Advertisement

ಇಂದು ಅಕ್ಷಯ ತೃತೀಯಾ: ಹಬ್ಬದ ಮೆರುಗು ಹೆಚ್ಚಿಸಲಿ ಚಿನ್ನಾಭರಣ

06:33 PM May 03, 2022 | Team Udayavani |

ಭಾರತ ವೈವಿಧ್ಯತೆಯ ನಾಡು. ವರ್ಷವಿಡೀ ನಾನಾ ಹಬ್ಬಗಳನ್ನು ಆಚರಿಸಿ ಸಂಭ್ರಮಿಸುವುದರಲ್ಲಿ ಭಾರತೀಯರು ಮೊದಲಿಗರು. ವಿವಿಧ ಧರ್ಮಗಳ ನೆಲೆಯಾಗಿರುವ ನಮ್ಮ ದೇಶದಲ್ಲಿ ಪ್ರತೀ ತಿಂಗಳು ಒಂದಿಲ್ಲೊಂದು ಹಬ್ಬದ ಆಚರಣೆ ನಡೆಯುತ್ತಲೇ ಇರುತ್ತದೆ. ಇಂತಹ ಹಬ್ಬಗಳ ಸಾಲಲ್ಲಿ ಅಕ್ಷಯ ತೃತೀಯಾವೂ ಸೇರಿಕೊಳ್ಳುತ್ತದೆ.

Advertisement

ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವನ್ನು ಅಕ್ಷಯ ತದಿಗೆ ಎಂದು ಆಚರಿಸಲಾಗುತ್ತದೆ. ಈ ಪದವು ಸಂಸ್ಕೃತ ಭಾಷೆಯಿಂದ ಬಂದಿದ್ದು, ಅಕ್ಷಯ ಎಂದರೆ ಎಂದಿಗೂ ಕಡಿಮೆಯಾಗದ ಯಶಸ್ಸು ಅಥವಾ ಸಂತೋಷ ಎಂದರ್ಥ. ತೃತೀಯಾ ಎಂದರೆ ಮಾಸದ ಮೂರನೇ ದಿನ ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ಆ ದಿನವನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗುತ್ತದೆ.

ಹಬ್ಬದ ಮಹತ್ವ: ಹಿಂದೂ ಪುರಾಣಗಳ ಪ್ರಕಾರ ತ್ರೇತಾಯುಗವು ಅಕ್ಷಯ ತೃತೀಯ ದಿನದಂದು ಆರಂಭವಾಯಿತು. ಹಾಗಾಗಿ ಈ ದಿನದಂದು ಚಿನ್ನ ಖರೀದಿಸು ವುದರಿಂದ ಭವಿಷ್ಯದಲ್ಲಿ ಇದು ಅಕ್ಷಯವಾಗುತ್ತದೆ. ಈ ಕಾರಣದಿಂದಾಗಿ ಈ ದಿನದಂದು ಜನರು ಚಿನ್ನಾಭರಣ ಖರೀದಿಸಲು ಬಯಸು ತ್ತಾರೆ. ಅದಲ್ಲದೆ ಈ ದಿನ ದಾನ ಧರ್ಮ, ಯಜ್ಞ- ಯಾಗಾದಿಗಳನ್ನು ಮಾಡುವುದ ರಿಂದ ಜೀವನದಲ್ಲಿ ಕೀರ್ತೀ ಯಶಸ್ಸನ್ನು ಗಳಿಸಬಹುದು ಎಂಬುದು ನಂಬಿಕೆಯಾಗಿದೆ.

