ ಆಯಾಯ ಉದ್ಯಮಕ್ಕೆ ಸಂಬಂಧಪಟ್ಟವರೇ ಸದಸ್ಯರಾಗಿದ್ದ ಡೊಮೆಸ್ಟಿಕ್ ಕೌನ್ಸಿಲ್ (ದೇಶೀಯ ಮಂಡಳಿ) ಅನ್ನು ಸ್ಥಾಪಿಸಿದ್ದು, ಜೆಮ್ ಆ್ಯಂಡ್ ಜುವೆಲರಿ ವಿಭಾಗಕ್ಕೂ ಕೌನ್ಸಿಲ್ ರಚಿಸಲಾಗಿದೆ.
Related Articles
Advertisement