Advertisement
ಅ.8 ರಂದು ಬರೋಡಾ ಅಲ್ಕಾಪುರದ ಗುಜರಾತ್ ಬಿಲ್ಲವ ಸಂಘದ ಬೈದಶ್ರೀ ಸಾಂಸ್ಕೃತಿಕ ಕೇಂದ್ರದ ಸಭಾಗೃಹದಲ್ಲಿ ಗುಜರಾತ್ ಬಿಲ್ಲವ ಸಂಘವು ಆಯೋಜಿಸಿದ್ದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮುಖವಾಣಿ ಅಕ್ಷಯ ಮಾಸಿಕದ 30ನೇ ಹುಟ್ಟುಹಬ್ಬ ಮತ್ತು ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿ ಶುಭಹಾರೈಸಿದರು.
Related Articles
Advertisement
ಸಮಾರಂಭದಲ್ಲಿ ದಯಾನಂದ ಬೋಂಟ್ರಾ ದಂಪತಿಗೆ ಸಮಾಜ ಸಾಧಕ ರತ್ನ ಬಿರುದು ಪ್ರದಾನಿಸಿ ಅತಿಥಿಗಳು ಗೌರವಿಸಿದರು. ಗುಜರಾತ್ ಬಿಲ್ಲವರ ಸಂಘದ ಸ್ಥಾಪಕ ಸಂಚಾಲಕ ಎಸ್ಕೆ ಹಳೆಯಂಗಡಿ, ಎಂ. ಎಸ್. ರಾವ್ ಅಹ್ಮದಾಬಾದ್, ಅಸೋಸಿಯೇಶನ್‌ನ ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ವಿಶ್ವನಾಥ ಜಿ. ಅಮೀನ್, ಕೆ. ಎಸ್. ಅಂಚನ್, ವಿಶ್ವನಾಥ ಪೂಜಾರಿ, ಸುಮನ್ ಕೋಡಿಯಾಲ್‌ಬೈಲ್, ವಾಸು ಸುವರ್ಣ, ಮಹಿಳಾಧ್ಯಕ್ಷೆ ಸರಿತಾ ಸೋಮನಾಥ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಶ್ರೀನಿವಾಸ ಆರ್. ಕರ್ಕೇರ, ದಯಾನಂದ ಆರ್. ಪೂಜಾರಿ, ಮೋಹನ್ ಡಿ. ಪೂಜಾರಿ, ಅಶೋಕ್ ಕುಕ್ಯಾನ್, ಎಸ್. ಕೆ ಸುಂದರ್ ಮುಂಬಯಿ, ಅಕ್ಷಯ ಮಂಡಳಿಯ ಸತೀಶ್ ಎನ್. ಬಂಗೇರ, ಜಯರಾಮ ಜಿ. ನಾಯಕ್, ಕುಸುಮಾ ಸಿ. ಪೂಜಾರಿ, ಸದಾನಂದ ಅಮೀನ್ ಉಡುಪಿ, ಕೃಷ್ಣ ಅಂಚನ್, ಪ್ರಭಾಕರ್ ಪೂಜಾರಿ ಸೂರತ್, ವಿ. ಡಿ. ಅಮೀನ್, ಸದಾಶಿವ ಪೂಜಾರಿ ವಾಪಿ, ತುಳು ಸಂಘ ಬರೋಡಾ ಸಂಚಾಲಕ ಜಯರಾಮ ಶೆಟ್ಟಿ, ಗುಜರತ್ ಬಿಲ್ಲವರ ಕೋಶಾಧಿಕಾರಿ ಜಿನರಾಜ್ ಪೂಜಾರಿ, ಸೇರಿದಂತೆ ಸಂಘದ ಪದಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಸದಸ್ಯರು ಉಸ್ಥಿತರಿದ್ದು ಅವರನ್ನು ಪದಾಧಿಕಾರಿಗಳು ಗೌರವಿಸಿದರು.