ಈ ದಿನದಂದು ವಿಷ್ಣು ಮತ್ತು ಲಕ್ಷ್ಮೀಯನ್ನು ಪೂಜಿಸುತ್ತಾರೆ. ಲಕ್ಷ್ಮೀ ಎಂದರೆ ಸಂಪತ್ತು, ಸುವರ್ಣ ಎಲ್ಲವೂ ಹೌದು. ಆಕೆ ಮನೆ ಬೆಳಗು ವವಳು ಹಾಗಾಗಿ ಆಕೆಯನ್ನು ಆರಾಧಿ ಸುವುದಿಂದ ಅಷ್ಟೆ„ಶ್ವರ್ಯ ಸಿಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಅದಲ್ಲದೆ ಸ್ವರ್ಗದ ದಾರಿಯಲ್ಲಿ ಹರಿಯುವ ಗಂಗೆಯನ್ನು ಭಗೀರಥನು ಭೂಮಿಗೆ ಬರ ಮಾಡಿಕೊಂಡಿದ್ದು ಕೂಡ ಈ ದಿನದಂದೇ ಎಂಬ ನಂಬಿಕೆ ಇದೆ. ಹೀಗಾಗಿ ಅನೇಕ ವಿಶೇಷತೆಗಳ ದಿನ ಇದಾಗಿದೆ. ಕೊರೊನಾ ಕಾರಣದಿಂದಾಗಿ ಎರಡು ವರ್ಷ ಈ ಹಬ್ಬವನ್ನು ಮೊದಲಿನಷ್ಟು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದ ಕಾರಣ ಈ ಬಾರಿ ಜನರು ಹೆಚ್ಚಿನ ಉತ್ಸುಕತೆಯಲ್ಲಿ ಆಭರಣ ಖರೀದಿಗೆ ಮುಂದಾಗುವುದು ಕಂಡು ಬರುತ್ತಿದೆ.

ಭೌತಿಕ ಚಿನ್ನಕ್ಕೆ ಹೆಚ್ಚಿನ ಬೇಡಿಕೆ: ಇತ್ತೀಚಿನ ದಿನಗಳಲ್ಲಿ ಜನರು ಆಭರಣಗಳಿಂದ ಹಿಡಿದು ಡಿಜಿಟಲ್‌ ಮತ್ತು ಬಾಂಡ್‌ ರೂಪದ ಚಿನ್ನದವರೆಗೆ ಎಲ್ಲ ರೀತಿಯ ಚಿನ್ನ ಖರೀದಿಸುತ್ತಾರೆ. ಇಟಿಎಫ್ ಮತ್ತು ಬಾಂಡ್‌ ಚಿನ್ನವು ಭೌತಿಕ ರೂಪದಲ್ಲಿ ಇರುವುದಿಲ್ಲ. ಡಿಜಿಟಲ್‌ ಚಿನ್ನ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಡಿಜಿಟಲ್‌ ಚಿನ್ನಕ್ಕೆ ಭಾರತದಲ್ಲಿ ಅಷ್ಟೊಂದು ಬೇಡಿಕೆ ಇಲ್ಲ. ಪೂಜೆ, ಪುನಸ್ಕಾರಗಳಿಗೆ ಭೌತಿಕ ಚಿನ್ನವೇ ಅಗತ್ಯ ವಾಗಿರುವುದರಿಂದ ಹೆಚ್ಚಿನವರು ಭೌತಿಕ ಚಿನ್ನವನ್ನೇ ಬಯಸುತ್ತಾರೆ. ಒಂದೋ ಚಿನ್ನದ ಆಭರಣ ಅಥವಾ ಹೂಡಿಕೆಯ ದೃಷ್ಟಿಯಿಂದ ಚಿನ್ನದ ನಾಣ್ಯಗಳನ್ನು ಖರೀದಿಸುತ್ತಾರೆ. ಅಕ್ಷಯ ತೃತೀಯಾ ದಿನ ಕೂಡ ಜನರು ಚಿನ್ನದ ಆಭರಣ ಮತ್ತು ನಾಣ್ಯಗಳಿಗೆ ಹೆಚ್ಚಿನ ಬೇಡಿಕೆ ಸಲ್ಲಿಸುವುದು ಸರ್ವೇ ಸಾಮಾನ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next