Advertisement

ಮೊಗೆದಷ್ಟೂ ಅಕ್ಷಯ ಅನುಗ್ರಹ ಭಗವಂತ ನೀಡುತ್ತಾನೆ

10:57 PM Apr 11, 2019 | Team Udayavani |

ಕುಂಬಳೆ: ಅರಮನೆಯಲ್ಲಿ ಹುಟ್ಟ ಬೇಕಾಗಿದ್ದ ಕೃಷ್ಣ ಸೆರೆಮನೆಯಲ್ಲಿ ಹುಟ್ಟಿದ. ಗೊಲ್ಲರ ಮಧ್ಯದಲ್ಲಿ ಬೆಳೆದ ಕೃಷ್ಣನಿಗೆ ಅಲ್ಲೂ ಅರಮನೆ ಇರಲಿಲ್ಲ. ಗೋವರ್ಧನ ಗಿರಿಯನ್ನು ಎತ್ತಿ ಗೋವುಗಳಿಗೆ ಆಸರೆಯನ್ನು ನೀಡಿದ ಕೃಷ್ಣ ಒಂದು ಒಳ್ಳೆಯ ಮನೆ ಬೇಕೆಂದು ಎಂದೂ ಕೇಳಿದವನಲ್ಲ. ನನಗೊಂದು ದೇವಸ್ಥಾನವನ್ನು ಕಟ್ಟಿಕೊಡಿ ಎಂದು ಕೃಷ್ಣ ಕೇಳುವುದಿಲ್ಲ, ಆದರೆ ದೇವಾಲಯಗಳು ಭಕ್ತರಿಗಾಗಿ. ದೇವಸ್ಥಾನಕ್ಕೆ ಶರಣು ಬರುವ ಭಕ್ತರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವುದಕ್ಕಾಗಿ ಗೋಪುರವನ್ನು ಕಟ್ಟಿಕೊಳ್ಳುತ್ತೇವೆ. ಯಾಕೆಂದರೆ ದೇವರಿಗೆ ಶರಣು ಬರುವುದು ಆತೊ¾àದ್ಧಾರದ ಮಾರ್ಗ ಎಂದು ಹೊಸನಗರ ಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಶೀರ್ವಚನದಲ್ಲಿ ತಿಳಿಸಿದರು.

Advertisement

ಪೂಜ್ಯರು ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ಜರಗಿದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕೊನೆಯ ದಿನದಂದು ಸಮಾರೋಪ ಸಮಾರಂಭದಲ್ಲಿ ಭಕ್ತರನ್ನು ಅನುಗ್ರಹಿಸಿ ಮಾತನಾಡಿದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟೀಲು ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಲಕ್ಷಿ$¾àನಾರಾಯಣ ಆಸ್ರಣ್ಣ ವಹಿಸಿದರು.ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಪ್ರಾಂತ್ಯ ಅಧ್ಯಕ್ಷ ಯಂ.ಬಿ.ಪುರಾಣಿಕ್‌ ಧಾರ್ಮಿಕ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕೇರಳ ಸರಕಾರದ ಸ್ಥಳೀಯಾಡಳಿತ ವಿಭಾಗದ ಸ್ಪೆಷಲ್‌ ಸೆಕ್ರೆಟರಿ ಕೆ.ಗೋಪಾಲಕೃಷ್ಣ ಭಟ್‌ ಮತ್ತು ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್‌ ಕುಮಾರ್‌ ಕಲ್ಕೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಿ. ಕೃಷ್ಣ ಭಟ್‌ ದೊಡ್ಡಮಾಣಿ ಸ್ವಾಗತಿಸಿದರು. ಕಾರ್ಯದರ್ಶಿ ಎಚ್‌.ಶಂಕರನಾರಾಯಣ ಭಟ್‌ ವಂದಿಸಿದರು. ನೀನಾಸಂ ಕಲಾವಿದ ಮಂಜುನಾಥ್‌ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಸಮಾರೋಪ ಸಮಾರಂಭದ ಬಳಿಕ ರಾತ್ರಿ ಮಹಾಪೂಜೆ, ಶ್ರೀ ಭೂತಬಲಿ ಉತ್ಸವ, ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆದವು. ಬ್ರಹ್ಮವಾಹಕರಾಗಿ ಶ್ರೀ ಕೇಶವ ಅಡಿಗ ಕುಂಬಳೆ ಶ್ರಿ àಭೂತಬಲಿ ಉತ್ಸವವನ್ನು ನೆರವೇರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next