ಗುಜರಾತ್ ಬಿಲ್ಲವ ಸಂಘದ ಸದಸ್ಯೆಯರು ಪ್ರಾರ್ಥನೆಗೈದರು. ಅಸೋಸಿಯೇಶನ್‌ನ ಗೌ. ಪ್ರ. ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಪ್ರಸ್ತಾವನೆಗೈದರು. ಗುಜರತ್ ಬಿಲ್ಲವರ ಗೌ. ಪ್ರ. ಕಾರ್ಯದರ್ಶಿ ವಾಸು ವಿ. ಸುವರ್ಣ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅಕ್ಷಯದ ಬೆಳವಣಿಗೆ ಬಗ್ಗೆ ತಿಳಿಸಿದರು. ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ ಪುರಸ್ಕೃತರ ಪರಿಚಯಗೈದರು. ರಂಗನಿರ್ದೇಶಕ ಸಾ. ದಯಾ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಗುಜರತ್ ಬಿಲ್ಲವರ ಮಹಿಳಾಧ್ಯಕ್ಷೆ ಸರಿತಾ ಸೋಮನಾಥ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಬಳಗದಿಂದ “ಸಮುದ್ರ ಮಥನ’ ಹರಿಕಥೆ ಕಾಲಕ್ಷೇಪ ನಡೆಯಿತು.
ಬಿಲ್ಲವರ ಅಸೋಸಿಯೇಶನ್ ಲಕ್ಷಾಂತರ ಜನರಿಗೆ ದಾರಿದೀಪವಾದ ಮಹಾನ್ ಸಂಸ್ಥೆ. 110 ವರ್ಷಗಳ ಮೂಲ ಹೊಂದಿದ ಚತುರ್ ಸಂಸ್ಥೆಗಳ ಒಗ್ಗಟ್ಟಿನಿಂದ ಹುಟ್ಟಿದ ಸಂಸ್ಥೆ ಇದಾಗಿದೆ. ಈ ಸಂಸ್ಥೆಯ ಮುಖವಾಣಿ ಅಕ್ಷಯ ಓದುಗರ ಪಾಲಿನ ಅಕ್ಷಯ ಪಾತ್ರೆಯಂತಿದೆ. ಸರ್ವ ಧರ್ಮ ಸಮನ್ವಯಕವಾಗಿ ಬೆಳೆದು ಓದುಗರಿಂದಲೇ ಮಾನ್ಯತೆ ಪಡೆದ ಈ ಪತ್ರಿಕೆ ನೂರಾರು ಕಾಲ ಪ್ರಕಾಶಿಸಲಿ– ಜಯ ಸಿ. ಸುವರ್ಣ (ಅಧ್ಯಕ್ಷರು: ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ). ಅಕ್ಷಯ ಎಂಬ ಶಬ್ದದಲ್ಲಿ ವಿಶೇಷತೆ ಇದೆ. ಅಕ್ಷಯ ಎಂದರೆ ಕೊನೆಯಲ್ಲದ್ದು. ಈ ಆಶ್ರಯವು ಭಾರತದಾದ್ಯಂತ ತಮ್ಮ ಕದಂಬ ಬಾಹುಗಳನ್ನು ಹರಡಲಿ. ಪತ್ರಿಕೆ ಬೆಳೆಸುವುದು ಸಾಮಾನ್ಯ ಸಂಗತಿಯಲ್ಲ, ಅದರ ಹಿಂದಿರುವ ಪರಿಶ್ರಮದ ಸ್ಮರಣೆಯ ಅಗತ್ಯವಿದೆ
– ಕೃಷ್ಣ ಆಚಾರ್ಯ (ಆಧ್ಯಾತ್ಮಿಕ ಚಿಂತಕ). ಅಕ್ಷಯದ ಸಾಧನೆ ಅಸಮಾನ್ಯವಾದದ್ದು. ಮೂರು ದಶಕಗಳ ಮುನ್ನಡೆಯೇ ಇದರ ಸಾಧನೆಯ ಹೆಜ್ಜೆಗಳಾಗಿವೆ. ಈ ಪತ್ರಿಕಾ ಮಂಡಳಿಯ ಕಾರ್ಯಶೈಲಿಯೇ ಇದರ ಯಶಸ್ಸಿನ ಗುಟ್ಟಾಗಿದೆ
– ಶಶಿಧರ ಶೆಟ್ಟಿ ( ಅಧ್ಯಕ್ಷರು: ತುಳು ಸಂಘ ಬರೋಡಾ). ಚಿತ್ರ-ವರದಿ: ರೋನ್ಸ್ ಬಂಟ್ವಾಳ್