ಮುಂಬಯಿ: ಬಾಲಿವುಡ್ ನ ʼಕಿಲಾಡಿʼ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಕಳೆದ ಕೆಲ ಸಮಯದಿಂದ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಸದ್ದು ಮಾಡಿಲ್ಲ. ಇತ್ತೀಚೆಗೆ ತೆರೆಕಂಡ ʼಸೆಲ್ಫಿʼ ಸಿನಿಮಾ ಕೂಡ ನಿರೀಕ್ಷಿತ ಮಟ್ಟದ ಆರಂಭವನ್ನು ಪಡೆದುಕೊಂಡಿಲ್ಲ.
ಒಂದು ಕಾಲದಲ್ಲಿ ವರ್ಷಕ್ಕೆ 3-4 ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದ ಅಕ್ಷಯ್ ಕುಮಾರ್ ಈಗ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ‘ರಾಮ್ ಸೇತುʼ,ʼರಕ್ಷಾ ಬಂಧನ್ʼ, ʼಸೂರ್ಯವಂಶಿʼ ,ʼ ಕಟ್‌ಪುಟ್ಲಿʼ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ದೊಡ್ಡ ಕಮಾಯಿಯನ್ನು ಮಾಡಿಲ್ಲ.
ಹಾಗಾದರೆ ಈ ಸೋಲುಗಳಿಗೆ ಕಾರಣಗಳೇನು ಮತ್ತು ಯಾರು ಎನ್ನುವುದನ್ನು ನಟ ಅಕ್ಷಯ್ ಕುಮಾರ್ ಅವರೇ ಹೇಳಿದ್ದಾರೆ. ಈ ʼಆಜ್‌ತಕ್ʼ ಜೊತೆ ಮಾತನಾಡಿರುವ ಅವರು, “ಇದು ಮೊದಲ ಬಾರಿಯಲ್ಲ. ನಾನು ನನ್ನ ಕೆರಿಯರ್ ನಲ್ಲಿ16 ಸೋಲುಗಳನ್ನು ಕಂಡಿದ್ದೇನೆ. ಒಂದು ಸಮಯದಲ್ಲಿ ನನ್ನ 8 ಚಿತ್ರಗಳು ಸೋಲು ಕಂಡಿದ್ದವು. ಈಗ 3-4 ಸಿನಿಮಾಗಳು ಸೋಲು ಕಂಡಿವೆ. ನನ್ನ ತಪ್ಪಿನಿಂದಲೇ ಇದು ಆಗಿದೆ” ಎಂದು ಹೇಳಿದ್ದಾರೆ.
ಪ್ರೇಕ್ಷಕರು ಬದಲಾಗಿದ್ದಾರೆ. ನಾವು ಬದಲಾಗಬೇಕು. ನಾನು ಮತ್ತೆ ಶುರುವಿನಿಂದ ಆರಂಭಿಸಬೇಕು.ಏಕಂದರೆ ಜನ ಹೊಸದನ್ನು ನೋಡಲು ಬಯಸಿದ್ದಾರೆ. ಸಿನಿಮಾ ಓಡದೆ ಇದ್ದರೆ ಅದಕ್ಕೆ ಪ್ರೇಕ್ಷಕರು ಕಾರಣವಲ್ಲ. ಅದನ್ನು ಆಯ್ದುಕೊಂಡ ನಾನೇ ಕಾರಣವೆಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
Related Articles
ಸದ್ಯ ಅಕ್ಷಯ್ ಕುಮಾರ್ ʼ ಕ್ಯಾಪ್ಸುಲ್ ಗಿಲ್ʼ, ʼ ಓ ಮೈ ಗಾಡ್ -2ʼ ʼಸೂರರೈ ಪೋಟ್ರುʼ ಸಿನಿಮಾದ ಹಿಂದಿ ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.