Advertisement

ಯೂಟ್ಯೂಬರ್ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಕ್ಷಯ್ ಕುಮಾರ್

07:43 PM Nov 19, 2020 | Mithun PG |

ಮುಂಬೈ: ಬಾಲಿವುಡ್ ನಟ  ಅಕ್ಷಯ್ ಕುಮಾರ್, ಬಿಹಾರದ ಯೂಟ್ಯೂಬರ್ ವಿರುದ್ಧ 500 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ  ತನ್ನ ಹೆಸರನ್ನು  ಸುಖಾಸುಮ್ಮನೆ ಎಳೆದುತಂದದಕ್ಕಾಗಿ ಅಕ್ಷಯ್ ಕುಮಾರ್ ಮೊಕದ್ದಮೆ ದಾಖಲಿಸಿದ್ದಾರೆಂದು ವರದಿಯಾಗಿದೆ.

Advertisement

ರಷೀದ್ ಸಿದ್ದಿಕಿ ಎಂಬ ಬಿಹಾರದ ಯೂಟ್ಯೂಬರ್ ಸುಶಾಂತ್ ಪ್ರಕರಣದಲ್ಲಿ ನಕಲಿ ಸುದ್ದಿಯನ್ನು ಹರಡಿದ್ದು ಮಾತ್ರವಲ್ಲದೆ, ತನ್ನ ವಿರುದ್ಧ ಸತ್ಯಕ್ಕೆ ದೂರವಾದ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಹಲವಾರು ಬಾರಿ ‘ಅಕ್ಷಯ್’ ಎಂದು ಹೆಸರಿಸಿ ಜನರನ್ನು ದಾರಿತಪ್ಪಿಸಿದ ಕಾರಣಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಅಕ್ಷಯ್ ತಿಳಿಸಿದ್ದಾರೆ.

ಸುಶಾಂತ್ ಪ್ರಕರಣದಲ್ಲೇ ನಕಲಿ ಸುದ್ದಿ ಹರಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ಹೆಸರನ್ನು ಎಳೆದಿದ್ದಕ್ಕಾಗಿ ರಶೀದ್ ಸಿದ್ದಿಕಿರನ್ನು ಈ ಹಿಂದೆ ಬಂಧಿಸಲಾಗಿತ್ತು

ಡಿಜಿಟಲ್ ಮಾಧ್ಯಮವನ್ನು ಬಳಸಿಕೊಂಡು ಜನಪ್ರಿಯ ವ್ಯಕ್ತಿಗಳ ವಿರುದ್ಧವಾಗಿ ನಕಲಿ ಸುದ್ದಿಗಳನ್ನು ರಶೀದ್ ಸಿದ್ದಿಕಿ ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ವಿಡಿಯೋದಲ್ಲಿ ಸುಶಾಂತ್ ಅವರು “ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ” ನಂತಹ ದೊಡ್ಡ ಚಿತ್ರದಲ್ಲಿ ನಟಿಸಿದ್ದು ಅಕ್ಷಯ್ ಅಸಮಾಧಾನ ಹೊಂದಿದ್ದರು ಎಂದು ಸಿದ್ದಿಕಿ ಹೇಳಿದ್ದಾರೆ. ಅಲ್ಲದೆ ಅಕ್ಷಯ್ ಕುಮಾರ್ ಅವರು ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರೊಂದಿಗೆ “ರಹಸ್ಯ ಸಭೆ” ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ : ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಿಗೆ ಕೋವಿಡ್ ಪಾಸಿಟಿವ್

Advertisement

ಮಾತ್ರವಲ್ಲದೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಕೆನಾಡಕ್ಕೆ ತೆರಳಲು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದರು ಎಂದು ವಿಡಿಯೋವೊಂದರಲ್ಲಿ ತಿಳಿಸಿದ್ದರು.

ರಶೀದ್ ಸಿದ್ದಿಕಿ ಕಳೆದ 4 ತಿಂಗಳಲ್ಲಿ 15 ಲಕ್ಷ ಸಂಪಾದಿಸಿದ್ದು, ಸಬ್ ಸ್ಕ್ರೈಬರ್ ಗಳ ಸಂಖ್ಯೆ ಕೂಡ ಲಕ್ಷಗಟ್ಟಲೇ ಏರಿಕೆಯಾಗಿತ್ತು ಎಂದು ವರದಿಯಾಗಿದೆ.

ರಶೀದ್ ಸಿದ್ದಿಕಿ ಬಿಹಾರದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಮಾನನಷ್ಟ ಮೊಕದ್ದಮೆ, ಸಾರ್ವಜನಿಕರನ್ನು ದಾರಿತಪ್ಪಿಸಿರುವುದು, ಉದ್ದೇಶಪೂರ್ವಕ ಅವಮಾನ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಇದನ್ನೂ ಓದಿ :  ಕಾಣೆಯಾದ 76 ಮಕ್ಕಳನ್ನು ಪತ್ತೆಹಚ್ಚಿ ವಿಶೇಷ ಭಡ್ತಿ ಪಡೆದ ಮೊದಲ ಪೊಲೀಸ್ ಹೆಡ್ ಕಾನ್ಸ್ ಟೇಬಲ್

Advertisement

Udayavani is now on Telegram. Click here to join our channel and stay updated with the latest news.

Next